ಅಡವಿಹಳ್ಳಿ ಗ್ರಾಮವನ್ನು ಮಾದರಿ ಗ್ರಾಮವಾಗಿ ಪರಿವರ್ತಿಸುವ ಭೂಮಿ ಪೂಜಾ ಕಾರ್ಯಕ್ರಮ 

ಪ್ರಸಕ್ತ ವರ್ಷ ಕೋವಿಡ್-೧೯ರ ನಿಯಮಾವಳಿಗಳನ್ನು ಅನುಸರಿಸಿ ೨೦೨೧ರ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವವನ್ನು ಸರಳ ಜಾತ್ರೆ ಆಚರಣೆ, ಸಮಾಜಮುಖಿ ಸೇವೆಗೆ ಅರ್ಪಣೆ ಎನ್ನುವ ಸಂಕಲ್ಪದೊಂದಿಗೆ ದಿನಾಂಕ: ೩೦.೦೧.೨೦೨೧ರಂದು ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವವನ್ನು ಸರಳವಾಗಿ ಆಚರಿಸಲಾಯಿತು.

ಜಾತ್ರೆಯ ಸಂಭ್ರಮ ಕಡಿಮೆಯಾದರೂ ಸಮಾಜಸೇವೆಯ ಸಂಭ್ರಮ ನಿರಂತವಾಗಿರಬೇಕು. ಸತ್ಕಾರ್ಯಗಳು ಸಂಪ್ರದಾಯವಾಗಬೇಕು ಎನ್ನುವ ಧ್ಯೇಯ ವಾಕ್ಯದೊಂದಿಗೆ ೧) ಶ್ರೀ ಗವಿಸಿದ್ಧೇಶ್ವರ ಸ್ಪರ್ಧಾತ್ಮಕ ಪರೀಕ್ಷಾ ಗ್ರಂಥಾಲಯ ೨) ಗಿಣಗೇರಿ ಕೆರೆಯ ಸ್ವಚ್ಚತೆ ಮತ್ತು ಸಂರಕ್ಷಣೆ ೩) ಅಡವಿಹಳ್ಳಿಮಾದರಿ ಗ್ರಾಮಗಳಂತಹ ಮೂರು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಅನುಷ್ಠಾನಗೋಳಿಸುವ ಪ್ರಕ್ರಿಯೆಯಲ್ಲಿ ಶ್ರೀ ಗವಿಮಠವು ನಿರತವಾಗಿದೆ. ಈಗಾಗಲೆ ೧) ಶ್ರೀ ಗವಿಸಿದ್ಧೇಶ್ವರ ಸ್ಪರ್ಧಾತ್ಮಕ ಪರೀಕ್ಷಾ ಗ್ರಂಥಾಲಯ ದಿನಾಂಕ: ೩೦.೦೧.೨೦೨೧ ರಂದು ಸಾರ್ವಜನಿಕರ ಸೇವೆಗೆ ಸಮರ್ಪಣೆಗೊಂಡಿದೆ ೨) ಗಿಣಗೇರಿ ಕೆರೆಯ ಸ್ವಚ್ಚತೆ ಮತ್ತು ಸಂರಕ್ಷಣೆ ಸಂಕಲ್ಪವು ದಿನಾಂಕ: ೨೧.೦೨.೨೦೨೧ರಂದು ಕೆರೆ ಸ್ವಚ್ಛತೆ ಕಾರ್ಯಕ್ರಮ ಚಾಲನೆಗೊಂಡಿದೆ . ಈಗಾಗಲೇ ಈ ಎರಡು ಸಂಕಲ್ಪಗಳ ಚಾಲನಾ ಕಾರ್ಯಗಳು ಉದ್ಘಾಟನೆಯಾಗಿದ್ದು ಮೂರನೇ ಸಂಕಲ್ಪವಾಗಿರುವ ಅಡವಿಹಳ್ಳಿ ಗ್ರಾಮವನ್ನು ಮಾದರಿ ಗ್ರಾಮವಾಗಿ ಪರಿವರ್ತಿಸುವ ವಿಶೇಷ ಯೋಜನೆಯನ್ನು ಗ್ರಾಮೋದ್ಧಾರ-ದೇಶೋದ್ಧಾರ ಸಮೃದ್ಧ ಹಳ್ಳಿ ನಿರ್ಮಾಣಕ್ಕೆ ಒತ್ತು… ಪಡಿಯೋಣ ಅಡವಿಹಳ್ಳಿದತ್ತು… ಎನ್ನುವ ಧ್ಯೇಯ ವಾಕ್ಯದೊಂದಿಗೆ ಅಡವಿಹಳ್ಳಿಯ ಸರ್ವತೋಮುಖ ಬೆಳವಣಿಗೆಯ ಕಾರ್ಯಕ್ರಮಗಳನ್ನು ಶ್ರೀ ಮುಕಂದ ಸುಮಿ ವಿಶೇಷ ಸ್ಟೀಲ್ ಪ್ರಾವೇಟ್ ಲಿಮಿಟೆಡ್ ಹಾಗೂ ಸರ್ವೊದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕೊಪ್ಪಳ ಇವರ ಸಹಬಾಗಿತ್ವದಲ್ಲಿ ಚಾಲನೆ ನೀಡಲು ಸಿದ್ದತೆ ಕೈಗೊಳ್ಳಲಾಗಿದೆ.

ಭಾರತ ಹಳ್ಳಿ-ಹಳ್ಳಿಗರ ದೇಶ, ಭಾರತದ ವಿಕಾಸ ಕೇವಲ ನಗರಗಳಿಂದಲ್ಲ, ನಗರಗಳು ಅಭಿವೃದ್ಧಿಯ ಮೇಲ್ಪದರಿನ ವಿಕಾಸವನ್ನು ಪ್ರತಿನಿಧಿಸಿದರೆ, ಗ್ರಾಮದ ವಿಕಾಸ ಅಭಿವೃದ್ಧಿಯ ಮೂಲ ನೆಲೆಯನ್ನು ಗಟ್ಟಿಗೊಳಿಸುತ್ತವೆ. ಆದರೆ ನಗರ ಕೇಂದ್ರಿತ ಆರ್ಥಿಕ ಚಟುವಟಿಕೆಗಳು ನಗರಗಳನ್ನು ಮಾದರಿ ಗ್ರಾಮಗಳಾಗಿ ಪರಿವರ್ತಿಸುತ್ತಿವೆ. ನಗರದಲ್ಲಿ ಲಭ್ಯವಾಗುವ ಎಲ್ಲಾ ಮೂಲ ಸೌಕರ್ಯಗಳು ಹಳ್ಳಿಯಲ್ಲಿ ದೊರೆಯುವಂತೆ ಮಾಡಿ ಮಾದರಿ ಗ್ರಾಮವಾಗಿ ಪರಿವರ್ತಿಸುವ ಯೋಜನೆಗಳು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಜನ ಪ್ರತಿನಿದಿಗಳ ಅಭಿಪ್ರಾಯದಂತೆ ಶ್ರೀ ಮುಕಂದ ಸುಮಿ ವಿಶೇಷ ಸ್ಟೀಲ್ ಪ್ರಾವೇಟ್ ಲಿಮಿಟೆಡ್ ಹಾಗೂ ಸರ್ವೊದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕೊಪ್ಪಳ.ಹಾಗೂ ಇತರ ಸಂಘ ಸಂಸ್ಥೆಗಳ ಅನುಷ್ಠಾನದ ಸಹಭಾಗಿತ್ವದಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕಟ್ಟ-ಕಡೆ ಹಳ್ಳಿಯಾಗಿರುವ ಅಡವಿಹಳ್ಳಿ ಗ್ರಾಮವನ್ನು ಮಾದರಿ ಗ್ರಾಮವಾಗಿ ಪರಿವರ್ತಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ.
ಮಾದರಿ ಗ್ರಾಮದ ಕಾರ್ಯಕ್ರಮದ ಅಡಿಯಲ್ಲಿ ಅಡವಿಹಳ್ಳಿಯಲ್ಲಿ ಮೂಲಭೂತ ಸೌಲಭ್ಯಗಳ ನಿರ್ಮಾಣ ಆರೋಗ್ಯ, ಶಿಕ್ಷಣ, ಸಾವಯವ ಕೃಷಿ, ಮಹಿಳಾ ಸಬಲೀಕರಣ, ಯುವ ಜನತೆಗೆ ಬೇಕಾಗುವ ಕೌಶಲ್ಯ ಅಭಿವೃದ್ಧಿ ತರಬೇತಿಗಳ ಆಯೋಜನೆ, ಹೊಗೆ ಮುಕ್ತ ಗ್ರಾಮ, ಸೋಲಾರ್ ಶಕ್ತಿಯ ಬಳಕೆ, ಹೈನುಗಾರಿಕೆ, ಕೆರೆ ನಿರ್ಮಾಣ, ಸ್ಮಾರ್ಟ್ ಕ್ಲಾಸ್ ರೂಮುಗಳ ನಿರ್ಮಾಣ, ರಸ್ತೆ, ಚರಂಡಿಗಳ ನಿರ್ಮಾಣ, ಮನೆಗಳ ದುರಸ್ತಿ, ಧಾರ್ಮಿಕ ಕೇಂದ್ರಗಳ ದುರಸ್ತಿ ಹಾಗೂ ಆಧುನಿಕ ಅಭಿವೃದ್ಧಿಯ ಸಂಪರ್ಕ ಸಾಧನಗಳನ್ನು ಒದಗಿಸುವ ಸುಮಾರು ೫೦ ವಿವಿದ ಯೋಜನೆಗಳನ್ನು ರೂಪಿಸಲಾಗಿದೆ ಈ ಎಲ್ಲಾ ಯೋಜನೆಗಳಿಗೆ ಜಿಲ್ಲೆಯ ಎಲ್ಲಾ ಪ್ರಜಾ ಪ್ರತಿನಿಧಿಗಳ ನೆರವು ಹಾಗೂ ಮಾದರಿ ಗ್ರಾಮ ಯೋಜನೆಗೆ ಸಂಬಂದಪಟ್ಟ ಸರಕಾರದ ಇಲಾಖೆಗಳ ಸಹಕಾರ, ಸರಕಾರೇತರ ಸಂಸ್ಥೆಗಳ ನೆರವು, ಸಂಘ ಸಂಸ್ಥೆಗಳ ಸೇವೆಯನ್ನು ಪಡೆದುಕೊಂಡು ಅಡವಿಹಳ್ಳಿ ಗ್ರಾಮಕ್ಕೆ ಆಧುನಿಕ ಸ್ಪರ್ಶ ನೀಡಲು ನಿರ್ಧರಿಸಲಾಗಿದೆ.
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ೧) ಶ್ರೀ ಗವಿಸಿದ್ಧೇಶ್ವರ ಸ್ಪರ್ಧಾತ್ಮಕ ಪರೀಕ್ಷಾ ಗ್ರಂಥಾಲಯ ೨) ಗಿಣಿಗೇರಿ ಕೆರೆಯ ಸ್ವಚ್ಚತೆ ಮತ್ತು ಸಂರಕ್ಷಣೆ ಈ ಎರಡು ಸಂಕಲ್ಪಗಳನ್ನು ಸಾಕಾರಗೊಳಿಸಿ ಮೂರನೆ ಸಂಕಲ್ಪವಾದ ಗ್ರಾಮೋದ್ಧಾರ-ದೇಶೋದ್ಧಾರ ಸಮೃದ್ಧ ಹಳ್ಳಿ ನಿರ್ಮಾಣಕ್ಕೆ ಒತ್ತು… ಪಡಿಯೋಣ ಅಡವಿಹಳ್ಳಿ ದತ್ತು… ಎಂಬ ಧ್ಯೇಯವಾಕ್ಯದಡಿಯಲ್ಲಿ ಅಡವಿಹಳ್ಳಿ ಗ್ರಾಮವನ್ನು ಮಾದರಿ ಗ್ರಾಮವಾಗಿ ಪರಿವರ್ತಿಸುವ ಭೂಮಿಪೂಜಾ ಕಾರ್ಯಕ್ರಮವನ್ನು ದಿನಾಂಕ: ೨೭/೦೨/೨೦೨೧ ಶನಿವಾರದಂದು ಬೆಳಿಗ್ಗೆ: ೧೦.೦೦ ಗಂಟೆಗೆ ಆಯೋಜಿಸಲಾಗಿದೆ. ಪ್ರಸ್ತುತ ಭೂಮಿಪೂಜಾ ಕಾರ್ಯಕ್ರಮದಲ್ಲಿ ಪರಮಪೂಜ್ಯರ ದಿವ್ಯ ನೇತೃತ್ವ ಹಾಗೂ ಮಾದರಿ ಗ್ರಾಮದ ಅನುಷ್ಠಾನುಭಾಗಿದಾರರಾದ ಶ್ರೀ ಮುಕಂದ ಸುಮಿ ವಿಶೇಷ ಸ್ಟೀಲ್ ಪ್ರಾವೇಟ್ ಲಿಮಿಟೆಡ್ ಹಾಗೂ ಸರ್ವೊದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕೊಪ್ಪಳ ಇವರ ಸಹಭಾಗಿತ್ವದಡಿಯಲ್ಲಿ ಕರ್ನಾಟಕ ಘನ ಸರ್ಕಾರದ ಸಂಯೋಗದೊಂದಿಗೆ, ಹಾಗೂ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಸಹಕಾರದೊಂದಿಗೆ ಮಾನ್ಯ ಜಿಲ್ಲಾಧಿಕಾರಿಗಳು ಕೊಪ್ಪಳ, ಮಾನ್ಯ ಜಿಲ್ಲಾ ಪಂಚಾಯತಿ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ವಿವಿಧ ಇಲಾಖಾ ಮುಖ್ಯಸ್ಥರು, ಅಡವಿಹಳ್ಳಿ ಸುತ್ತ-ಮುತ್ತಲಿನ ಗ್ರಾಮದ ಗ್ರಾಮಸ್ಥರು, ಸದಸ್ಯರು ಭಾಗವಹಿಸಲಿದ್ದಾರೆ.

Please follow and like us:
error