ಅಂಜನಾದ್ರಿ ಬೆಟ್ಟ ದೇವಸ್ಥಾನದ ನಿರ್ವಹಣೆಗೆ ಕ್ರಮ : ಪಿ. ಸುನೀಲ್ ಕುಮಾರ್

ಕೊಪ್ಪಳ ನ.   ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟ ದೇವಸ್ಥಾನದ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆ, ಗಂಗಾವತಿ ತಾಲ್ಲೂಕಿನ ಚಿಕ್ಕರಾಂಪೂರ, ಆನೆಗುಂದಿಯ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನವು ಸರ್ಕಾರದ ಆದೇಶ ಸಂಖ್ಯೆ: ಕಂಇ:76: ಮುಅಬಿ,2018, 2018 ಸೆ. 24 ರನ್ವಯ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದ ಅಧಿಸೂಚಿತ ಸಂಸ್ಥೆಯಾಗಿದ್ದು, ದೇವಸ್ಥಾನದ ಆಡಳಿತ ನಿರ್ವಹಣೆಗೆ ಹಾಗೂ ಮೇಲ್ವಿಚಾರಣೆಗಾಗಿ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ದೇವಸ್ಥಾನದ ಪಾರದರ್ಶಕ ಆಡಳಿತ ನಿರ್ವಹಣೆಗಾಗಿ ಸಿ.ಸಿ. ಕ್ಯಾಮರಾ, ಗಣಕೀಕೃತ ಕೌಂಟರ್ ಅಳವಡಿಸಲಾಗಿದೆ. ಭಕ್ತರಿಗೆ ಶುದ್ಧ ಕುಡುಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ತ್ಯಾಜ್ಯ ವಸ್ತುಗಳ ವಿಲೇವಾರಿಗೆ ಕ್ರಮ, ಪಾರ್ಕಿಂಗ್ ವ್ಯವಸ್ಥೆ, ಭಕ್ತರಿಗೆ ಪ್ರತಿನಿತ್ಯ ಉಚಿತ ಅನ್ನ ಪ್ರಸಾದದ ವ್ಯವಸ್ಥೆ, ತೀರ್ಥದ ಬಾಟಲಿ, ಲಾಡು ಪ್ರಸಾದ ದೊರೆಯುವ ವ್ಯವಸ್ಥೆ, ಹಾಗೂ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಹೆಚ್ಚಿನ ಮೂಲಭೂತ ಸೌಕರ್ಯಗಳಿಗೆ ಪಾರ್ಕಿಂಗ್ ಪ್ರದೇಶದಲ್ಲಿ ಕುಡಿಯುವ ನೀರು, ಶೌಚಾಲಯ, ವಾಣಿಜ್ಯ ಮಳಿಗೆಗಳು, ವ್ಯಾಖ್ಯಾನ ಕೇಂದ್ರ, ಯಾತ್ರಿಕರ ನಿವಾಸ ಮುಂತಾದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಉದ್ಧೇಶಿಸಲಾಗಿದೆ.
ಆದ್ದರಿಂದ ಭಕ್ತಾಧಿಗಳು ದೇವಸ್ಥಾನಕ್ಕೆ ಸಲ್ಲಿಸಲು ಇಚ್ಚಿಸುವ ಮುಡುಪು, ಕಾಣಿಕೆ, ಬೆಳ್ಳಿ, ಬಂಗಾರ, ದವಸಧಾನ್ಯ ಮುಂತಾದವುಗಳನ್ನು ದೇವಸ್ಥಾನದ ಗಣಕೀಕೃತ ಕೌಂಟರ್‌ನಲ್ಲಿ ಪಾವತಿಸಿ, ಸೂಕ್ತ ರಸೀದಿಯನ್ನು ಪಡೆದುಕೊಳ್ಳಬೇಕು ಅಥವಾ ಹುಂಡಿಯಲ್ಲಿ ಹಾಕಬೇಕು. ಹಣ ಕಳುಹಿಸಲು ಇಚ್ಚಿಸುವವರು ದೇವಸ್ಥಾನದ ಬ್ಯಾಂಕ್ ಖಾತೆಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆನೆಗುಂದಿ ಖಾತೆ ಸಂ: 37836968445, ಐ.ಎಫ್.ಎಸ್.ಸಿ ಕೋಡ್: SBIN0020215 ಅಥವಾ ಪ್ರಗತಿ ಕೃಷ್ಣ ಗ್ರಾಮಿಣ ಬ್ಯಾಂಕ್, ಸಾನಾಪುರ ಖಾತೆ ಸಂ: 10794101018583, ಐ.ಎಫ್.ಎಸ್.ಸಿ ಕೋಡ್: PKGB0010794 ಕ್ಕೆ ನೇರವಾಗಿ ಕಾಣಿಕೆ ಅಥವಾ ದೇಣಿಗೆಯನ್ನು ಜಮಾ ಮಾಡಬಹುದಾಗಿದೆ. ಮಧ್ಯವರ್ತಿಗಳಿಗಾಗಲೀ ಅಥವಾ ಯಾವುದೇ ಟ್ರಸ್ಟ್ಗಳಿಗೆ ಪಾವತಿ ಮಾಡಬಾರದು

Please follow and like us:
error