ಕೊಪ್ಳಳ- ಸಾಮಾಜೀಕ ಸೇವಾ ಮನೋಭಾವನೆಯನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳುವದು ಅವಶ್ಯವಿದೆ ಎಂದು ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಶರಣಬಸಪ್ಪ ಬಿಳಿಯೆಲೆ ಅಭಿಪ್ರಾಯಯಪಟ್ಟರು. ಅವರು ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದಿಂದ ಬಿ ಇಡಿ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಂಡ ಪೌರತ್ವ ತರಬೇತಿ ಶಿಬಿರದ ಎರಡನೇ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಾಮಾಜಿಕ ಸೇವೆ ನಿಸ್ವಾರ್ಥ ಸೇವೆಯಾಗಿದ್ದು ಇದರಿಂದ ಯಾರಿಂದ ಎನನ್ನೂ ನೀರಿಕ್ಷೆ ಮಾಡಲು ಬರುವುದಿಲ್ಲ. ನಿಸ್ವಾರ್ಥ ಭಾವನೆಯಿಂದ ಮಾಡಿದ ಸಮಾಜಸೇವೆ ಅತ್ಯಂತ ಮಹತ್ವಪೂರ್ಣವಾದುದು. ಸಮಾಜದಲ್ಲಿ ಶಿಕ್ಷಕ ವೃತ್ತಿ ವಿಶೇಷವಾದ ಸ್ಥಾನವಿದ್ದು, ಸಾಮಾಜಿಕ ಸೇವೆಗೆ ಉತ್ತಮವಾದ ಉದಾಹರಣೆಯಾಗಿದೆ. ಅಂತಹ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸಂಸ್ಥೆಯ ಪ್ರಾಚಾರ್ಯರಾದ ಡಾ|| ವಿಜಯಕುಮಾರ ಪಲ್ಲೇದ ಮಾತನಾಡಿ ಸಮಾಜ ಸೇವಾ ಮನೋಭಾವನೆಯನ್ನು ಬೆಳೆಸುವಲ್ಲಿ ಇಂತಹ ಶಿಬಿರಗಳು ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ ಎಂದು ಹೇಳಿದರು. ಸಮಾರಂಭದಲ್ಲಿ ಸಹಾಯಕ ಪ್ರಾಧ್ಯಾಪಕರಾದ ರೇಣುಕಾನಂದ ಅಂಗಡಿ, ಜಿ.ಎಸ್.ಸೊಪ್ಪಿಮಠ. ಶೈಲಜಾ ಅರಳಲೇಮಠ. .ನಂದಿನಿಶೆಟ್ಟರ್. ಜಂಭಯ್ಯ.ಅನಿತಾ.ದೇವರಾಜ ಸೇರಿದಂತೆ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳು ಹಾಜರಿದ್ಧರು. ಮಲ್ಲಪ್ಪ ಪ್ರಾರ್ಥಿಸಿದರು. ಶ್ವೇತಾ ಸ್ವಾಗತಿಸಿದರು. ತರ್ಮಿನ್ ಬೆಗಂ ನಿರೂಪಿಸಿದರು. ಸರೋಜಾ ವಂದಿಸಿದರು.
ಪ್ರತಿಯೊಬ್ಬರಲ್ಲಿ ಸೇವಾ ಮನೋಭಾವನೆ ಅವಶ್ಯ-ಶರಣಬಸಪ್ಪ ಬಿಳಿಯೆಲೆ
Please follow and like us: