ಕೊಪ್ಪಳ : ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳು ಹಿಂದುಳಿದ ಹಾಗೂ ಉತ್ತರ ಕರ್ನಾಟಕದ ಕೊನೆಯ ಜಿಲ್ಲೆಗಳಾಗಿದ್ದು ಈ ಭಾಗದ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳು, ಪೊಲೀಸ್ ಕಾನ್ಸೆಟೇಬಲ್ಗಳು ಮತ್ತು ಸಿ.ಆರ್.ಪಿ.ಎಫ್. ಪೊಲೀಸ್ರು ಕೊಪ್ಪಳ ಜಿಲ್ಲೆಯ ವಿಶೇಷ ಪೊಲೀಸ್ ಬಟಾಲೀಯನ್ ಮುನಿರಬಾದ ಸಮಿಪ ಇರುವುದರಿಂದ ದೇಶದ ವಿವಿಧ ರಾಜ್ಯಗಳಿಗೆ ಕರ್ತವ್ಯ ನಿರ್ವಹಿಸಲು ಮತ್ತು ತುರ್ತು ಪರಿಸ್ಥಿತಿ ಹಾಗೂ ಚುನಾವಣೆ ಸಂದರ್ಭದಲ್ಲಿ ಇತರೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಾವೀರರು ಪೊಲೀಸರು ದಿನದ ೨೪ ಘಂಟೆಗಳ ಕಾಲ ಕರ್ತವ್ಯ ನಿರ್ವಹಿಸುತ್ತಿದ್ದು, ಒತ್ತಡದಲ್ಲಿರುವುದರಿಂದ ಬಹುತೇಕ ಪೊಲೀಸ್ ಇಲಾಖೆಯ ತಮ್ಮ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಣದ ಕಾಳಜಿ ವಹಿಸಬೇಕಾಗಿರುವುದು ಅತ್ಯಗತ್ಯ ವಾಗಿರುತ್ತದೆ. ಹಾಗಾಗಿ ತಾವುಗಳು ವಿಶೇಷ ಕಾಳಜಿ ವಹಿಸಿ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕೊಪ್ಪಳ ಭಾಗದಲ್ಲಿ ವಿಶೇಷ ಶಾಲೆ ಮತ್ತು ವಸತಿಯನ್ನು ತೆರೆದು ಪೊಲೀಸ್ ಅಧಿಕಾರಿಗಳು ಪೊಲೀಸ್ ಕಾನ್ಸ್ಟೇಬಲ್ರವರ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾ ಪಂಚಾಯತ್ ದಿಶಾ ಸಮಿತಿಯ ಸದಸ್ಯರಾದ ಗಣೇಶ ಹೊರತಟ್ನಾಳ ಹಾಗೂ ಮುಖಂಡರು ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ದರ್ಗಪ್ಪ ಅಲ್ಲಾನಗರ, ಚಂದ್ರು ಸ್ವಾಮಿ ಬಹದ್ದೂರ ಬಂಡಿ, ಪ್ರಭುರಾಜ ಕಿಡದಾಳ, ಮಂಜುನಾಥ ಮುಸಲಾಪುರ, ಭೀಮಣ್ಣ ಹಿಟ್ನಾಳ, ಭೋಜರಾಜ ಚವ್ಹಾನ್, ಹಾಗೂ ಇತರರು ಮನವಿ ನೀಡುವಲ್ಲಿ ಪಾಲ್ಗೊಂಡಿದ್ದರು.