ಪ್ರಕೃತಿ ಮಡಿಲಿನ ಶಿಕ್ಷಣದಿಂದ ಚೈತನ್ಯಶೀಲ ಬದುಕು ಸಾಧ್ಯ – ಡಾ.ಅನೂಪ್ ಶೆಟ್ಟಿ

ಕೊಪ್ಪಳ : ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಬಾಲ್ಯ ಜೀವನದ ಹವ್ಯಾಸಗಳು ಮರಿಚಿಕೆಯಾಗುತ್ತಿವೆ. ನಮಗೆಲ್ಲಾ ಸಿಗುತ್ತಿದ್ದ ಬಾಲ್ಯದ ಬದುಕು ಈಗ ಇಲ್ಲವಾಗಿದೆ. ಆದ್ದರಿಂದ ಹೆಚ್ಚು ಗಿಡ ಮರಗಳನ್ನು ಬೆಳಸಿ ಪರಿಸರ ರಕ್ಷಣೆ ಮಾಡಿ. ಪ್ರಕೃತಿ ಮಡಿಲಿನಲ್ಲಿ ಚೈತನ್ಯಶೀಲರಾಗಿ ಶಿಕ್ಷಣ ಪಡೆಯುವಂತಹ ಎಲ್ಲಾ ಮಕ್ಕಳು ಗಿಡಗಳನ್ನು ಬೆಳೆಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ ಹೇಳಿದರು. ಅವರಿಂದು ಕೊಪ್ಪಳದ ಬಹಾದ್ದೂರ ಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಸಿ ನೆಡುವುದರ ಮೂಲಕ ಕಾರ?ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ.ಅನೂಪ್ ಶೆಟ್ಟಿ ಗಿಡಮರಗಳ ಜೊತೆ ಸಮಯ ಕಳೆಯುವುದು ಎಲ್ಲರಿಗೂ ಆನಂದ ಕೊಡುವಂಥಹದ್ದು. ಈಗಲೂ ನಮ್ಮ ಮನೆಯಲ್ಲಿ ವಿರಾಮದ ಸಮಯದಲ್ಲಿ ಗಿಡಗಳಿಗೆ ನೀರು ಹಾಕುವ ಕೆಲಸ ನನಗೆ ಖುಷಿ ಕೊಡುತ್ತದೆ. ನಗರ ಪ್ರದೇಶದಲ್ಲಿ ಬೆಳೆಯುತ್ತಿರುವ ನಾವು ಹಸಿರಿನ ಪ್ರಕೃತಿಯನ್ನು ಮತ್ತು ಹಳ್ಳಿಯ ಶುಭ್ರವಾತಾವರಣದಿಂದ ವಂಚಿತರಾಗುತ್ತಿದ್ದೇವೆ. ಹಸಿರನ್ನುಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಹಸಿರಿನ ಮತ್ತು ಭೂಮಿಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ವಕೀಲರ ಪರಿಷತ್ ಸದಸ್ಯೆ ಹಿರಿಯ ವಕೀಲೆ ಸಂದ್ಯಾ ಮಾದಿನೂರ ಶಾಲೆಯಲ್ಲಿ ವಿಶ್ವಪರಿಸರ ದಿನಾಚರಣೆ ಮಾಡುವುದರಿಂದ ಮಕ್ಕಳಲ್ಲಿ ಪರಿಸರ ರಕ್ಷಣೆಯ ಜವಾಬ್ದಾರಿ , ಜಾಗೃತಿ ಹೆಚ್ಚಾಗುತ್ತದೆ. ಅದೇ ರೀತಿ ಪಾಲಕರಿಗೂ ಮಕ್ಕಳು ಜವಾಬ್ದಾರಿಯನ್ನು ಬೆಳೆಸಬೇಕು ಎಂದು ಕರೆ ನೀಡಿದರು. ಸ್ಕೌಟ್ಸ್ ಗೈಡ್ಸ್ ನ ರಾಷ್ಟ್ರ ತರಬೇತುದಾರ ಜಯರಾಜ ಬೂಸದ ಮಾತನಾಡಿ ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಗಿಡ ಮರಗಳನ್ನು ನೆಡಬೇಕು ಅವುಗಳ ರಕ್ಷಣೆ ಮಾಡಬೇಕು ಇದರಿಂದ ನೆಮ್ಮದಿಯ ಬದುಕು ಸಾಧ್ಯ . ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಇಂತಹ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಡಾ. ಅನೂಪ್ ಶೆಟ್ಟಿಯವರಿಗೆ ಶಾಲೆಯವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ಸಂಸ್ಥೆಯ ಕಾರ್ಯದರ್ಶಿ ಆರ?.ಎಚ್.ಅತ್ತನೂರ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಣುಕಾ ಅತ್ತನೂರು ಉಪಸ್ಥಿತರಿದ್ದರು. ನಂತರ ಶಾಲಾ ಮಕ್ಕಳಿಂದ ಪರಿಸರ ಜಾಗೃತಿ ಜಾಥಾ ನಡೆಸಿ ಸಸಿಗಳನ್ನು ವಿತರಿಸಲಾಯಿತು.