ಅಂಬೇಡ್ಕರ್‍ರವರ ಚಿಂತನೆಗಳ ಕುರಿತು ನ. 22 ರಂದು ಕೊಪ್ಪಳದಲ್ಲಿ ಜಿಲ್ಲಾ ಮಟ್ಟದ ವಿಚಾರ ಸಂಕಿರಣ 

  ಬೆಂಗಳೂರು ಸಮಾಜ ಕಲ್ಯಾಣ ಇಲಾಖೆ, ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಬಹು ಶಿಸ್ತಿಯ ಸಂಶೋಧನಾ ಕೇಂದ್ರ ಹಾಗೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 125ನೇ ಜಯಂತಿ ವರ್ಷಾಚರಣೆಯ ಅಂಗವಾಗಿ ಅಂತರ್‍ರಾಷ್ಟ್ರೀಯ ಸಮ್ಮೇಳನ ಆಯೋಜನ ಸಮಿತಿ, ಬೆಂಗಳೂರು ಮತ್ತು ಕೊಪ್ಪಳ ಸ್ನಾತಕೋತ್ತರ ಕೇಂದ್ರ ಇವರ ಸಹಯೋಗದಲ್ಲಿ “ತಳ ಸಮುದಾಯ ಮತ್ತು ಸಾಮಾಜಿಕ ನ್ಯಾಯ” ಡಾ. ಡಾ. ಬಿ.ಆರ್. ಅಂಬೇಡ್ಕರ್‍ರವರ ಚಿಂದನೆಗಳ ಕುರಿತು ಒಂದುದಿನದ ಜಿಲ್ಲಾಮಟ್ಟದ ವಿಚಾರ ಸಂಕೀರಣವನ್ನು ನ. 22 ರಂದು ಬೆಳಿಗ್ಗೆ 10-00 ಗಂಟೆಗೆ ನಗರದ ಸ್ನಾತಕೋತ್ತರ ಕೇಂದ್ರದ ಸಭಾ ಭವನದಲ್ಲಿ ಏರ್ಪಡಿಸಲಾಗಿದೆ. 
ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾತ ಪ್ರೊ. ಸುಭಾಸ್ ಎಮ್.ಎಸ್. ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಎಸ್.ಎ ಪಾಟೀಲ್, ಮೌಲ್ಯಮಾಪನ ಕುಲಸಚಿವರಾದ ಪ್ರೊ. ಸಿ.ಬಿ ಹೊನ್ನುಸಿದ್ಧಾರ್ಥ, ಸಿಂಡಿಕೇಟ್ ಸದಸ್ಯರಾದ ಕೆ.ಬಿ ಬ್ಯಾಳಿ ಹಾಗೂ ಸಾವಿತ್ರಿ ಮುಜುಂದಾರ್, ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಎಚ್.ಆರ್ ಶ್ರೀಕಾಂತ್, ವಿ.ಶ್ರಿ.ಕೇ.ವಿವಿಯ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಬಹು ಶಿಸ್ತಿಯ ಸಂಶೋಧನಾ ಕೇಂದ್ರದ ಸಂಯೋಜಕರಾದ ಡಾ. ಮೋಹನ್ ದಾಸ್ ಕೆ. ಅವರು ಪಾಲ್ಗೊಳ್ಳುವರು.
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಡೀನರು, ಕಲಾ ನಿಕಾಯ ಪ್ರೊ. ರಾಬರ್ಟ್ ಜೋಸ್ ಅವರ ಅಧ್ಯಕ್ಷತೆಯಲ್ಲಿ ಅಂದು ಬೆಳಿಗ್ಗೆ 11-45 ರಿಂದ ಮಧ್ಯಾಹ್ನ 1-30 ರವರೆಗೆ ಡಾ. ಬಿ.ಆರ್ ಅಂಬೇಡ್ಕರ್‍ರವರ ತತ್ವಾದರ್ಶಗಳು, ತಳ ಸಮುದಾಯಗಳ ಶೈಕ್ಷಣಿಕ ಸವಾಲುಗಳು ಮತ್ತು ಅಂಬೇಡ್ಕರ್ ಪರಿಹಾರಗಳು, ತಳ ಸಮುದಾಯಗಳ ಸಾಮಾಜಿಕ, ಆರ್ಥಿಕ ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ಗಣ್ಯರಿಂದ ಗೋಷ್ಠಿ-1 ನಡೆಯಲಿದೆ. ಹಾಗೂ ಮಧ್ಯಾಹ್ನ 2-30 ರಿಂದ 4 ಗಂಟೆವರೆಗೆ ವಿ.ಶ್ರಿ.ಕೇ.ವಿವಿಯ ಸಿಂಡಿಕೇಟ್ ಸದಸ್ಯರಾದ ಸಾವಿತ್ರಿ ಮುಜುಂದಾರ್ ಅವರ ಅಧ್ಯಕ್ಷತೆಯಲ್ಲಿ ತಳ ಸಮುದಾಯದ ಜನರ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು, ಸಾಮಾಜಿಕ ನ್ಯಾಯ ಮತ್ತು ಮಹಿಳಾ ಹಕ್ಕುಗಳ ಕುರಿತು ಡಾ. ಬಿ.ಆರ್ ಅಂಬೇಡ್ಕರ್‍ರವರ ದೃಷ್ಟಿಕೋನಗಳು, ದೃಷ್ಟಿ ಮಾರ್ಗಗಳು ಹಾಗೂ ಅವರ ಕೊಡುಗೆಗಳ ಕುರಿತು ಗಣ್ಯರಿಂದ ಗೋಷ್ಠಿ-2 ಜರುಗಲಿದೆ.
ನಂತರ 4-15 ಗಂಟೆಗೆ ಕೊಪ್ಪಳ ವಿ.ಶ್ರಿ.ಕೇ.ವಿವಿ. ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾರಿಗಳಾದ ಡಾ. ಮನೋಜ್ ಡೊಳ್ಳಿ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಎಲ್.ಆರ್ ನಾಯಕ್ ಅವರು ಸಮಾರೋಪ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಅಲ್ಲಾವಲಿ ಭಾಷಾ ಕೋಲ್ಮಿ, ವಿದ್ಯಾ ವಿಷಯಕ್ ಪರಿಷತ್ ಸದಸ್ಯರುಗಳಾದ ಶಂಕರ್ ಬಿಸ್ನಳ್ಳಿ, ವೆಂಕಟೇಶ್ ಡ್ಯಾಗಿ ಮತ್ತು ವೆಂಕಟೇಶ್, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್‍ರವರ ಅಂತರ್‍ರಾಷ್ಟ್ರೀಯ ಸಮ್ಮೇಳನ ಆಯೋಜನ ಸಮಿತಿಯ ಸಂಯೋಜಕ ಡಾ. ಆರ್.ವಿ ಚಂದ್ರಶೇಖರ್, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಬಹು ಶಿಸ್ತಿಯ ಸಂಶೋಧನಾ ಕೇಂದ್ರದ ಸಂಯೋಜಕ ಡಾ. ಮೋಜನ್ ದಾಸ್ ಕೆ. ಹಾಗೂ ವಿ.ಶ್ರಿ.ಕೇ.ವಿವಿಯ ಪ.ಜಾ./ ಪ.ಪಂ ವಿಶೇಷ ಘಟಕದ ಸಂಯೋಜಕ ಡಾ. ಕುಮಾರ್ ಅವರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

Please follow and like us:
error