ಅನಾಮಧೇಯ ವ್ಯಕ್ತಿಯ ಶವ ಪತ್ತೆ: ಗುರುತು ಪತ್ತೆಗೆ ಮನವಿ


ಕೊಪ್ಪಳ, ): ಮುನಿರಾಬಾದ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಪುರದ ಕೆರೆಯ ಹಿನ್ನೀರಿನಲ್ಲಿ ನವೆಂಬರ್.29 ರಂದು ಅಂದಾಜು 45-50 ವರ್ಷ ವಯಸ್ಸಿನ ಅನಾಮಧೇಯ ವ್ಯಕ್ತಿಯ ಶವವು ಪತ್ತೆಯಾಗಿದೆ.
ಮೃತ ವ್ಯಕ್ತಿಯ ಚಹರೆ: ವ್ಯಕ್ತಿಯು 5.2 ಅಡಿ ಎತ್ತರವಿದ್ದು, ಅರ್ಧ ತಲೆ ಬೋಳಾಗಿದೆ. ಶವದ ಮೈಮೇಲೆ ಬಾದಾಮಿ ಬಣ್ಣದ ತುಂಬು ತೋಳಿನ ಶರ್ಟ್, ಬಿಳಿ ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಡಿ.ಎಸ್.ಪಿ ಕಂಪನಿಯ ಬನಿಯನ್, ಕೆಂಪು ಬಣ್ಣದ ಅಂಡರ್‌ವೇರ್ ಇದ್ದು, ದೇಹ ಡಿ-ಕಾಂಪೋಸ್ ಆಗಿದ್ದು, ಸುಮಾರು 8-10 ದಿನಗಳ ಹಿಂದೆಯೇ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯಲ್ಲಿ ಬಿದ್ದಿರುವ ಸಂಶಯವಿದೆ.
ವ್ಯಕ್ತಿಯ ಸಂಬAಧಿಕರು, ವಾರಸುದಾರರು ಇದ್ದಲ್ಲಿ ಕೊಪ್ಪಳ ಎಸ್.ಪಿ.ಕಚೇರಿ ದೂ.ಸಂ: 08539-230111, ಡಿ.ಎಸ್.ಪಿ 08539-222433, ಸಿ.ಪಿ.ಐ ಗ್ರಾಮೀಣ ವೃತ್ತ 08539-221333, ಪಿ.ಎಸ್.ಐ ಮುನಿರಾಬಾದ 08539-270333 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಮುನಿರಾಬಾದ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು   ಕೋರಿದ್ದಾರೆ.

Please follow and like us:
error