ಪ್ರಭಾವಿ ಕಾಂಗ್ರೆಸ್ ಮುಖಂಡರು ಜೆಡಿಎಸ್ ಗೆ ಸೇರ್ಪಡೆ- ಶ್ರೀಕಂಠೇಗೌಡ

ಕೊಪ್ಪಳದ ಪ್ರಭಾವಿ ಕಾಂಗ್ರೆಸ್ ಮುಖಂಡರು ಜೆಡಿಎಸ್ ಸೇರಲಿದ್ದಾರೆ..ಮಾಜಿ ಸಿಎಂ ಕುಮಾರಸ್ವಾಮಿರವರ ಜೊತೆ ಚರ್ಚೆ ನಡೆದಿದೆ.ಮಾಜಿ ಸಂಸದ ಹೆಚ್ ಜಿ ರಾಮುಲು, ಮಾಜಿ ಎಂ ಎಲ್ ಸಿ ಹೆಚ್ ಆರ್ ಶ್ರೀನಾಥ್, ಕರಿಯಣ್ಣ ಸಂಗಟಿ ಜೆಡಿಎಸ್ ಸೇರಿಸಿಕೊಳ್ಳಲು ಚರ್ಚೆ ನಡೆದಿದೆ ಎಂದು ಕೊಪ್ಪಳದಲ್ಲಿ ವಿಧಾನಪರಿಷತ್ತು ಸದಸ್ಯ ಕೆ.ಟಿ ಶ್ರೀಕಂಠೆಗೌಡ ಹೇಳಿದ್ದಾರೆ. ಪತ್ರಿಕಾಭವನದಲ್ಲಿ ಮಾತನಾಡಿದ ಅವರು

ನಾವು ರಾಷ್ಟ್ರೀಯ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಲ್ಲ.ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರೋದು ಪಕ್ಕಾ.ಪಕ್ಷ ಬಿಟ್ಟಿರುವ ಶಾಸಕರ ಕ್ಷೇತ್ರದಲ್ಲಿ ಜೆಡಿಎಸ್ ಮತ್ತೆ ಗೆಲ್ಲುತ್ತೆ.ಬಂಡಾಯ ಶಾಸಕರ ವಿರುದ್ಧ ನಾವು ಗೆದ್ದೆ ಗೇಲ್ಲುತ್ತೇವೆ. ಜೆಡಿಎಸ್ ನಾಯಕರನ್ನು ತಯಾರು ಮಾಡುವ ವಿಶ್ವವಿದ್ಯಾಲಯ.ಜೆಡಿಎಸ್ ಬಿಟ್ಟು ಹೋದ ಶಾಸಕರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ 21 ಕ್ಕೆ ಕೊಪ್ಪಳಕ್ಕೆ ಮಾಜಿ ಸಿಎಂ ಆಗಮನದಿಂದ ಹೊಸ ಪರ್ವ ಸುರುವಾಗುತ್ತೆ ಎಂದು ಹೇಳಿದರು.

ಜನಾಭಿಪ್ರಾಯ ಹಾಗೂ ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತೆವೆಂದು ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಉಸ್ತುವಾರಿ ನಾಗರಾಜ್, ರಾಜ್ಯ ಪ್ರದಾನ ಕಾರ್ಯದರ್ಶಿ ಕೆ.ಎಂ.ಸಯ್ಯದ್, ಜಿಲ್ಲಾದ್ಯಕ್ಷ ಪ್ರದೀಪಗೌಡ, ಕಾರ್ಯಾದ್ಯಕ್ಷ ವಿರೇಶ ಮಹಾಂತಯ್ಯನಮಠ, ವಕ್ತಾರ ಮೌನೇಶ ವಡ್ಡಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.