fbpx

ಪ್ರತಿಜ್ಞಾ ದಿನ ಪದಗ್ರಹಣಕ್ಕೆ ಸಾಕ್ಷಿಯಾದ ಸಾವಿರಾರು ಕೈ ಕಾರ್ಯಕರ್ತರು

ಕೊಪ್ಪಳ: ಕೆಪಿಸಿಸಿಯ ನೂತನ ಸಾರಥಿ ಡಿ.ಕೆ.ಶಿವಕುಮಾರ್ ಪದಗ್ರಹಣ ಸಮಾರಂಭವನ್ನು ಎಲ್ಲೆಡೆ ದೂರದರ್ಶನ, ವೆಬ್‌ಸೈಟ್, ವಿವಿಧ ಆ್ಯಪ್‌ಗಳ ಮೂಲಕ ಬೃಹತ್ ಟಿವಿ, ದೊಡ್ಡ ಪರದೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಲೈವ್ ಆಗಿ ವೀಕ್ಷಿಸಿದರು.

ಜಿಲ್ಲಾದ್ಯಂತ 200 ಕೇಂದ್ರಗಳಲ್ಲಿ ಸುಮಾರು 50 ಸಾವಿರ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನಲ್ಲಿ ನಡರದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಸಮಾರಂಭವನ್ನು ವೀಕ್ಷಿಸಿದರು.

ಡಿಸಿಸಿ ಕಚೇರಿಯಲ್ಲಿ ಕಾರ್ಯಕ್ರಮ ವೀಕ್ಷಿಸಲು ಮುಖಂಡರಾದಿಯಾಗಿ ಕಾರ್ಯಕರ್ತರು ಜಮಾಯಿಸಿದ್ದರು. ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ, ಮಾಜಿ ಸಂಸದ ಶಿವರಾಮಗೌಡ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ, ಜಿಪಂ ಸದಸ್ಯ ರಾಜಶೇಖರ ಹಿಟ್ನಾಳ, ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಟಗಿ, ಗುರುರಾಜ ಹಲಗೇರಿ, ಅಕ್ಬರ್ ಪಲ್ಟಾನ್, ಕಾಟನ್ ಪಾಷಾ, ರವಿ ಕುರಗೋಡ ಸೇರಿದಂತೆ ಇತರರು ಇದ್ದರು.

ಕಾರಟಗಿ, ಕನಕಗಿರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪದಗ್ರಹಣ ಸಮಾರಂಭವನ್ನು ಹಬ್ಬದಂತೆ ಅಚರಿಸಿದರು. ರಡ್ಡಿ ಶ್ರೀನಿವಾಸ ನೇತೃತ್ವದಲ್ಲಿ ಪದಗ್ರಹಣ ಸಮಾರಂಭ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು

ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಶ್ರೀಸಿದ್ದೇಶ್ವರ ಸಮುದಾಯ ಭವನದಲ್ಲಿ ಅಳವಂಡಿಯ ಕಾಂಗ್ರೆಸಿನ ಆನೇಕ ಕಾರ್ಯಕರ್ತರು ಪದಗ್ರಹಣ ಸಮಾರಂಭವನ್ನು ವೀಕ್ಷಿಸಿದರು. ಈ ಸಂಧರ್ಭದಲ್ಲಿ ತಾ.ಪಂ.ಸದಸ್ಯ ಸಿಧ್ಧಲಿಂಗ ಸ್ವಾಮಿ ಇನಾಮದಾರ, ಅನ್ವರ ಹುಸೇನ ಗಡಾದ,ಚೌಡಪ್ಪ ಜಂತ್ಲಿ,ಗುರುಬಸವರಾಜ ಹಳ್ಳಿಕೇರಿ ,ನಜೀರುದ್ದಿನ ಇನ್ನು ಅನೇಕರು ಇದ್ದರು.

Please follow and like us:
error
error: Content is protected !!