ಅಕಾಲಿಕ ಮಳೆಯಿಂದ ಬೆಳೆ ಹಾನಿ : ಪರಿಹಾರ ಕೋರಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ನಿಯೋಗ

Koppal ಜಿಲ್ಲಾ ಉಸ್ತುವಾರಿ ಮತ್ತು ಕೃಷಿ ಸಚಿವ ಬಿ.ಸಿ.ಪಾಟೀಲ್ ನೇತೃತ್ವದಲ್ಲಿ ಅಕಾಲಿಕ ಮಳೆಯಿಂದ ಹಾನಿಗೊಳಗಾದ ಬೆಳೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ನಿಯೋಗವು ತೆರಳಿ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ನವರಿಗೆ ಮನವಿಯನ್ನು ಸಲ್ಲಿಸಿತು.

ನಿಯೋಗದಲ್ಲಿ  ಕರಡಿ ಸಂಗಣ್ಣ ಸಂಸದರು ಕೊಪ್ಪಳ, ಬಸವರಾಜ ದಡೇಸೂಗೂರ ಶಾಸಕರು ಕನಕಗಿರಿ, ಪರಣ್ಣ ಮುನವಳ್ಳಿ ಶಾಸಕರು ಗಂಗಾವತಿ, ಹಾಲಪ್ಪ ಆಚಾರ್ ಶಾಸಕರು ಯಲಬುರ್ಗಾ,ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ವಿಶ್ವನಾಥರೆಡ್ಡಿ ಹೊಸಮನಿ, ಜಿ.ವೀರಪ್ಪ  ಮಾಜಿ ಶಾಸಕರು ಕನಕಗಿರಿ ಹಾಗೂ ಬೆಲೆ ಆಯೋಗದ ಅಧ್ಯಕ್ಷರಾದ ಹಣಮನಗೌಡ ಬೆಳಗುರ್ಕಿ ಇತರರಿದ್ದರು. ಸರಕಾರ ಈ ನಿಟ್ಟಿನಲ್ಲಿ ರೈತರ ಜೊತೆಯಲ್ಲಿದೆ ಅಲ್ಲದೆ ಇಂದೇ ಚರ್ಚಿಸಿ ಸೂಕ್ತ ಪರಿಹಾರದ ವ್ಯವಸ್ಥೆ ಮಾಡುವ ಅಧಿಕೃತ ಆದೇಶ ಹೊರಡಿಸಲಾಗುವುದೆಂದು  ಮುಖ್ಯ ಮಂತ್ರಿಗಳು ಅಭಯವನ್ನು ನೀಡಿದರು

Please follow and like us:
error