ಅಂತರಾಷ್ಟ್ರೀಯ ಹಾಲು ಮತ್ತು ಹಾಲಿನ ಉತ್ಪನ್ನಗಳ ಮುಕ್ತ  ವ್ಯಾಪಾರಕ್ಕೆ ಅನುಮೋದನೆ ನೀಡಬಾರದು ಎಂದು ಆಗ್ರಹಿಸಿ ಪ್ರತಿಭಟನೆ

 

ಅಂತರಾಷ್ಟ್ರೀಯ ಹಾಲು ಮತ್ತು ಹಾಲಿನ ಉತ್ಪನ್ನಗಳ ಮುಕ್ತ ವ್ಯಾಪಾರಕ್ಕೆ ಅನುಮೋದನೆ ನೀಡಬಾರದು ಎಂದು ಆಗ್ರಹಿಸಿ ಹಾಲು ಉತ್ಪಾದಕರು ಇಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಪ್ರದಾನಿಯವರಿಗೆ ಮನವಿ ಸಲ್ಲಿಸಿದರು

ಹೈನುಗಾರಿಕೆ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ರದ್ದುಪಡಿಸಬೇಕೆಂಬ ಪ್ರಸ್ತಾವನೆಯು ಕೇಂದ್ರ ಸರ್ಕಾರದ ಮುಂದಿರುವುದಾಗಿ ಪತ್ರಿಕೆ ಹಾಗೂ ಮಾಧ್ಯಮಗಳ ಮೂಲಕ ತಿಳಿದು ಬಂದಿರುತ್ತದೆ. ವಿದೇಶಿ ಹೈನು ಉತ್ಪನ್ನಗಳ ಮೇಲೆ ಆಮದು ಸುಂಕವನ್ನು ರದ್ದುಪಡಿಸಿ ಮುಕ್ತ ವ್ಯಾಪಾರಕ್ಕೆ ಅನುಮತಿ ನೀಡಿದ್ದಲ್ಲಿ ಸ್ಥಳೀಯ ಕೊಪ್ಪಳ ಜಿಲ್ಲೆಯಲ್ಲಿರುವ ೨೩೦ ಹಾಲು ಉತ್ಪಾದಕರ ಸಹಕಾರ ಸಂಘಗಳ ೨೫೦೦೦ ರೈತ ಕುಟುಂಬಗಳು ಹೈನುಗಾರಿಕೆಯ ಮೇಲೆ ತುಂಬಾ ತೊಂದರೆಯಾಗುತ್ತದೆ. ಕೊಪ್ಪಳ ಜಿಲ್ಲೆಯು ಬರಗಾಲ ಪ್ರದೇಶವಾಗಿದ್ದು, ಇಲ್ಲಿ ಹೈನುಗಾರಿಕೆ ಮುಖ್ಯ ಕಸುಬು ಆಗಿರುತ್ತದೆ. ಪ್ರತಿನಿತ್ಯ ೨೫ ಸಾವಿರ ರೈತರು ಹೈನುಗಾರಿಕೆ ಮೇಲೆ ಅವಲಂಭಿತರಾಗಿ ಪ್ರತಿನಿತ್ಯ ೧.೦೦ ಲಕ್ಷ ಲೀಟರ್ ಹಾಲನ್ನು ಉತ್ಪಾದನೆ ಮಾಡಿ ಒಕ್ಕೂಟಕ್ಕೆ ಸರಬರಾಜು ಮಾಡುತ್ತಿದ್ದಾರೆ. ಇದರಿಂದ ದಿನವಹಿ ರೂ. ೨೮,೦೦,೦೦೦/- ಗಳನ್ನು ಪಡೆದು ವಾರ್ಷಿಕವಾಗಿ ಅಂದಾಜು ರೂ. ೧.೦೨ ಕೋಟಿಗಳ ಆದಾಯ ಪಡೆದು ಜೀವನ ಸಾಗಿಸುತ್ತಿದ್ದಾರೆ.
ಅಂತರಾಷ್ಟ್ರೀಯ ಹಾಲು ಮತ್ತು ಹಾಲಿನ ಉತ್ಪನ್ನಗಳ ಮುಕ್ತ ವ್ಯಾಪಾರ ಒಪ್ಪಂದ ಒಡಬಂಡಿಕೆಯಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನಮ್ಮ ದೇಶಕ್ಕೆ ರಫ್ತು ಮಾಡಿದ್ದಲ್ಲಿ ಕೊಪ್ಪಳ ಜಿಲ್ಲೆಯಲ್ಲಿರುವ ರೈತರ ಉಪ ಜೀವನಕ್ಕೆ ಆಧಾರವಾಗಿರುವ ಹೈನುಗಾರಿಕೆ ಮೇಲೆ ತುಂಬಾ ಪರಿಣಾಮ ಬೀರಲಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ದೇಶಗಳಲ್ಲಿ ಇರುವ ವಿದೇಶಿ ತಳಿಗಳು ಹೆಚ್ಚಿನ ಹಾಲನ್ನು ನೀಡುತ್ತಿವೆ. ಇದರಿಂದ ಅವರಿಗೆ ಉತ್ಪಾದನೆ ವೆಚ್ಚ ಕಡಿಮೆಯಾಗಿರತ್ತದೆ. ನಮ್ಮ ದೇಶದಲ್ಲಿ ಇರುವ ತಳಿಗಳು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳ ತಳಿಗಳಿಗೆ ಹೋಲಿಸಿದರೆ ತುಂಬಾ ಕಡಿಮೆ ಹಾಲನ್ನು ನೀಡುತ್ತಿವೆ. ಅಂತಾರಾಷ್ಟ್ರೀಯ ಹಾಲಿನ ಉತ್ಪನ್ನಗಳ ಮುಕ್ತ ವ್ಯಪಾರಕ್ಕೆ ಸಹಿ ಹಾಕಿದ್ದಲ್ಲಿ ಆಮದು ಸುಂಕ ರದ್ದಾಗುತ್ತದೆ. ಇದರಿಂದ ಸದರಿ ವಿದೇಶಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲೆ ಪೈಪೋಟಿ ನಡೆಸಲು ಸಾಧ್ಯವಿಲ್ಲ. ಈ ಪ್ರಯುಕ್ತ ನಮ್ಮ ದೇಶದ ಹೈನು ಉದ್ಯಮವು ಪೂರ್ಣವಾಗಿ ಸ್ಥಬ್ದವಾಗುತ್ತದೆ.
ಇದರಿಂದ ಈ ಬರಪೀಡಿತ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹೈನು ಉದ್ಯಮದ ಮೇಲೆ ಅವಲಂಭಿತವಾಗಿರುವ ೯೦ ಸಾವಿರ ಜನ ನಿರುದ್ಯೋಗಿಗಳಾಗುತ್ತಾರೆ. ಆದುದರಿಂದ ಅಂತಾರಾಷ್ಟ್ರೀಯ ಹಾಲು ಮತ್ತು ಹಾಲಿನ ಉತ್ಪನ್ನಗಳ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಅನುಮೋದನೆ ನೀಡದಿರಲು  ಅಗ್ರಹಿಸಿದರು.

ಕೊಪ್ಪಳ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಪರವಾಗಿ ಸದರಿ ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ  ವೆಂಕನಗೌಡ್ರು ಹಿರೇಗೌಡ್ರು  ,ಶಿವಪ್ಪ ವಾದಿ,ಎಂ. ಸತ್ಯನಾರಾಯಣ ಶ್ರೀಮತಿ ಕವಿತಾ ಗುಳಗಣ್ಣನವರ ಮಂಜುನಾಥ ನಿಡಶೇಶಿ, ಶ್ರೀಮತಿ ಲಲಿತವ್ವ ಡೊಳ್ಳಿನ ನಾಗರಾಜ ಚಿಕ್ಕಮನ್ನಾಪುರ ,ಲಕ್ಷ್ಮಣ ಬಾರಕೇರ ವೀರಪ್ಪ ರಾಜೂರ ಬೆನಕನಾಳ , ಶ್ರೀಮತಿ ಅಕ್ಕಮ್ಮ ಜ್ಯೋತಿ  ಪ್ರಕಾಶ ತಿಗರಿ, ಮಲ್ಲಿಕಾರ್ಜುನ ಮಲಾಲಿ ವಿಶ್ವನಾಥ ಸಿದ್ದಾಪುರ ,ಎ. ರಾಮು ಶ್ರೀರಾಮನಗರ ಶರಣಯ್ಯ ದ್ಯಾಪುರ , ಸುರೇಶ ಕೋಟಯ್ಯಕ್ಯಾಂಪ್ ಗಂಗಾಧರಯ್ಯತಳವಗೇರಾ  ಶಿವಪ್ಪ ದ್ಯಾಂಪುರ, ಎಂ.ಹಂಚಿನಾಳ ದೇವರಾಜ ಕುಂಬಾರ ಕರ್ಕಿಹಳ್ಳಿ ೧೮. ಶ್ರೀ ಶರಣಪ್ಪ ಕುಂಬಾರ ಹಾಲಪ್ಪ ಜಾಡಿ ಪಕೀರಪ್ಪ ಬೆನ್ನಳ್ಳಿ ಕಾತರಕಿ ಹಾಜರಿದ್ದರು.

Please follow and like us:
error