ಅನಕ್ಷರಸ್ಥ ವಯಸ್ಕರಿಗೆ ಶಿಕ್ಷಣ ನೀಡುವ ಅವಶ್ಯ-ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಕೆ. ಮಧುಪ್ರಸಾದ

ಕೊಪ್ಪಳ,೦೩- ದೇಶದಲ್ಲಿ ಅನಕ್ಷರಸ್ಥ ವಯಸ್ಕರಿಗೆ ಶಿಕ್ಷಣ ನೀಡುವ ಅವಶ್ಯವಿದ್ದು ಈ ನಿಟ್ಟಿನಲ್ಲಿ ಶ್ರಮಿಸಲು ರೋಟರಿ ಕ್ಲಬ್ ಚಿಂತನೆ ನೆಡೆಸಿದ್ದು ಆಸಕ್ತರು ಶ್ರಮಿಸುವಂತೆ ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಕೆ. ಮಧುಪ್ರಸಾದ ಹೇಳಿದರು.
ಅವರು ಕೊಪ್ಪಳ ನಗರದ ನಿವೇದಿತಾ ಶಾಲೆಯಲ್ಲಿ ರೋಟರಿ ಕ್ಲಬ್ ಕೊಪ್ಪಳ,ಕೊಪ್ಪಳ ತಾಲೂಕ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಮತ್ತು ರೋಟ್ರ್ಯಕ್ಟ ಕ್ಲಬ್ ಇವರ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಕೊಪ್ಪಳ ತಾಲೂಕಿನ ಖಾಸಗಿ ಶಾಲಾ ಮಕ್ಕಳ ಉಚಿತ ನೇತ್ರ ತಪಾಸಣಾ ಶಿಬಿರ ಉದ್ಘಾಟಸಿ ಮಾತನಾಡುತ್ತಿದ್ದರು.
ಕೊಪ್ಪಳದಲ್ಲಿಯೂ ಸಹ ಅನಕ್ಷರಸ್ಥ ವಯಸ್ಕರಿದ್ದು ಅವರ ದಿನ ನೀತ್ಯದ ವ್ಯವಹಾರಕ್ಕಾಗಿ ಹಾಗೂ ದಿನನಿತ್ಯದ ಪತ್ರಿಕೆ ಹಾಗೂ ಸಾಮಾನ್ಯ ಜ್ಞಾನ ತಿಳಿಯಲು ಅಕ್ಷರ ಕಲಿಸುವುದು ಅಗತ್ಯವಾಗಿದ್ದು ಖಾಸಗಿ ಶಾಲೆಗಳು ಸಹ ಕೈ ಜೋಡಿಸುವಂತೆ ಮನವಿ ಮಾಡಿದರು.
ಕೊಪ್ಪಳ ತಾಲೂಕಿನ ೮೯ ಖಾಸಗಿ ಶಾಲೆಗಳಲ್ಲಿ ೧೮ ಸಾವಿರ ಮಕ್ಕಳ ಉಚಿತ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಂಡಿರುವ ಕೊಪ್ಪಳ ರೊಟರಿ ಕ್ಲಬ್ ಕಾರ್ಯಕ್ರಮ ಅತ್ಯಂತ ಪ್ರಶಂಶನಿಯ ಹಾಗೂ ರಜ್ಯದಲ್ಲಿ ಇಷ್ಟುಪ್ರಮಾಣದ ಮಕ್ಕಳ ಉಚಿತ ತಪಾಸಣೆ ಇದೇ ಮೊದಲು ಎಂದರು.
ರೋಟರಿ ಕ್ಲಬ್ ಸಮಾಜ ಮುಖ್ಯ ಕೆಲಸಗಳನ್ನು ನಿರಂತರವಗಿ ಮಾಡುತ್ತಾ ಬಂದಿದ್ದು ಆರೋಗ್ಯ ಜಾಗೃತಿ, ಆರೋಗ್ಯ ತಪಾಸಣೆ ಸಸಿ ನೆಡುವುದು ಸೇರಿದಂತೆ ವಿವಿಧ ಕಾರ್ಯಕ್ರಮದ ಮೂಲಕ ಸಮಾಜದ ಕೊಡುಗೆ ನೀಡಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕುಸುಮಾ ಹೈ.ಕ ಅಧ್ಯಕ್ಷ ರಾಘವೇಂದ್ರ ಪಾನಘಂಟಿ ಮಾತನಾಡಿ ಖಾಸಗಿ ಶಾಲೆಗಳಿಗೆ ರೋಟರಿ ಕ್ಲಬ್ ಉಚಿತ ನೇತ್ರ ತಪಾಸಣೆ ಮಾಡಿತ್ತಿರುವ ಕಾರ್ಯ ಶ್ಲಾಘನೀಯವಾದದ್ದು ಎಲ್ಲ ಯೋಚನೆಗಳು ಸರ್ಕಾರ ಶಾಲೆಗಳಿಗೆ ಮಾತ್ರ ಮಿಸಲಾಗಿದ್ದು ರೋಟರಿ ಕ್ಲಬ್ ಖಾಸಗಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಪ್ರಶಂಸನೀಯವೆದಂರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಕೊಪ್ಪಳ ರೊಟರಿ ಕ್ಲಬ್ ಅಧ್ಯಕ್ಷ ಲಕ್ಷ್ಮಿಕಾಂತ ಗುಡಿ ವಹಿಸಿದ್ದರು, ವೇದಿಕೆ ಮೇಲೆ ರೋಟಿರಿ ಕ್ಲಬ್ ಎಜಿ ಮಾರುತಿರಾವ್, ಡಾ|| ಕೆ.ಜಿ ಕುಲಕರ್ಣಿ, ಕುಸುಮಾ ತಾಲೂಕಾದ್ಯಕ್ಷ ಮಹ್ಮದ್ ಅಲಿಮುದ್ದಿನ್, ಶಾಲಾ ಕಾರ್ಯದರ್ಶಿ ವೆಂಕಟೇಶ ಪುಲಸ್ಕರ್, ರೊಟರಿ ಕಾರ್ಯದರ್ಶಿ ಮಂಜುನಾಥ ಆಂಗಡಿ, ವಾಸನ್ ಐ ಕೇರ್‌ನ ಡಾ|| ಹನೀಫ್, ಶ್ರೀಮತಿ ಶಾರದಾಬಾಯಿ ಪುಲಸ್ಕರ್ ಇತರರು ವೇದಿಕೆ ಮೇಲಿದ್ದರು.
ಪ್ರಾರಂಭದಲ್ಲಿ ಡಾ|| ಶ್ರೀನಿವಾಸ ಹ್ಯಾಟಿ ಎಲ್ಲರನ್ನು ಸ್ವಾಗತಿಸಿದರು, ಡಾ|| ಸಿ.ಎಸ್. ಕರಮುಡಿ ಪ್ರಾಸ್ತಾವಿಕವಾಗಿ ಮತನಾಡಿದರು. ಕೊನೆಯಲ್ಲಿ ಹುಲಿಕಪ್ಪ ಕಟ್ಟಿಮನಿ ವಂದಿಸಿದರು.