ಪ್ರಕಾಶ ಕಂದಕೂರಗೆ ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ಗೌರವ’ಯಲ್ಲೋ ಡಿವೋಷನ್’ಗೆ ಎಫ್‌ಐಪಿ ರಿಬ್ಬನ್ ಗರಿ

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ರಾಣಾಘಾಟ್‌ನ ದಿ ಕ್ರಿಯೇಟಿವ್ ಐ ಇನ್ಸ್‌ಟಿಟ್ಯೂಟ್ ಆಫ್ ಫೋಟೋಗ್ರಫಿ ಸಂಸ್ಥೆಯಿಂದ ಏರ್ಪಡಿಸಲಾದ ` ದಿ ಕ್ರಿಯೇಟಿವ್ ಐ’ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆ-೨೦೨೦ರಲ್ಲಿ ನಗರದ ಛಾಯಾಗ್ರಾಹಕ ಪ್ರಕಾಶ ಕಂದಕೂರರ ಚಿತ್ರವೊಂದು ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿಯ ರಿಬ್ಬನ್ (ಎಫ್‌ಐಪಿ ರಿಬ್ಬನ್) ಗೌರವಕ್ಕೆ ಪಾತ್ರವಾಗಿದೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಕೇರೂರು ಗ್ರಾಮದಲ್ಲಿ ಅರಣ್ಯ ಸಿದ್ಧೇಶ್ವರ ಜಾತ್ರೆ ಸಂದರ್ಭದಲ್ಲಿ ನಡೆಯುವ ಭಂಡಾರ ಎರಚಾಡುವ ವಿಶಿಷ್ಟ ಸಂಪ್ರದಾಯವನ್ನು ಕಲಾತ್ಮಕವಾಗಿ ಸೆರೆಹಿಡಿದಿರುವ ಕಂದಕೂರರ ‘ಯಲ್ಲೋ ಡಿವೋಷನ್’ ಶೀರ್ಷಿಕೆಯ ಚಿತ್ರ ಸ್ಪರ್ಧೆಯ ಓಪನ್ ಕಲರ್ ವಿಭಾಗದಲ್ಲಿ ಈ ಗೌರವ ತಂದು ಕೊಟ್ಟಿದೆ. ಅಲ್ಲದೆ ಅವರ ಒಟ್ಟು ೪ ಚಿತ್ರಗಳು ಸಹ ಪ್ರದರ್ಶನಕ್ಕೆ ಆಯ್ಕೆಯಾಗಿರುವುದು ಗಮನಾರ್ಹ ಸಂಗತಿ.

ದೇಶದ ವಿವಿಧ ರಾಜ್ಯಗಳ ೩೩೭ ಜನ ಸ್ಪರ್ಧಿಗಳ ೧೨೦೦ ಕ್ಕೂ ಹೆಚ್ಚು ಛಾಯಾಚಿತ್ರಗಳು ಸ್ಪರ್ಧೆಗೆ ಆಗಮಿಸಿದ್ದವು. ಅಂತರಾಷ್ಟ್ರೀಯ ಖ್ಯಾತಿಯ ನರೇಂದು ಘೋಷ್, ಸೌಮೆನ್‌ದಾಸ್, ಡಾ.ಸಂಘಮಿತ್ರ ಸರ್ಕಾರ್, ದೀಪಂಕರ್ ದಾಸ್ ಗುಪ್ತಾ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಕೋವಿಡ್-೧೯ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜುಲೈ ಕೊನೆಯ ವಾರದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗುವುದು ಎಂದು ಸಂಘಟಕ ಸೌಗತ್ ಲಾಹಿರಿ ತಿಳಿಸಿದ್ದಾರೆ.

 

Please follow and like us:
error