ಪೊಲೀಸ್ ಡ್ರೆಸ್ ಹಾಕಿಕೊಂಡು ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸ್ ಬಂಧನ

ಕೊಪ್ಪಳ : ಪೊಲೀಸರ ಡ್ರೆಸ್ ಹಾಕಿಕೊಂಡು ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸ್ ನನ್ನು ಬಂದಿಸಿದ್ದಾರೆ..ಅಳವಂಡಿ ಪೊಲೀಸರಿಂದ ಬಂಧನ..

ಸಮೀರ್ ಬಂಧಿತ ನಕಲಿ ಪೊಲೀಸ್ . ಸಮೀರ್ ಮೂಲತಃ ಕೊಪ್ಪಳ ತಾಲೂಕಿನ ಅಳವಂಡಿ ನಿವಾಸಿ.ಸಮೀರ್ ಪೊಲೀಸ್ ಡ್ರೇಸ್ ಹಾಕಿಕೊಂಡು ಹಣ ವಸೂಲಿ ಮಾಡುತ್ತಿದ್ದ..

ದಾಬಾ, ಹೈವೆಗಳಲ್ಲಿ ನಾನು ಪೊಲೀಸ್ ಎಂದು ಹಣ ವಸೂಲಿ ಮಾಡುತ್ತಿದ್ದ ಸಮೀರ್.ಪೊಲೀಸ್ ಬಟ್ಟೆಯನ್ನು ಕಳ್ಳತನ ಮಾಡಿದ್ದ ಸಮೀರ್..

ಪೊಲೀಸ್ ಬಟ್ಟೆ ಕಳ್ಳತನ ಮಾಡಿ ರಾತ್ರಿ ಹಣ ವಸೂಲಿ ಮಾಡುತ್ತಿದ್ದ ಸಮೀರ್.ಹಣ ಕೊಡದಿದ್ರೆ ಚಾಕು ತೋರಿಸಿ ಹಣ ದೋಚುತ್ತಿದ್ದ ಸಮೀರ್. ಸಾರ್ವಜನಿಕರು ಅನುಮಾನ ಬಂದು ಅಳವಂಡಿ ಠಾಣೆಗೆ ದೂರು ನೀಡಿದ್ದರು. ಸಮೀರ್ ಇತ್ತೀಚಿಗಷ್ಟೇ ಪೋಲಿಸ್ ಸೆಲೆಕ್ಷನ್ ಗಾಗಿ ಪರಿಕ್ಷೆ ಬರೆದಿದ್ದ. ಕಳಸ ಸಿಗದ ಕಾರಣಕ್ಕೆ ಬಹಳಷ್ಟು ಬೇಜಾರುಗೊಂಡಿದ್ದ ಎಂದು ಹೇಳಲಾಗಿದೆ.