ಅಂಬರೀಷ್, ಜಾಫರ್ ಷರೀಫ್ ನಿಧನ: ಇಂಡಿಯನ್ ಸೋಷಿಯಲ್ ಫೋರಂ ಕುವೈಟ್ ಸಂತಾಪ

ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಕೇಂದ್ರದ ಮಾಜಿ ರೈಲ್ವೆ ಸಚಿವರಾಗಿದ್ದ ಸಿ.ಕೆ.ಜಾಫರ್ ಷರೀಫ್ ಹಾಗೂ ನಟ ಮತ್ತು ಹಿರಿಯ ರಾಜಕಾರಣಿ ಅಂಬರೀಷ್ ಅವರ ನಿಧನಕ್ಕೆ ಇಂಡಿಯನ್ ಸೋಷಿಯಲ್ ಫೋರಂ ಕುವೈಟ್ ತೀವ್ರ ಸಂತಾಪ ವ್ಯಕ್ತಪಡಿಸಿದೆ.

 ಅಗಲಿದ ನಾಯಕರಿಬ್ಬರೂ ಜಾತ್ಯಾತೀತತೆಯ ಪ್ರಬಲ ಪ್ರತಿಪಾದಕರಾಗಿದ್ದರು. ಷರೀಫ್ರವರು ರೈಲ್ವೆ ಸಚಿವರಾಗಿ ಇಲಾಖೆಯಲ್ಲಿ ತಂದ ಸುಧಾರಣೆ ಮತ್ತು ಕರ್ನಾಟಕಕ್ಕೆ ನೀಡಿದ ಕೊಡುಗೆ ಅಭೂತಪೂರ್ವ ಮತ್ತು ಕ್ರಾಂತಿಕಾರಕವಾದವು. ನಾಯಕದ್ವಯರ ಅಗಲಿಕೆಯಿಂದ ರಾಜ್ಯವು ಹಿರಿಯ ಹಾಗೂ ಮುತ್ಸದ್ದಿ ನಾಯಕರನ್ನು ಕಳೆದುಕೊಂಡತಾಗಿದೆ ಎಂದು ಇಂಡಿಯನ್ ಸೋಷಿಯಲ್ ಫೋರಂ ಕುವೈಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ

Please follow and like us:
error