ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೋಲಿಸ್ ಕ್ರೌರ್ಯ ಖಂಡಿಸಿ ಎಐಡಿಎಸ್ಓ ಪ್ರತಿಭಟನೆ

Koppal :  ಭಾನುವಾರ ರಾತ್ರಿ ನವದೆಹಲಿಯ ಜಾಮಿಯಾ ಇಸ್ಲಾಮಿಯಾ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಪೋಲಿಸ್ ರಿಂದ ನಡೆದ ಗೋಲಿ ಬಾರ್, ಲಾಠಿ ಚಾರ್ಜ ಖಂಡಿಸಿ ಡಿ ಎಸ್ ದಿಂದ ಪ್ರತಿಭಟನೆ ನಡೆಸಲಾಯಿತು. ಕೊಪ್ಪಳದ ಅಶೋಕ ವೃತ್ತದಬಳಿ ನೂರಾರು ವಿದ್ಯಾರ್ಥಿಗಳು ಸೇರಿ ಪ್ರತಿಭಟನೆ ನಡೆಸಿದರು.

 ಪ್ರತಿಭಟನಾ ಸಭೆ ಯನ್ನು ಉದ್ದೇಶಿಸಿ ಮಾತನಾಡಿದ ರಮೇಶ ವಂಕಲಕುಂಟಿ. ಐಡಿ ಎಸ್ ಜಿಲ್ಲಾ ಸಂಚಾಲಕರು ಮಾತನಾಡಿ, ಪ್ರತಿಭಟನಾ ನಿರತ ಜಾಮೀಯಾ ಮಿಲಿಯಾ  ಇಸ್ಲಾಮಿಯಾ ವಿ.ವಿ ಹಾಗು ಅಲಿಘರ್ ಮುಸ್ಲಿಮ್ ವಿವಿ ವಿದ್ಯಾರ್ಥಿಗಳ ಮೇಲೆ ಬಾನುವಾರದಂದು   ಪೊಲೀಸರು ನಡೆಸಿರುವ ಗುಂಡಿನ ದಾಳಿಯನ್ನು ಎಐಡಿಎಸ್ ವಿದ್ಯಾರ್ಥಿ ಸಂಘಟನೆಯು ಉಗ್ರವಾಗಿ ಕಟುಶಬ್ಧಗಳಲ್ಲಿ ಖಂಡಿಸುತ್ತದೆ  ಎಂದು ಹೇಳಿದರು .

 

ಜಾಮೀಯಾ ಮಿಲಿಯಾ  ಇಸ್ಲಾಮಿಯಾ ವಿ.ವಿ ವಿದ್ಯಾರ್ಥಿಗಳು ಮುಂಚಿತವಾಗಿ ತಿಳಿಸಿಯೇ, ಯಾವುದೇ ಹಿಂಸೆಗೆ ಆಸ್ವದವಿಲ್ಲದಂತೆ, ತಮ್ಮ ಬೇಡಿಕೆಗಳಿಗಾಗಿ  ಪ್ರತಿಭಟನೆಯನ್ನು ಶಾಂತಿಯುತವಾಗಿ ಮುಂದುವರೆಸುತ್ತಿದ್ದರು. ಸಂದರ್ಭದಲ್ಲಿ ಕೆಲವು ಸಮಾಜ ಘಾತುಕ ಶಕ್ತಿಗಳು ಹಿಂಸಾಚಾರಕ್ಕಿಳಿದರೆಂಬ ನೆಪದಲ್ಲಿ, ಇಂತಹ ಸಮಾಜಘಾತುಕ ಶಕ್ತಿಗಳನ್ನು ಪತ್ತೆ ಹಚ್ಚುವ ಸಲುವಾಗಿ ಸಮಗ್ರವಾಗಿ ತನಿಖೆ ನಡೆಸುವ ಬದಲು, ಪೊಲೀಸರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಹೇಡಿಗಳಂತೆ ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಪ್ರತಿಭಟನಾಕಾರರಲ್ಲಿ ಹಲವರು ಗುಂಡಿನೇಟಿಗೆ ತುತ್ತಾಗಿ ಗಾಯಗೊಂಡು, ಆಸ್ವತ್ರೆಗಳಿಗೆ ದಾಖಲಾಗಿದ್ದಾರೆ. ದಿನ ದೇಶದ ವಿದ್ಯಾರ್ಥಿ ಚಳುವಳಿಯ ಇತಿಹಾಸದಲ್ಲಿ ಕರಾಳವಾದ ದಿನವಾಗಿದೆ.

 

ಎಐಡಿಎಸ್ ಒನ ಇನ್ನೋಬ್ಬ ಕಾರ್ಯಕರ್ತರಾದ ದೇವರಾಜ ಹೊಸಮನಿ ಮಾತನಾಡಿ, ಇಡೀ ದೇಶವ್ಯಾಪಿ ವಿರೋಧಿಸಲ್ಪಡುತ್ತಿರುವಕೋಮು ಪಕ್ಷಪಾತದ ಆಧಾರಿತವಾದ ನಾಗರೀಕತ್ವ(ತಿದ್ದುಪಡಿ) ಮಸೂದೆಯನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿ ಸಮುದಾಯದ ಪ್ರಜಾತಾಂತ್ರಿಕ ಹಕ್ಕನ್ನು ನಾವು ಎತ್ತಿಹಿಡಿಯುತ್ತೇವೆ. ಮತ್ತು ಹಾಗೆಯೇ  ಕೂಡಲೇ ಇಂತಹ ನಿರ್ದಾಕ್ಷಿಣ್ಯ ಹಾಗೂ ಮಾರಣಾಂತಿಕವಾದ ದಾಳಿಗಳಂತಹ ಪ್ರಯತ್ನಗಳನ್ನು ನಿಲ್ಲಿಸಬೇಕೆಂದು  ಪೊಲೀಸ್ ಆಡಳಿತ ಮತ್ತ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡತ್ತ್ತ್ತೇವೆ! ಇಂತಹ ಹಿಂಸಾಚಾರಗಳ ಹಿಂದಿರುವ ಘಾತುಕ ಶಕ್ತಿಗಳನ್ನು ಪತ್ತೆ ಹಚ್ಚಬೇಕೆಂದು ನಾವು ಒತ್ತಾಯಿಸುತ್ತೇವೆ. ಹಾಗೆಯೇ ಇಂತಹ ಭಂiiಂಕರ ದಾಳಿಗಳಿಗೆ ಹೊಣೆಗಾರರಾಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕಠಿಣವಾದ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಸಹ ನಾವು ಒತ್ತಾಯಿಸುತ್ತಿದ್ದೇವೆ. ಹಾಗೆಯೇ ರಾಜ್ಯಾಧಿಕಾರದ ದಬ್ಬಾಳಿಕೆ ಮತ್ತು ಅದರ  ಅಪ್ರಜಾತಾಂತ್ರಿಕ ಹಾಗೂ ಅನೈತಿಕ ಆಳ್ವಿಕೆಯ ವಿರುದ್ಧ ನಡೆಸುತ್ತಿರುವ ಹೋರಾಟದಲ್ಲಿ ಶಾಂತಿಯುತ ಪರಿಸ್ಥಿತಿಯನ್ನು ಕಾಯ್ದುಕೊಂಡು ಹೋರಾಟವನ್ನು ಮಂದುವರೆಸಬೇಕೆಂದು ಜನ ಸಮುದಾಯ ಅದರಲ್ಲೂ ನಿರ್ದಿಷ್ಟವಾಗಿ ವಿದ್ಯಾರ್ಥಿ ಸಮುದಾಯಕ್ಕೆ ನಾವು ಮನವಿ ಮಾಡಿಕೊಳ್ಳುತ್ತೇವೆ ಎಂದರು.

ಈ ಸಂದರ್ಭದಲ್ಲಿ  ಮಲ್ಲಿ ಕಾರ್ಜುನ , ಬಸವರಾಜ , ಅಬಿಲಾಷ, ಯಮನೂರ, ವಿನೋದ್, ಮಲ್ಲಯ್ಯ, ಸಿದ್ದಲಿಂಗಪ್ಪ, ಮೌಲಾಸಾಬ್, ಹುಸೇನ ಸಾಬ್ ಸುರೇಶ ಪಕೀರಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು,

Please follow and like us:
error