ಅಂತರ್ ರಾಜ್ಯದಿಂದ ಆಗಮಿಸುವವರ ಕ್ವಾರಂಟೈನ್ ಕುರಿತು ಹೊಸ ಮಾರ್ಗಸೂಚಿ ಬಿಡುಗಡೆ


ಕೊಪ್ಪಳ, ಜೂ.  :  ಭಾರತ ಗೃಹ ಮಂತ್ರಾಲಯದ ಆದೇಶದಂತೆ ಅಂತರ್‌ರಾಜ್ಯ ಪ್ರಯಾಣಿಕರು ರಾಜ್ಯದೊಳಗೆ ಪ್ರವೇಶಿಸಿದ ನತರ ಅವರನ್ನು ಕ್ವಾರಂಟೈನ್‌ಗೆ ಒಳಪಡಿಸುವ ಕುರಿತು ಪ್ರಮಾಣೀಕೃತ ನಿರ್ವಹಣಾ ಕಾರ್ಯವಿಧಾನದನ್ವಯ ಕ್ವಾರಂಟೈನ್‌ಗೆ ಒಳಪಡಿಸಲು ಕೆಲವು ವಿನಾಯಿತಿಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ಮಹಾರಾಷ್ಟç ರಾಜ್ಯದಿಂದ ಆಗಮಿಸಿರುವವರನ್ನು ರೋಗ ಲಕ್ಷಣ ಇಲ್ಲದೆ ಇದ್ದ್ದ ಪಕ್ಷದಲ್ಲಿ ಅವರನ್ನು 7 ದಿನಗಳ ಸಾಂಸ್ಥಿಕ ಮತ್ತು 7 ದಿನಗಳ ಗೃಹ ಕ್ವಾರಂಟೈನ್ ಮಾಡಲಾಗುವುದು.  ವಿಶೇಷ ಸಂದರ್ಭಗಳಲ್ಲಿ ರೋಗ ಲಕ್ಷಣ ಇಲ್ಲದೇ ಇರುವ ಪಕ್ಷದಲ್ಲಿ, ಕುಟುಂಬ ಸದಸ್ಯರು ಮೃತ ಹೊಂದಿದಲ್ಲಿ, ಗರ್ಭಿಣಿಯರು, 10 ವರ್ಷದ ಕೆಳಗಿನ ಮಕ್ಕಳು, 60 ವರ್ಷ ಮೇಲ್ಪಟ್ಟ ವ್ಯಕ್ತಿಗಳು, ಗಂಭೀರ ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳು, ಅಪಾಯದ ಸ್ಥಿತಿಯಲ್ಲಿರುವ ವ್ಯಕ್ತಿಗಳಿಗೆ ಸಾಂಸ್ಥಿಕ ಕ್ವಾರಂಟೈನ್‌ನಿAದ ವಿನಾಯಿತಿ ನೀಡಿ 14 ದಿನಗಳ ಕಾಲ ಗೃಹ ಕ್ವಾರಂಟೈನ್‌ನಲ್ಲಿ ಇಡಲಾಗುವುದು.
ಮಹಾರಾಷ್ಟç ರಾಜ್ಯವನ್ನು ಹೊರತು ಪಡಿಸಿ ಇತರೆ ರಾಜ್ಯಗಳಿಂದ ಆಗಮಿಸುವ ರೋಗ ಲಕ್ಷಣ ಇಲ್ಲದೇ ಇರುವ ವ್ಯಕ್ತಿಗಳನ್ನು 14 ದಿನಗಳ ಕಾಲ ಗೃಹ ಕ್ವಾರಂಟೈನ್‌ನಲ್ಲಿ ಇಡಲಾಗುವುದು.
ರಾಜ್ಯದ ಗಡಿ ಭಾಗಗಳಲ್ಲಿ ಸ್ಥಾಪಿಸಲಾದ ಚೆಕ್‌ಪೋಸ್ಟ್ಗಳ ಮೂಲಕ ಅನ್ಯ ರಾಜ್ಯಗಳಿಂದ ಆಗಮಿಸುವ ವ್ಯಕ್ತಿಗಳು ಜಿಲ್ಲೆಯ ನಗರ ಪ್ರದೇಶಗಳಿಗೆ ಬಂದು ವಾಸಿಸಿದ್ದಲ್ಲಿ, ಆರೋಗ್ಯ ಇಲಾಖೆ ಹೊರಡಿಸಿರುವ ಪ್ರಮಾಣೀಕೃತ ನಿರ್ವಹಣಾ ಕಾರ್ಯವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ವೇಳೆ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅಂತಹ ವ್ಯಕ್ತಿಗಳ ಮನೆಯ ಅಕ್ಕ ಪಕ್ಕದ ವಾಸಿಗಳು ಸಂಬAಧಪಟ್ಟ ನಗರಸಭೆ/ಪುರಸಭೆ/ಪಟ್ಟಣ ಪಂಚಾಯತಿಗಳ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಮಾಹಿತಿ ತಿಳಿಸಬೇಕು.
ಅನ್ಯ ರಾಜ್ಯಗಳಿಂದ ಆಗಮಿಸುವ ವ್ಯಕ್ತಿಗಳು ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ಬಂದು ವಾಸಿಸಿದ್ದಲ್ಲಿ ಮತ್ತು ಆ ವ್ಯಕ್ತಿ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ವ್ಯಕ್ತಿಗಳ ಮನೆಯ ಅಕ್ಕ ಪಕ್ಕದ ವಾಸಿಗಳು ಸಂಬAಧಪಟ್ಟ ತಾಲ್ಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕಾ ಆರೋಗ್ಯಾಧಿಕಾರಿಗಳು, ತಹಶೀಲ್ದಾರರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಬೇಕು.
ಜಿಲ್ಲೆಯಲ್ಲಿ ಅನ್ಯ ರಾಜ್ಯಗಳಿಂದ ಆಗಮಿಸುವ ವ್ಯಕ್ತಿಗಳ ಮೇಲೆ ನಿಗಾ ವಹಿಸಲು ಗ್ರಾಮೀಣ ಪ್ರದೇಶ ವಲಯದಲ್ಲಿ ಯುನಿಸೆಫ್‌ನ ಜಿಲ್ಲಾ ಸಮನ್ವಯ ಅಧಿಕಾರಿ ಹರೀಶ್ ಜೋಗಿ (ಮೊ.ಸಂ.9035129484) ಮತ್ತು ನಗರ ಪ್ರದೇಶ ವಲಯದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ರಾಮೇಶ್ವರ (ಮೊ.ಸಂ.9606729144) ಇವರನ್ನು ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು  ತಿಳಿಸಿದ್ದಾರೆ.

Please follow and like us:
error