ಪೌರತ್ವ ತಿದ್ದುಪಡಿ ಕಾಯ್ದೆ,ರಾಷ್ಟ್ರೀಯ ಪೌರತ್ವ ನೊಂದಣಿ ಕಾಯ್ದೆ ಸ್ವಾಗತಾರ್ಹ-ಸಿ.ವಿ. ಚಂದ್ರಶೇಖರ

 


Koppal ಪೌರತ್ವ ತಿದ್ದುಪಡಿ ಕಾಯ್ದೆ(ಸಿ.ಎ.ಎ) ಮತ್ತು ರಾಷ್ಟ್ರೀಯ ಪೌರತ್ವ ನೊಂದಣಿ (ಎನ್.ಆರ್.ಸಿ) ಈ ಕಾಯ್ದೆಯು ಸ್ವಾಗತಾರ್ಹವಾಗಿದ್ದು, ಮತ್ತು ಇದೊಂದು ಐತಿಹಾಸಿಕ ನಿರ್ಣಯವಾಗಿದೆ. ಈ ಕಾಯ್ದೆಯಿಂದ ದೇಶದ ಯಾವುದೇ ಧರ್ಮದ ಜನರಿಗೆ ಯಾವ ರೀತಿಯ ತೊಂದರೆಗಳು ಆಗುವುದಿಲ್ಲ ಎಂಬುದನ್ನು ದೇಶವಾಸಿಗಳು ಅರಿಯಬೇಕಾಗಿದೆ ೭೦ ವರ್ಷಗಳ ಕಾಲ ಸರ್ಕಾರ ಮಾಡಿರುವ ಪ್ರಮಾದಗಳನ್ನು ಕೇಂದ್ರದ ಬಿಜೆಪಿ ಸರ್ಕಾರ ಸರಿಪಡಿಸುತ್ತಿದೆ. ಸ್ಪಷ್ಟ ಬಹುಮತವನ್ನು ನೀಡಿರುವ ದೇಶದ ಜನತೆಯ ಭವಿಷ್ಯವನ್ನು ಉಜ್ಜಲಗೊಳಿಸುವಲ್ಲಿ ಈ ಕಾಯ್ದೆ ಅತ್ಯಂತ ಪರಿಣಾಮಕಾರಿಯಾಗಿದೆ.
ಅಕ್ರಮ ನುಸುಳುಕೋರರನ್ನು ಹೊರ ಹಾಕದೆ ಇದ್ದಲ್ಲಿ ಭಾರತೀಯರಿಗಾಗುವ ಸಮಸ್ಯೆಗಳುಮತ್ತು ನಷ್ಟಗಳು ಅಧಿಕ ಎನ್ನುವುದನ್ನು ಅರಿತು ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಜಾರಿಗೊಳಿಸಿದೆ.
ನೆರೆಯ ರಾಷ್ಟ್ರಗಳಲ್ಲಿರುವ ಅಲ್ಪಸಂಖ್ಯಾತ ಹಿಂದೂ, ಜೈನ, ಬೌದ್ಧ, ಸಿಖ್ ಮತ್ತು ಪಾರ್ಸಿಗಳ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಅಲ್ಲಿಂದ ನೊಂದು ಬಂದಿರುವ ನಾಗರಿಕರಿಗೆ ಈ ದೇಶದ ಪೌರತ್ವ ದೊರಕಿಸಿ ಕೊಡವುದು ಅವರಿಗೂ ಉತ್ತಮ ಭವಿಷ್ಯ ಕಲ್ಪಿಸಿಕೊಡುವುದು ಎನ್‌ಆರ್‌ಸಿಯ ಉದ್ದೇಶವಾಗಿದೆ. ಆದ್ದರಿಂದ ಮೂಲತಃ ಭಾರತೀಯರಾದ ಅಲ್ಪಸಂಖ್ಯಾತರಾಗಲಿ ಅಥವಾ ಯಾವುದೇ ಧರ್ಮದವರಾಗಲಿ ಇದರಿಂದ ತೊಂದರೆ ಆಗುವುದಿಲ್ಲ. ಈ ಕುರಿತು ಗೊಂದಲ ಸೃಷ್ಠಿಸುವ ಮೂಲಕ ದೇಶದಲ್ಲಿ ಅಶಾಂತಿಯನ್ನು ಉಂಟು ಮಾಡುತ್ತಿರುವ ಕಾಂಗ್ರೆಸ್ ಮತ್ತು ವಿಪಕ್ಷಗಳು ದಾರಿ ತಪ್ಪಿಸುವ ಕುತಂತ್ರವನ್ನು ದೇಶವಾಸಿಗಳು ವಿದ್ಯಾರ್ಥಿಗಳು ಮನವರಿಕೆ ಮಾಡಿಕೊಳ್ಳುವುದರ ಜೊತೆಗೆ ಸುಳ್ಳು ವಂದಂತಿಗಳಿಗೆ ಕಿವಿಗೊಡದೆ ದೇಶದ ಏಕತೆಗಾಗಿ, ಅಸ್ತಿತ್ವಕ್ಕಾಗಿ ಭವ್ಯ ಭಾರತದ ಭವಿಷ್ಯಕ್ಕಾಗಿ ಮತ್ತೊಮ್ಮೆ ದೇಶದ ಮಹಾನ್ ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ದೇಶದ ಎರಡನೇ ಉಕ್ಕಿನ ಮನುಷ್ಯ ಗೃಹಮಂತ್ರಿ ಅಮಿತಾ ಷಾ ಅವರೊಂದಿಗೆ ಕೈ ಜೊಡಿಸೋಣ ಬಿಜೆಪಿಯನ್ನು ಬಲಪಡಿಸೋಣ. ಈ ಕೂಡಲೇ ದೇಶಭಕ್ತ ದೇಶವಾಸಿಗಳು, ವಿದ್ಯಾರ್ಥಿಗಳು, ಜಾಗೃತಗೊಳ್ಳದೆ ವಿಪಕ್ಷಗಳ ಕುತಂತ್ರಕ್ಕೆ ಬಲಿಯಾದರೆ ಮುಂದೆಂದೂ ಇಂಥಹ ಐತಿಹಾಸಿಕ ನಿರ್ಣಯಗಳನ್ನು ದೇಶದ ಜನತೆ ನಿರೀಕ್ಷಿಸಲಾಗುವುದಿಲ್ಲ ಆದ್ದರಿಂದ ಪೌರತ್ವ ತಿದ್ದುಪಡಿ ಕಾಯ್ದೆ (ಸಿ.ಎ.ಎ) ಮತ್ತು ರಾಷ್ಟ್ರೀಯ ಪೌರತ್ವ ನೊಂದಣಿ (ಎನ್.ಆರ್.ಸಿ) ಯನ್ನು ಬೆಂಬಲಿಸೋಣ ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error