ಪೋಲಿಸ್ ಅಧಿಕಾರಿಯ ದಾಸೋಹ ಸೇವೆ

ಕೊಪ್ಪಳ : ಗವಿಮಠದ ಜಾತ್ರೋತ್ಸವದಲ್ಲಿ ದಾಸೋಹ ಸೇವೆ ನಿರಂತರವಾಗಿ ನಡೆಯುತ್ತದೆ. ಪ್ರತಿ ದಿನ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಜಾತ್ರೆಗೆ ಬಂದವರಿಗೆ ತಡ ರಾತ್ರಿಯವರೆಗೂ ಅನ್ನ ಸಂತರ್ಪಣೆ ನಡೆದೇ ಇರುತ್ತದೆ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ನೂರಾರು ಹಳ್ಳಿಗಳಿಂಧ ಭಕ್ತರು ರೊಟ್ಟಿ, ಚಪಾತಿ, ಉಂಡಿ, ಸಿಹಿ ಪದಾರ್ಥಗಳು ಸೇರಿದಂತೆ ನಾನಾ ನಮೂನೆಯ ಆಹಾರ ಪದಾರ್ಥಗಳನ್ನು ದೇಣಿಗೆ ನೀಡುತ್ತಲೇ ಬರುತ್ತಾರೆ. ಈ ಸಲವೂ ಸಹ ಲಕ್ಷಾಂತರ ರೊಟ್ಟಿಗಳು ದೇಣಿಗೆಯಲ್ಲಿ ಬಂದಿವೆ‌. ನಿತ್ಯ ನಡೆಯುವ ದಾಸೋಹ ಸೇವೆಗೆ ಅಡುಗೆ ಮಾಡಲೂ ಸಹ ಸ್ವಯಂಪ್ರೇರಣೆಯಿಂದ ಭಕ್ತರು ಬರುತ್ತಾರೆ.

ಈ ಸಲದ ದಾಸೀಹದಲ್ಲಿಯೂ ಲಕ್ಷಾಂತರ ಮಿರ್ಚಿಗಳ ಸೇವೆಯೂ ನಡೆಯಿತು. ಜಾತ್ರೆಯ ಈ ದಾಸೋಹ ವೈಶಿಷ್ಷ್ಯ ಎಂದರೆ ಅಧಿಕಾರಿಗಳು, ಜವಾನ ಎನ್ನುವ ಯಾವುದೇ ತಾರತಮ್ಯ ಇಲ್ಲದೇ ಎಲ್ಲರೂ ಸೇವೆಗೆ ನಿಲ್ಲುವುದು. ಈ ಸಲದ ದಾಸೋಹ ಸೇವೆಯಲ್ಲಿ ಹಿರಿಯ ಪೋಲಿಸ್ ಅಧಿಕಾರಿ ಎಸಿಬಿಯ ಡಿವೈಎಸ್ಪಿ ರುದ್ರೇಶ ಉಜ್ಜನಿಕೊಪ್ಪ ಅನ್ನ ಸಂತರ್ಪಣೆಯಲ್ಲಿ ತೊಡಗಿದ್ದರು. ಪೋಲಿಸರು, ಕಿರಿಯ ಅಧಿಕಾರಿಗಳು , ಜನಸಾಮಾನ್ಯರು ಎಲ್ಲರೂ ಊಟಕ್ಕೆ ಬರುತ್ತಿದ್ದರೆ ಅವರಿಗೆ ಅನ್ನ ನೀಡುವ ನಿರಂತರ ಸೇವೆಯಲ್ಲಿ ಈ ಹಿರಿಯ ಪೋಲಿಸ್ ಅಧಿಕಾರಿ ನಿರತರಾಗಿದ್ದರು.

ಯಾವುದೇ ಹಮ್ಮು ಬಿಮ್ಮುಗಳಿಲ್ಲದೇ ಸರಳವಾಗಿ ಗವಿಸಿದ್ದೇಶ್ವರರ ಸೇವೆಯಲ್ಲಿ ತೊಡಗಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಪೋಲಿಸ್ ಸೇವೆಯ ಹೊರತಾಗಿಯೂ ಗಾಯಕರಾಗಿಯೂ ಉಜ್ಜನಿಕೊಪ್ಪರು ಇಡೀ ನಾಡಿನಾದ್ಯಂತ ಚಿರಪರಿಚಿತರಾಗಿದ್ದಾರೆ.

Please follow and like us:
error