ಅಟಲ್ ಬಿಹಾರಿ ವಾಜಪೇಯಿ ಹುಟ್ಟು ಹಬ್ಬ ಆಚರಣೆ

ಕೊಪ್ಪಳ :  ಅಟಲ್ ಬಿಹಾರಿ ವಾಜಪೇಯಿ ಹುಟ್ಟು ಹಬ್ಬದ ಪ್ರಯುಕ್ತ ಭಾರತೀಯ ಜನತಾ ಪಕ್ಷ ಕೊಪ್ಪಳ ಗ್ರಾಮೀಣ ಮಂಡಲ ವತಿಂದ ಹುಲಗಿ ಗ್ರಾಮದಲ್ಲಿ ಅಟಲ್ ಜೀ ಸ್ಮರಣೆ  ಮತ್ತು  ಕಿಸಾನ್ ಸನ್ಮಾನ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು,

ಈ ಕಾರ್ಯಕ್ರಮದಲ್ಲಿ ಬಿಜೆಪಿ ಕೊಪ್ಪಳ ಗ್ರಾಮೀಣ ಮಂಡಲ ಅಧ್ಯಕ್ಷ ಪ್ರದೀಪ್ ಹಿಟ್ನಾಳ್,  ರೈತ ಮೋರ್ಚಾ ಅಧ್ಯಕ್ಷರಾದ ಮಹೇಶ್ ಮಂಗಳೂರು, ಹುಲಗಿ ತಾಲೂಕ ಪಂಚಾಯತ್ ಸದಸ್ಯ ಪಾಲಾಕ್ಷಪ್ಪ ಗುಂಗಾಡಿ, ನೇತೃತ್ವ ವಹಿಸಿದರು ,ಮಂಡಲ ಅಧ್ಯಕ್ಷ ಪ್ರದೀಪ್ ಹಿಟ್ನಾಳ್ ಮಾತನಾಡಿ ಇಂದು 9 ಕೋಟಿಗೂ ಹೆಚ್ಚಿನ ರೈತರಿಗೆ ಸುಮಾರು 18ಸಾವಿರ ಕೋಟಿ ನೂತನ ಕಂತಿನ ಜಮಾವಣೆಯ ಬಗ್ಗೆ ಹಾಗೂ ನರೇಂದ್ರ ಮೋದಿ ಜಿ ಕೈಗೊಂಡ ರೈತ ಪರ ಕಾರ್ಯಕ್ರಮಗಳ ಬಗ್ಗೆ ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲಾ ರೈತರಿಗೂ ಹಾಗೂ ಸಾರ್ವಜನಿಕರಿಗೆ ಮಾಹಿತಿ ತಿಳಿಸಿದರು ನಂತರ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟು ಹಬ್ಬವನ್ನು ಪುಷ್ಪಾಚರಣೆ ಮಾಡುವ ಮುಖಾಂತರ ಆಚರಿಸಲಾಯಿತು ಈ ಸಂದರ್ಭದಲ್ಲಿ  ಬಸವರಾಜ್ ಕರ್ಕಿಹಳ್ಳಿ, ಜಂಬಣ್ಣ ಹೂಗಾರ, ಶೇಖರಪ್ಪ ಸಿಂದೋಗಿ, ಬಸವರಾಜ್ ಮೇಟಿ, ಪರಶುರಾಮ ವಾಲ್ಮೀಕಿ, ಬಸವರಾಜ್ ಗದ್ದಿಕೇರಿ, ರಾಘವೇಂದ್ರ ರೆಡ್ಡಿ, ತಾಲೂಕ ಪ್ರಧಾನ ಕಾರ್ಯದರ್ಶಿ ಪಿ ಬಿ ಹಿರೇಮಠ, ಮಾಧ್ಯಮ ಪ್ರಮುಖ ಮಂಜುನಾಥ್ ಪೂಜಾರ್,ಭೀಮಣ್ಣ ಹಿರೇಮನಿ ಹಾಗೂ ಇನ್ನು ಮುಂತಾದ ಪಕ್ಷದ ಮುಖಂಡರು ಭಾಗವಹಿಸಿದ್ದರು

Please follow and like us:
error