ಪ್ರತಿಯೊಬ್ಬ ಭಾರತೀಯ ಗಾಂಧಿಯವರ ಅಭಿಮಾನಿಯಾಗಿದ್ದಾರೆ: ಸಂಸದ ಸಂಗಣ್ಣ ಕರಡಿ

ಕೊಪ್ಪಳ, ಅ.೦೨: ಸ್ವಾತಂತ್ರ್ಯಪೂರ್ವದಿಂದಲೇ ಪ್ರತಿಯೊಬ್ಬ ಭಾರತೀಯನೂ ಗಾಂಧಿಯವರ ಅಭಿಮಾನಿಯಾಗಿದ್ದಾರೆ, ಅಷ್ಟೇ ಏಕೆ, ವಿದೇಶೀಯರೂ ಅವರ ಸರಳತೆ ಮತ್ತು ಸಮರ್ಥ ನಾಯಕತ್ವವನ್ನು ಮೆಚ್ಚಿ ಅವರ ಅಭಿಮಾನಿಯಾಗುತ್ತಿದ್ದರು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಸಂಸದ ಕರಡಿ ಸಂಗಣ್ಣ ಹೇಳಿದರು.
ಅವರು ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಹಾತ್ಮ ಗಾಂಧಿಜೀಯವರ ೧೫೦ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅಂದಿನ ದಿನಗಳಲ್ಲಿ ಅವರು ತಮ್ಮ ಸಾಮಾಜಿಕ ಮತ್ತು ವೈಯಕ್ತಿಕ ಜೀವನವನ್ನು ಅತ್ಯಂತ ಸಮತೋಲನದಲ್ಲಿ ಕಾಯ್ದಿರಿಸಿಕೊಳ್ಳುತ್ತಿದ್ದರು. ಇಡಿ ದೇಶಕ್ಕೇ ಮಾದರಿಯಾದ ಅವರಂತಹ ಇನ್ನೋರ್ವ ವ್ಯಕ್ತಿಯನ್ನು ಇಂದು ಕಾಣುವುದು ಕಷ್ಟಕರ.
ಭಾರತದಲ್ಲಿ ಮಾತ್ರವಲ್ಲದೇ ಇಡಿ ವಿಶ್ವದ ಹಲವು ರಾಷ್ಟ್ರಗಳು ಗಾಂಧೀಜಿಯವರಿಗೆ ಆಯಾ ದೇಶದ ಉನ್ನತ ಗೌರವವನ್ನು ನೀಡಿ ಗೌರವಿಸಿವೆ. ಅಹಿಂಸೆ ಮೂಲಕ ಗೆದ್ದ ಯುದ್ಧದ ಮೂಲಕ ಇಂದಿಗೂ ಗಾಂಧೀಜಿ ಇಡಿ ವಿಶ್ವಕ್ಕೆ ಸವಾಲಾಗುತ್ತಾರೆ.
ಯಾವುದೇ ವ್ಯಕ್ತಿಗೆ ಮಹಾತ್ಮಾ ಎಂಬ ಬಿರುದು ಸಿಗಲು ಅವರ ಅಂತರಂಗದಲ್ಲಿರುವ ಸದ್ಗುಣಗಳು ಬೇರೆಯವರಿಗೆ ಮಾದರಿಯಾಗಬೇಕು. ಗಾಂಧೀಜಿಯವರಲ್ಲಿದ್ದ ಅಹಿಂಸಾ ತತ್ವ, ಆಧ್ಯಾತ್ಮಿಕ, ಧಾರ್ಮಿಕ ಭಾವನೆಗಳು, ಪ್ರಾಮಾಣಿಕತೆ, ಶಿಸ್ತು, ನಿಷ್ಠೆ, ಅಭಿಲಾಷೆ ಮೊದಲಾದ ಗುಣಗಳು ಅವರ ಸುತ್ತ ಇರುವ ಎಲ್ಲರನ್ನೂ ಪ್ರೇರೇಪಿಸುತ್ತಿತ್ತು. ಈ ಗುಣಗಳೇ ಅವರಿಗೆ ಮಹಾತ್ಮಾ ಎಂಬ ಬಿರುದು ಪಡೆಯಲು ಕಾರಣವಾಯಿತು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ಚಂದ್ರಶೇಖರ ಕವಲೂರ, ಎಂ.ವಿ ಪಾಟೀಲ, ಪ್ರಕಾಶ ಪರ್ವತಗೌಡರ, ಸುನೀಲ್ ಹೆಸರೂರ, ಸಯ್ಯದ್ ನಾಸೀರ್ ಹುಸೇನ್, ಮಹೇಶ ಅಂಗಡಿ, ರವಿಚಂದ್ರ ಮಾಲಿಪಾಟೀಲ, ಬಿ.ಜಿ ಗದುಗಿನಮಠ, ಉಮೇಶ ಕುರುಡೇಕರ, ರಾಜಶೇಖರಗೌಡ ಆಡೂರ, ಶಿವಕುಮಾರ ಕುಕನೂರ, ಅಮಿತ ಕಂಪ್ಲೀಕರ, ಮಧುರಾ ಕರಣಂ, ವಿದ್ಯಾ ಹೆಸರೂರ, ವೀಣಾ ಬನ್ನಿಗೊಳ, ಸುವರ್ಣ ನೀಲರಗಿ, ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ ಹಾಗೂ ಅನೇಕರು ಉಪಸ್ಥಿತರಿದ್ದರು.

Please follow and like us:
error