ಪೋಲಿಸರೊಂದಿಗೆ ಅಪ್ಪ,ಮಗನ ದುರ್ವರ್ತನೆಗೆ ತೀವ್ರ ಖಂಡನೆ

ಬಿಜೆಪಿ ಕರೆ ನೀಡಿದ್ದ ಕರ್ನಾಟಕ ಬಂದ್ಗೆ ಕೊಪ್ಪಳ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸಂಸದ ಕರಡಿ ಸಂಗಣ್ಣ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ, ಪರಿವಾನಿಗೆ ಇಲ್ಲದೆ ಆಟೋವನ್ನು ಪೊಲೀಸರು ವಶಪಡಿಸಿಕೊಂಡ್ರು. ಇದರಿಂದ ಆಕ್ರೋಶಗೊಂಡ ಸಂಸದ ಕರಡಿ ಸಂಗಣ್ಣ, ಬಿಜೆಪಿ ಕಾರ್ಯಕರ್ತರು ನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ರು. ಪ್ರತಿಭಟನೆ ವೇಳೆ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಸಂಸದ ಕರಡಿ ಸಂಗಣ್ಣ, ಅವರ ಪುತ್ರ ಅಮರೇಶ ಕರಡಿ ಪೊಲೀಸರ ವಿರುದ್ದ ವಾಗ್ವಾದ ನಡೆಸಿದ್ರು. ಇನ್ನು ಒಂದು ಹಂತಕ್ಕೆ ಪೊಲೀಸರ ಹಾಗೂ ಬಿಜೆಪಿ ಸಂಸದರ ನಡುವೆ ಮಾತಿನ ಚಕುಮಕಿ ಜೋರಾಗಿ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

ನಗರ ಠಾಣೆಯ ರವಿ ಉಕ್ಕುಂದ ವಿರುದ್ದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಘಟನೆಯಲ್ಲಿ ಡಿಎಸ್ವೈಪಿ ಸಂದಿಗವಾಡ್ ಹಾಗೂ ಸಂಸದರು ಎಳೆದಾಡಿಕೊಂಡ ಘಟನೆಯೂ ಸಹ ಜರುಗಿತು. ಇದ್ರಿಂದಾಗಿ ಕೆಲಕಾಲ ಠಾಣೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಸಂಸದರು ಹಾಗೂ ಅವರ ಪುತ್ರ ಅಮರೇಶ ಕರಡಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿವುಂಟು ಮಾಡಿದ್ದಾರೆ ಎಂದು ಮೇಲಾಧಿಕಾರಿಗಳಿಗೆ ದೂರು ಕೊಡಲು ಸಿದ್ದರಾಗಿದ್ದಾರೆ.

ಅಮರೇಶ ಕರಡಿ ಹಾಗೂ ಸಂಸದ ಕರಡಿ ಸಂಗಣ್ಣ ಪೋಲಿಸ್ ಅಧಿಕಾರಿಗಳ ಮೇಲೆ ಏರಿ ಹೋಗಿದ್ದು ಮತ್ತು ಹಿರಿಯ ಅಧಿಕಾರಿಯ ಶರ್ಟ್ ಗೆ ಕೈಹಾಕಿದ್ದು ಸಾರ್ವಜನಿಕರ ತೀವ್ರ ಟೀಕೆಗೆ ಒಳಗಾಗಿದೆ. ಹಿರಿಯ ಸಂಸದರು ಬೇಜವಾಬ್ದಾರಿಯಾಗಿ ವರ್ತಿಸಿದ್ದು ಎಷ್ಟು ಸರಿ ಎಂದು ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Please follow and like us:
error