ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಶಾಸಕರ ಮನೆ ಮುಂದೆ ಪ್ರತಿಭಟನೆ

ಕೊಪ್ಪಳ : ಶಾಲಾ ಘಂಟೆ ಬಾರಿಸಿ ಪ್ರತಿಭಟಿಸುವ ಮೂಲಕ ಶಾಸಕರನ್ನು ಎಬ್ಬಿಸುವ ಕಾರ್ಯ ಎಂಬ ಘೋಷಣೆಯೊಂದಿಗೆ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಸದಸ್ಯರು, ಪದಾಧಿಕಗಳು ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಿದರು.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಾದ ಕೊಪ್ಪಳ, ಬಳ್ಳಾರಿ, ವಿಜಯನಗರ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ ಈ ಜಿಲ್ಲೆಗಳಲ್ಲಿರುವ ಖಾಸಗಿ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳಿಗೆ ೧೯೯೫ ರಿಂದ ೨೦೧೫ ರವರೆಗೆ ವೇತನಾನುದಾನವನ್ನು ಹಾಗೂ ಸಂವಿಧಾನದ ೩೭೧-ಜೆ ಕಲಂನ ಪ್ರಕಾರ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಹಾಗೂ ಕಲ್ಯಾಣ ಕರ್ನಾಟಕದ ಕಾರ್ಯಕಾರಿ ಮಂಡಳಿಯು ಪೂರ್ಣಪ್ರಮಾಣದಲ್ಲಿ ಅತಿಶೀಘ್ರವಾಗಿ ರಚನೆಮಾಡಬೇಕೆಂದು ಆಗ್ರಹಿಸಿ ಹಲವಾರು ಬಾರಿ ಮನವಿ ಮಾಡಿದ್ದರೂಈ ಸಹ ೭ ಜಿಲ್ಲೆಯ ಶಾಸಕರು ಇದುವರೆಗೆ ಕಾಳಜಿ ವಹಿಸುತ್ತಿಲ್ಲ ಹೀಗಾಗಿ ಇಂದು ಕಲ್ಯಾಣ ಕರ್ನಾಟಕ ಸಂಘಟನೆಯ ಮೂಲಕ ಶಾಲಾ ಘಂಟೆ ಬಾರಿಸಿ ಪ್ರತಿಭಟಿಸುವ ಮೂಲಕ ಶಾಸಕರನ್ನು ಎಬ್ಬಿಸುವ ಕಾರ್ಯ ಎಂಬ ಘೋಷಣೆಯೊಂದಿಗೆ ಶಾಸಕರ ಮನೆಯ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಪ್ರತಿಭಟನೆಯ ನಂತರ ಶಾಸಕರಿಗೆ ಮನವಿಪತ್ರ ಸಲ್ಲಿಸಲಾಯಿತು. ನಂತರ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯದಲ್ಲಿಯೂ ಸಹ ಮನವಿ ಪತ್ರ ಸಲ್ಲಿಸಲಾಯಿತು.
ಶೀಘ್ರವಾಗಿ ಸದನದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕೆಂದು ಹಾಗೂ ಮುಂಬರುವ ಬಜೆಟ್‌ನಲ್ಲಿ ನಮ್ಮ ಎಲ್ಲಾ ಬೇಡಿಕೆಗಳು ಈಡೇರಿಸಲು ತಾವು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇಲ್ಲವಾದಲ್ಲಿ ಕೆ.ಕೆ.ಆರ್.ಡಿ.ಬಿ. ಮುಂದೆ ಉಗ್ರವಾದ ಹೋರಾಟ ಹಾಗೂ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ತಾಲೂಕಾ ಕಾರ್ಯದರ್ಶಿ ನಾಗರಾಜ ಗುಡಿ, ತಾಲೂಕಾ ಅಧ್ಯಕ್ಷರು, ಶಾಹಿದ್ ತಹಶೀಲ್ದಾರ ಜಿಲ್ಲಾ ಕಾನೂನು ಸಲಹೆಗಾರರಾದ ಮೊಹಮ್ಮದ್ ಅಲೀಮುದ್ದೀನ್, ಶಿವನಗೌಡ ಪೊಲೀಸ್ ಪಾಟೀಲ್, ವೀರಣ್ಣ ಕಂಬಳಿ, ಎ.ಎಚ್.ಅತ್ತನೂರು, ರಾಘವೇಂದ್ರ ಉಪಾಧ್ಯಾಯ, ಶಿವಾನಂದ ಯಲ್ಲಮ್ಮನವರ, ಶರಣಪ್ಪ ಸಜ್ಜನ, ಮುಸ್ತಫಾ ಹುಡೇದ, ಭೀಮಪ್ಪ ವಾಲಿಕಾರ, ಸುರೇಶಕುಮಾರ, ರಮೇಶ ಹೊಳೆಯಾಚೆ ಹಾಗೂ ಶಿಕ್ಷಕ ಶಿಕ್ಷಕಿಯರು ಮತ್ತಿತರರು ಭಾಗವಹಿಸಿದ್ದರು.

Please follow and like us:
error