ಪೋಲಿಸರಿಗೆ,ರೈಲ್ವೆ ಕಾರ್ಮಿಕರಿಗೆ ಆಹಾರ ಪ್ಯಾಕೇಟ್ ವಿತರಣೆ

ಕೊಪ್ಪಳ : ಲಾಕಡೌನ್ ಆರಂಭವಾದ ಸಮಯದಿಂದಲೂ ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರಷ್ಟೇ ಅಲ್ಲದೇ ಪೋಲಿಸರೂ ಸಹ ಹಗಲು ಇರುಳು ಎನ್ನದೇ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರಿಗೂ ಪ್ರತಿದಿನ ಮದ್ಯಾಹ್ನ ರಾಜು ನಾಯಕ್ ಪಲಾವ್ ನೀರಿನ ಬಾಟಲ್ ಸ್ಯಾನಿಟೈಜರ್ ನೀಡುತ್ತಾ ಬಂದಿದ್ದಾರೆ. ಮೂಲತಃ ರಿಯಲ್ ಎಸ್ಟೇಟ್ ಕೆಲಸ ಮಾಡುವ ರಾಜು ನಾಯಕ್ ಸ್ವತಃ ತಮ್ಮ ಮನೆಯಲ್ಲಿಯೇ ಆಹಾರವನ್ನು ಸಿದ್ದಪಡಿಸಿ ನಂತರ ಪ್ಯಾಕ್ ಮಾಡಿ ತಮ್ಮ ಕಾರಿನಲ್ಲಿಯೇ ಕಾರ್ಮಿಕರು, ಪೋಲಿಸರು ಇರುವಲ್ಲಿ ಹೋಗಿ ವಿತರಿಸಿ ಬರುತ್ತಾರೆ. ಒಂದು ದಿನವೂ ತಪ್ಪದಂತೆ ಈ ಕೆಲಸ ಮಾಡುತ್ತಾ ಬಂದಿದ್ದಾರೆ. ನಮ್ಮ ಕೈಲಾದ ಸೇವೆ ಮಾಡುತ್ತಿದ್ದೇನೆ ಎನ್ನುತ್ತಾರೆ ರಾಜು ನಾಯಕ್.‌

Please follow and like us:
error