ಅಕ್ರಮ ಮರಳು ದಂದೆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ: ಬಿ.ಸಿ.ಪಾಟೀಲ್

ಸಚಿವರ ಬೆಂಬಲಿಗರಿಂದ ಅಕ್ರಮ ಮರಳು ದಂದೆ : ಆರೋಪ

ಕೊಪ್ಪಳ : ಕೊಪ್ಪಳ ಜಿಲ್ಲೆಯ ಗಂಗಾವತಿ ಭಾಗದಲ್ಲಿ ಸಚಿವರ ಬೆಂಬಲಿಗರು ಅಕ್ರಮ ಮರಳು ಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಕೊಪ್ಪಳ ಜಿಲ್ಲೆಯಲ್ಲಿ  ಅಕ್ರಮ ಮರಳು ನಡೆಯುತ್ತಿರುವ ಆರೋಪಕ್ಕೆ ಪ್ರತಿಕ್ರಿಯೆ ಅಕ್ರಮ ಮರಳು ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ. ಎಲ್ಲಾದರೂ  ನಡೆಯುತ್ತಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.ಎಲ್ಲಿ ಮರಳು ಪಾಯಿಂಟ್‌ಗಳು ಇವೆ ಎಂಬುದನ್ನು ಚೆಕ್ ಮಾಡಲಾಗುವುದು ಎಂದು ಹೇಳಿದ ಅವರು ತಮ್ಮ ಹಿಂಬಾಲಕರೆ ಅಕ್ರಮ  ಮರಳು ದಂಧೆಯಲ್ಲಿ ತೊಡಗಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಅದರ ಬಗ್ಗೆ ಮಾಹಿತಿ ಇಲ್ಲ ಅದರ ಕುರಿತು ಪರಿಶೀಲನೆ ಮಾಡುತ್ತೇನೆ. ನನ್ನ ಹೆಸರು ಬಳಸಿಕೊಂಡು ಆ ರೀತಿ ಮಾಡಿದ್ರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

Please follow and like us:
error