ಪ್ರಧಾನ ಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ ನ. : ಕೊಪ್ಪಳ ಜಿಲ್ಲೆಯ ಗಂಗಾವತಿಯ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರದ ವತಿಯಿಂದ ಉದ್ಯೋಗ ತರಬೆತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕೇಂದ್ರ ಸರ್ಕಾರದ ಮಹತ್ವ ಪೂರ್ಣ ಯೋಜನೆ ಪ್ರಧಾನ ಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆ ಯಡಿ ಉದ್ಯೋಗ ತರಬೆತಿಗಾಗಿ ಕೊಪ್ಪಳ ಜಿಲ್ಲೆಯ ಎಲ್ಲಾ ತಾಲೂಕಿನ ಗ್ರಾಮಾಂತರ ನಿರುದ್ಯೋಗಿ ಯುವಕ, ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿಯು ಎರಡು ತಿಂಗಳ ಅವಧಿಯದ್ದಾಗಿದ್ದು, ಸೋಲಾರ್ ಪಿ.ವಿ. ಇನ್‍ಸ್ಟಾಲ್ಲರ್-ಎಲೆಕ್ಟ್ರಿಕಲ್, ಮೊಬೈಲ್ ಫೀನ್ ಹಾರ್ಡವೇರ್ ರಿಪೇರಿ ಟೆಕ್ನಿಶಿಯನ್, ಫೀಲ್ಡ್ ಟೆಕ್ನಿಶಿಯನ್ (ಗೃಹ ಬಳಕೆ ವಸ್ತುಗಳು), ಸರಭರಾಜು (ಟ್ರಾಕಿಂಗ್ ನಿರ್ವಾಹಕ), ಫಿಟ್ಟರ್ ಎಲೆಕ್ಟ್ರಿಕಲ್ ಅಸಂಬ್ಲಿ, ಇದರ ಜೊತೆಗೆ ಬೆಸಿಕ್ ಕಂಪ್ಯೂಟರ್ ಮತ್ತು ವ್ಯಕ್ತಿತ್ವ ವಿಕಾಸನವನ್ನು ತರಬೇತಿಯಲ್ಲಿ ಬೋದಿಸಲಾಗುವುದು.
ತರಬೇತಿ ಪಡೆಯಲು 18 ರಿಂದ 35 ವರ್ಷ ವಯೋಮಿತಿಯಲ್ಲಿರಬೇಕು. 8ನೇ ತರಗತಿ ಮೇಲ್ಪಟ್ಟು ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಐ.ಟಿ.ಐ., ಡಿಪ್ಲೋಮಾ, ಪದವಿ ಪಾಸ್ ಅಥವಾ ಫೇಲ್ ಆದ ವಿದ್ಯಾರ್ಥಿಗಳು ತರಬೇತಿಯನ್ನು ಪಡೆಯಬಹುದಾಗಿದೆ. ತರಬೇತಿ ಪಡೆಯಲಿಚ್ಛಿಸುವವರು ತರಬೇತಿ ಕೇಂದ್ರಕ್ಕೆ ಬಂದು ನೋಂದಣಿ ಮಾಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ ಎಮ್.ಎಸ್.ಎಮ್.ಎಸ್. ರೂರಲ್ ಪಾಲಿಟೆಕ್ನಿಕ್ ಕಾಲೇಜ್ ಆವರಣ ರುದ್ರೇಶ್ವರ ನಗರ ರಾಯಚೂರು ರಸ್ತೆ ಮರಳಿ, ತಾಲೂಕು ಗಂಗಾವತಿ ಜಿಲ್ಲೆ ಕೊಪ್ಪಳ, ಇಲ್ಲಿಗೆ ಅಥವಾ ಮೊಬೈಲ್ ಸಂಖ್ಯೆ 8123297200, 7996422481, 9986102333, 7829709420 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಗಂಗಾವತಿಯ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರದ ವ್ಯವಸ್ಥಾಪಕ ವಿರುಪಾಕ್ಷಯ್ಯಸ್ವಾಮಿ ಹಿರೇಮ ತಿಳಿಸಿದ್ದಾರೆ.