ಪ್ರಾಥಮಿಕ ಮತ್ತು ದ್ವಿತೀಯಾ ಸಂಪರ್ಕಿತರ ಮಾಹಿತಿ “ಕೋವಿಡ್-19 ಆ್ಯಪ್”ಗೆ ಸೇರಿಸಿ : ಡಿ.ಸಿ


ಕೊಪ್ಪಳ,  : ಕೋವಿಡ್-19 ದೃಡಪಟ್ಟವರ ಸಂಪರ್ಕದಲ್ಲಿರುವ ಪ್ರಾಥಮಿಕ ಮತ್ತು ದ್ವಿತೀಯಾ ಸಂಪರ್ಕಿತರನ್ನು ಪತ್ತೆ ಹಚ್ಚಿ “ಕೋವಿಡ್-19 ಆ್ಯಪ್”ನಲ್ಲಿ ನಮೂದಿಸಬೇಕು ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಅವರು ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರದಂದು ಆಯೋಜಿಸಲಾಗಿದ್ದ ಕೊರೋನಾ ಪ್ರಾಥಮಿಕ ಮತ್ತು ದ್ವೀತಿಯಾ ಸಂಪರ್ಕಿತರನ್ನು ಪತ್ತೆಹಚ್ಚಲು ರಚಿಸಲಾದ ಕೋವಿಡ್-19 ಆ್ಯಪ್‌ಬಳಕೆ ಕುರಿತು ರಚಿತ ತಂಡಗಳಿಗೆ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕೊರೋನಾ ಪತ್ತೆ ಹಚ್ಚಲು 270ಕ್ಕೂ ಹೆಚ್ಚು ತಂಡಗಳನ್ನು ರಚಿಸಲಾಗಿದ್ದು.  ಪ್ರತಿ ಗ್ರಾಮ ಪಂಚಾಯತಿಗೆ ಒಂದು ತಂಡ ಹಾಗೂ ನಗರ ಪ್ರದೇಶದಲ್ಲಿ ಎರಡು ವಾರ್ಡುಗಳಿಗೆ ಒಂದು ತಂಡದAತೆ ರಚಿಸಲಾಗಿದೆ.  ತಂಡಗಳು ಸೊಂಕಿತರನ್ನು ಪತ್ತೆ ಹಚ್ಚವುದರ ಜೊತೆ ಸೊಂಕಿತರ ಪ್ರದೇಶಗಳನ್ನು ಪತ್ತೆ ಮಾಡಬೇಕು.  ಅಶಾ ಕಾರ್ಯಕರ್ತರು, ಅಂಗವನವಾಡಿ ಕಾರ್ಯಕರ್ತರನ್ನು ನಿಮ್ಮ ಕಾರ್ಯ ವೈಖರಿಯಲ್ಲಿ ತೊಡಗಿಸಿಕೊಂಡು ವೇಗವಾಗಿ ಕೆಲಸ ಮಾಡಬೇಕು.  ತಂಡದ ನಾಯಕರು ಕೋವಿಡ್-19 ಆ್ಯಪ್ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡು, ಕೋವಿಡ್-19 ಸೊಂಕಿತರ ಮಾಹಿತಿಯನ್ನು ತಂಡದ ಸದಸ್ಯರಿಂದ ಪಡೆದು ಸೊಂಕಿತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ, ಅವಶ್ಯವಿದ್ದಲ್ಲಿ ಚಿಕಿತ್ಸಗೆ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು.  ರೋಗಿಯು ಬೇರೆ ಬೇರೆ ರೋಗಗಳಿಂದ ಬಳಲುತ್ತಿದ್ದರೆ ಅವುಗಳ ಮಾಹಿಯನ್ನು ಕಲೆ ಹಾಕಬೇಕು.  ಕೊರೋನಾ ಸೊಂಕಿನ ಲಕ್ಷಣಗಳು ಕಂಡು ಬಂದಲ್ಲಿ ಅಂತಹ ವ್ಯಕ್ತಿಗಳನ್ನು ಕೂಡಲೆ ಚಿಕಿತ್ಸೆಗೆ ಆಸ್ಪತ್ರೆಗೆ ಕಳುಹಿಸಬೇಕು.  ಆಸ್ಪತ್ರೆಗೆ ಕಳುಹಿಸಲು ತಡವಾದಲ್ಲಿ ಲ್ಯಾಬ್‌ಟೆಕ್ನಿಷಿಯನ್ ಅವರ ಸಹಾಯದಿಂದ ಸ್ಥಳದಲ್ಲಿಯೇ ಸ್ವಾಬ್ ಟೆಸ್ಟ್ ಮಾಡಿಸಿ ವರದಿಯನ್ನು ಕೋವಿಡ್-19 ಆ್ಯಪ್‌ನಲ್ಲಿ ಅಪ್ಲೋಡ್ ಮಾಡಬೇಕು.  ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಡಳಿತಕ್ಕೆ ಸಂಪರ್ಕಸಬಹುದು ಎಂದರು.
ಜಿಲ್ಲೆಯಲ್ಲಿ ಒಟ್ಟು 29 ಸ್ಯಾಂಪಲ್ ಸೆಂಟರ್‌ಗಳಿದ್ದು, ನಿತ್ಯ 1 ಸಾವಿರ ಸ್ಯಾಂಪಲ್‌ಗಳನ್ನು ಕಲೆ ಹಾಕುವ ಸಾಮರ್ಥ್ಯ ಹೊಂದಿದೆ.  ಹೆಚ್ಚಿನ ಸಂಖ್ಯೆ ಸ್ಯಾಂಪಲ್‌ಗಳು ಬಂದರು ಸಹ ಅವುಗಳ ಫಲಿತಾಂಶವನ್ನು ನೀಡುವ ಶಕ್ತಿಯನ್ನು ಸ್ಯಾಂಪಲ್ ಸೆಂಟರ್‌ಗಳು ಹೊಂದಿವೆ.  ಸರಿಯಾದ ಸಮಯಕ್ಕೆ ಸೊಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿರುವುದೆ ಜಿಲ್ಲೆಯಲ್ಲಿ ಕೋವಿಡ್-19 ಸಾವಿನ ಸಂಖ್ಯೆ ಹೆಚ್ಚಾಗಲು ಮುಖ್ಯ ಕಾರಣವಾಗಿದ್ದು, ಪ್ರಾಥಮಿಕ ಮತ್ತು ದ್ವಿತೀಯಾ ಸಂಪರ್ಕಿತರ ಪತ್ತೆ  ಮತ್ತು ಗಂಟಲು ದ್ರವ ಪರೀಕ್ಷೆ ಮಾಡಿಸುವುದು ಅತ್ಯವಶ್ಯಕವಾಗಿರುತ್ತದೆ.  ಈ ನಿಟ್ಟಿನಲ್ಲಿ ದೈಹಿಕ ಶಿಕ್ಷಕರನ್ನು ಒಳಗೊಂಡ ತಂಡಗಳು ಪ್ರಾಥಮಿಕ ಮತ್ತು ದ್ವೀತಿಯಾ ಸಂಪರ್ಕಿತರನ್ನು ಪತ್ತೆ ಹಚ್ಚಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸುವುದರ ಜೊತೆಗೆ ಅವರನ್ನು ಹೋಮ್ ಕ್ವಾರಂಟೈನ್‌ನಲ್ಲಿ ಇರುವಂತೆ ತಿಳಿಸಬೇಕು ಎಂದು ಹೇಳಿದರು.
ಜಿಲ್ಲೆಯ ಸುತ್ತಮುತ್ತ ಅಂತರ್ ಜಿಲ್ಲಾ ಗಡಿ ಭಾಗಗಳಿದ್ದು, ಅಂತರ್ ಜಿಲ್ಲಾ ಪ್ರಯಾಣಿಕರ ಮತ್ತು ವ್ಯವಾಹಾರಿಕರ ಮಾಹಿತಿಯು ಪಡೆಯುವುದು ಅಗತ್ಯವಾಗಿದೆ.  ಕೊರೋನಾ ಸೊಂಕಿಗೆ ಇನ್ನೂ ಲಸಿಕೆ ಲಭ್ಯವಾಗದ ಕಾರಣ ಸೊಂಕಿತರನ್ನು ಪತ್ತೆ ಹಚ್ಚುವ ತಂಡಗಳಿಗೆ  ಆರ್ಯುವೇದಿಕ್ ಮತ್ತು ಹೋಮಿಯೋಪತಿ ಔಷಧಿಗಳನ್ನು ನೀಡಲಾಗುತ್ತದೆ.  ರಚಿಸಲಾದ ತಂಡಗಳು ಸೊಂಕಿತರನ್ನು ಪತ್ತೆ ಹಚ್ಚುವ ಕಾರ್ಯ ವೈಖರಿಯಲ್ಲಿ ನಿಧಾನ ಮಾಡಿದರೆ, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂಬ ಎಚ್ಚರವಿರಲಿ.  ಜಿಲ್ಲೆಯಲ್ಲಿ ಕೊರೋನಾ ಸೊಂಕಿತರನ್ನು ಪತ್ತೆ ಮಾಡಲು ಸ್ವ-ಇಚ್ಚೆಯಿಂದ ವಾಲೆಂಟರಿಯಾಗಿ ಕಾರ್ಯ ನಿರ್ವಹಿಸುವ ಯುವಕರು ಸೇರಬಯಸುವವರಿಗೆ ವಾಟ್ಸಪ್ ಗ್ರೂಪ್ ನಂಬರ್ ನೀಡಲಾಗುತ್ತದೆ.  ಆ ಗುಂಪಿಗೆ ಸೇರಿ ಆಸಕ್ತ ಯುವಕರು ಕಾರ್ಯ ನಿರ್ವವಹಿಸಬಹುದಾಗಿದೆ ಎಂದರು.
ತರಬೇತಿ ಕಾರ್ಯಾಗಾರದಲ್ಲಿ ದೈಹಿಕ ಶಿಕ್ಷಕರು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸೇರಿದಂತೆ ಕೊರೋನಾ ಪತ್ತೆ ಹಚ್ಚಲು ರಚಿಸಲಾದ ತಂಡದ ಸದಸ್ಯರು ಉಪಸ್ಥಿತರಿದ್ದರು.

Please follow and like us:
error