ಪ್ರಾಥಮಿಕ ಸಂಪರ್ಕದಲ್ಲಿದ್ದ ಮಹಿಳೆಯನ್ನು ಕೊಪ್ಪಳಕ್ಕೆ ಕರೆತಂದ ಘಟನೆಯ ಕುರಿತು ಸೂಕ್ತ ತನಿಖೆಗೆ ತಂಗಡಗಿ ಆಗ್ರಹ

ಪ್ರಾಥಮಿಕ ಸಂಪರ್ಕದಲ್ಲಿದ್ದ ಮಹಿಳೆಯನ್ನು ಕೊಪ್ಪಳಕ್ಕೆ ಕರೆತಂದ ಘಟನೆಯ ಕುರಿತು ಸೂಕ್ತ ತನಿಖೆಗೆ ನಡೆಸಲು ಮಾಜಿ ಸಚಿವ ಶಿವರಾಜ್ ತಂಗಡಗಿ ಗೃಹಸಚಿವರನ್ನು ಆಗ್ರಹಿಸಿದ್ದಾರೆ. ಈ ಕುರಿತು ಗೃಹ ಸಚಿವರಿಗೆ ಬರೆದ ಪತ್ರ ಇಲ್ಲಿದೆ…

ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ , ಗೃಹ ಸಚಿವರು , ಕರ್ನಾಟಕ ಸರ್ಕಾರ ಬೆಂಗಳೂರು . ಮಾನ್ಯರೇ , ವಿಷಯ : ಕೆರೂನಾ ಸೋಂಕಿತ ವ್ಯಕ್ತಿಯೊಂದಿಗೆ , ಪ್ರಾಥಮಿಕ ಸಂಪರ್ಕದಲ್ಲಿದ್ದ ಮಹಿಳೆಯನ್ನು ಕೊಪ್ಪಳಕ್ಕೆ ಕರೆತಂದ ಘಟನೆಯ ಕುರಿತು ಸೂಕ್ತ ತನಿಖೆಯನ್ನು ನಡೆಸುವ ಕುರಿತು ,

ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಶ್ರೀಮತಿ ಶಿಖಾ ಶೇಖ್ ಎಂಬ ಮಹಿಳೆಯು ದಿ : 19 03 – 2020ರಂದು ವಿ . ಆರ್ . ಎಲ್ . ಟ್ರಾವೆಲ್ಸ್ ಬಸ್ ಮೂಲಕ ಮುಂಬೈಯಿಂದ ಹುಬ್ಬಳ್ಳಿಗೆ ಕೋವಿಡ್ – 19 ವೈರಾಣು ದೃಢಪಟ್ಟಿರುವ ಕೆಎ – ಪಿ194 ವ್ಯಕ್ತಿಯೊಂದಿಗೆ ಪ್ರಯಾಣ ಮಾಡಿ , ದಿ : 20 – 03 – 2020ರಂದು ಹುಬ್ಬಳ್ಳಿಗೆ ತಲುಪಿ , ತಮ್ಮ ಪರಿಚಯಸ್ಥ ಮಹಿಳೆ ಶ್ರೀಮತಿ ಲಕ್ಷ್ಮೀ ಭಟ್‌ರವರ ಮನೆಯಲ್ಲಿ ದಿ : 13 – 04 2020ರವರೆಗೆ ಇರುತ್ತಾರೆ . ಸದರಿ ಮಹಿಳೆಯು ಕೊಪ್ಪಳದ ಗುರುಬಸವ ಹೊಳಗುಂದಿ ಇವರು ಮುಂಬೈಗೆ ಹೋಗಲು ಪಾಸ್ ಕೊಡಿಸುವುದಾಗಿ ಹೇಳಿದ್ದರಿಂದ , ದಿ : 13 – 04 – 2020ರಂದು ಹಾಲಿನ ವಾಹನದ ಮುಖಾಂತರ ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಬಂದು , ಶಾಂತರಾಮ ಭಾಗ್ಯನಗರ ( ಕೊಪ್ಪಳ ) ಇವರ ಮನೆಯಲ್ಲಿ ತಂಗಿರುವುದಾಗಿ ತಿಳಿಸಿರುತ್ತಾರೆ . ಗುರುಬಸವ ಹೊಳಗುಂದಿ ಇವರು ಸದರಿ ಮಹಿಳೆಯನ್ನು ಕೊಪ್ಪಳ ಪೊಲೀಸ್ ಠಾಣೆಗೆ ಪಾಸ್ ಕೊಡಿಸಲಿಕ್ಕೆ ಕರೆದುಕೊಂಡು ಹೋದಾಗ , ಶ್ರೀಮತಿ ಶಿಖಾ ಶೇಕ್ ಇವರು ಕೋವಿಡ್ – 19 ವೈರಾಣು ದೃಢಪಟ್ಟಿರುವ ಕೆಎ – ಪಿ194 ವ್ಯಕ್ತಿಯೊಂದಿಗೆ ಪ್ರಯಾಣ ಮಾಡಿದ್ದು ದೃಢಪಟ್ಟಾಗ , ಸದರಿ ಮಹಿಳೆ ಹಾಗೂ ಶಾಂತರಾಮ ಭಾಗ್ಯನಗರ ( ಕೊಪ್ಪಳ ) ಕುಟುಂಬದವರನ್ನು ಇನ್ಸಿಟ್ಯೂಷನಲ್ ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು , ಗುರುಬಸವ ಹೊಳಗುಂದಿ , ಇನ್ಸಿಟ್ಯೂಷನಲ್ ಕ್ವಾರಂಟೈನ್ ಆಗಲು ನಿರಾಕರಿಸಿದಾಗ , ಕೊಪ್ಪಳ ತಹಶೀಲ್ದಾರರು ಇವರ ಮೇಲೆ ದೂರನ್ನು ನೀಡಿದರೂ , ಪ್ರಕರಣವನ್ನು ದಾಖಲು ಮಾಡಲು , ತಹಶೀಲ್ದಾರರಿಗೆ ಸತಾಯಿಸಲಾಗಿದೆಯೆಂದು ಹಾಗೂ ಗುರುಬಸವ ಹೊಳಗುಂದಿ ಇವರನ್ನು ಇನ್ಸಿಟ್ಯೂಷನಲ್ ಕ್ವಾರಂಟೈನ್ ಮಾಡದೇ ಹೋಮ್ ಕ್ವಾರಂಟೈನ್ ಮಾಡಿದ್ದು ಯಾಕೆ ಅದೇ ರೀತಿ ಸದರಿ ಮಹಿಳೆ ಹಾಲಿನ ವಾಹನದಲ್ಲಿ ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಆಗಮಿಸಿದ್ದು ಕಟ್ಟಿಕತೆ ಎಂದು ಗೊತ್ತಾಗುತ್ತಿದ್ದಂತೆ , ವಾಸ್ತವ ಅರಿಯಲು ಮುಂದಾದಾಗ ಆಕೆ ಬಂದದ್ದು , ಹಾಲಿನ ವಾಹನದಲ್ಲಿ ಅಲ್ಲ , ಬದಲಾಗಿ ಪೊಲೀಸ್ ವಾಹನದಲ್ಲಿ , ಇದಲ್ಲದೇ ಕೇವಲ ಆಕೆಯನ್ನು ಕರೆದುಕೊಂಡು ಬರುವುದಷ್ಟೇ ಅಲ್ಲ , ಮಧ್ಯವನ್ನು ಸರಬರಾಜು ಮಾಡಲು ಪೊಲೀಸ್ ವಾಹನ ಬಳಕೆಯಾಗಿದೆ ಎನ್ನುವ ಗುಮಾನಿ ಪೊಲೀಸ್ ಇಲಾಖೆಯಿಂದಲೆ ವ್ಯಕ್ತವಾಗಿದೆಯೆಂದು ಎಂದು ಕನ್ನಡ ದಿನಪತ್ರಿಕೆಯಲ್ಲಿ ( ಕನ್ನಡ ಪ್ರಭ ವರದಿ – ದಿ : 18 – 04 – 2020 ) ವರದಿಯಾಗಿರುತ್ತದೆ .

ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್ – 19 ವೈರಾಣು ಹರಡಂದಂತ ಹಗಲು – ರಾತ್ರಿಯೆನ್ನದೇ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಕೊಪ್ಪಳ ಜಿಲ್ಲಾಧಿಕಾರಿಗಳಾದ ಪಿ . ಸುನೀಲ್ ಕುಮಾರ ಇವರು ಮೇಲಿನ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು , ಸದರಿ ವಿಷಯವನ್ನು ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದು , ಮಾನ್ಯ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳು , ಒಳಾಡಳಿತ ಇಲಾಖೆ , ಬೆಂಗಳೂರುರವರ ಆದೇಶ ಸಂಖ್ಯೆ ಸಂ / ಹೆಚ್‌ಡಿ / ಎಸಿಎಸ್ / 51 / 2020 ದಿ : 15 – 04 – 2020 ಉಲ್ಲೇಖಿಸಿ , ಕೋವಿಡ್ – 19 ವೈರಸ್ ವೈರಾಣು ಸೋಂಕು ಹರಡುವಿಕೆ ಹಿನ್ನಲೆಯಲ್ಲಿ primary and secondary Contact ವ್ಯಕ್ತಿಗಳ ಸಿ . ಡಿ . ಆರ್ . ಮಾಹಿತಿಯನ್ನು ಸಲ್ಲಿಸಲು , ಕೊಪ್ಪಳ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಪತ್ರವನ್ನು ( ಪತ್ರ ಸಂ ; ಕಂದಾಯ / ಕೋವಿಡ್ – 19 / 01 / 2020 – 21 ) ಬರೆದಿರುತ್ತಾರೆ . ಸದರಿ ಘಟನೆ ಘಟಿಸಿ ಇಂದಿಗೆ ಒಂದು ವಾರ ಕಳೆದಿದ್ದರೂ , ಪ್ರಕರಣದ ಸತ್ಯಾಂಶ ಇನ್ನೂ ಹೊರಬರದಿರುವುದು ದುದೃಷ್ಟಕರವೇ ಸರಿ . ಪ್ರಯಕ್ತ ಇಡೀ ವಿಶ್ವವೇ ಕೋವಿಡ್ – 19 ವೈರಾಣುವಿಗೆ ತತ್ತರಿಸಿದ್ದರೂ , ಇದು ಕೆಲವರಿಗೆ ಅಕ್ರಮ ಚಟುವಟಿಕೆಗಳಿಗೆ ದಾರಿಯಾಗಿದ್ದು , ಸೂಕ್ಷ್ಮಕಾಲದಲ್ಲಿ ಬದುಕುತ್ತಿರುವ ಈ ಸಂದರ್ಭದಲ್ಲಿ ಈ ವಿಷಯವನ್ನು ತಾವುಗಳು ಗಂಭೀರವಾಗಿ ಪರಿಗಣಿಸಿ , ಸಮಾಜಕ್ಕೆ ಮಾರಕವಾಗುವಂತಹ ಘಟನೆಗಳನ್ನು ಮರುಕಳಿಸದಂತೆ , ಸರ್ಕಾರದ ವತಿಯಿಂದ , ಸೂಕ್ತ ತನಿಖೆಯನ್ನು ನಡೆಸಿ , ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ಈ ಮೂಲಕ ಅಗ್ರಹಿಸುತ್ತೇನೆ . ವಂದನಗಳೊಂದಿಗೆ ,

ಶಿವರಾಜ್ ಎಸ್ . ತಂಗಡಗಿ

Please follow and like us:
error