ಪೋಕ್ಸೋ ಆರೋಪಿಗೆ ಕೊರೋನಾ ಪಾಸಿಟಿವ್ : ಪಟ್ಟಣದ 22ಜನ ಪೊಲೀಸರಿಗೆ ಆತಂಕ

ಕೊಪ್ಪಳ : ಇತ್ತೀಚಿಗೆ ಅಪ್ರಾಪ್ತ ಯುವತಿಯನ್ನು ಅಪಹರಣ ಮಾಡಿ, ಸದ್ಯ ಕೊಪ್ಪಳದ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಿರಲೂಟಿ ಗ್ರಾಮದ ಆರೋಪಿಗೆ ಕೊರೋನಾ ಪಾಸಿಟಿವ್ ಕನ್ಫಾರ್ಮ ಆಗಿದ್ದರಿಂದ ಆರೋಪಿಯನ್ನು ಬಂಧಿಸಿ ಕರೆತಂದ ವೇಳೆಯಲ್ಲಿದ್ದ ಪಿಎಸ್ಐ ಸೇರಿದಂತೆ ವಿಚಾರಣೆ ನಡೆಸಿದ ಹಾಗೂ ಅಂದು ಕರ್ತವ್ಯದಲ್ಲಿದ್ದ 22ಜನ ಪೊಲೀಸರಿಗೆ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ವಯಂ ಪ್ರೇರಿತವಾಗಿ ಈ ಪೊಲೀಸ್ ಸಿಬ್ಬಂದಿ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಕನಕಗಿರಿ ತಾಲೂಕಿನ ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದ ಕೊರೋನಾ ಮಹಾಮಾರಿ ಇದುವರೆಗೂ ಪಟ್ಟಣದಲ್ಲಿ ಯಾರಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಕರೋನ ಸೋಂಕು ಇರುವ ಆರೋಪಿಯನ್ನು ಕರೆ ತಂದ ಪೊಲೀಸರು ಹಾಗೂ ಅಂದು ಕರ್ತವ್ಯದಲ್ಲಿದ್ದ ಇತರ ಸಿಬ್ಬಂದಿ ಪ್ರಾಥಮಿಕ ಸಂಪರ್ಕ ಹೊಂದಿದ್ದರಿಂದ ಸಧ್ಯ ಅವರು ಕ್ವಾರಂಟೈನ್ ಗೆ ಒಳಗಾಗಿದ್ದಾರೆ., ಇವರ ಗಂಟಲು ದ್ರವ ಪರೀಕ್ಷೆಯು ಇನ್ನೆರಡು ದಿನಗಳಲ್ಲಿ ನಡೆಯಲಿದೆ.

Please follow and like us:
error