ಪೇಜಾವರ ಶ್ರೀ ,ಗೋಮಧುಸುಧನ ಪ್ರತಿಕೃತಿ ದಹಿಸಿ ಪ್ರತಿಭಟನೆ

ಕೊಪ್ಪಳ : ನ.೨೮ ರಂದು ನಗರದ ಅಶೋಕ ಸರ್ಕಲ್‌ನಲ್ಲಿ ದಲಿತ ಮತ್ತು ಮೈನಾರಿಟಿ ಸಂಘಟನೆಗಳೊಂದಿಗೆ ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಪೇಜಾವರ ಶ್ರೀ ಮತ್ತು ಬಿಜೆಪಿ ವಕ್ತರರಾದ ಗೋಮಧು ಸುಧನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅವರ ಪ್ರತಿಕೃತಿ ದಹಿಸಿ ಸಂವಿಧಾನ ಒಪ್ಪದಿದ್ದರೆ ದೇಶಬಿಟ್ಟು ತೊಲಗಿ ಎಂದು ಪ್ರತಿಭಟಿಸಿದರು.  
ಈ ಸಂದರ್ಭದಲ್ಲಿ ಯಲ್ಲಪ್ಪ ಬಳಗಾನೂರ, ಬಸವರಾಜ ಅಳ್ಳಳ್ಳಿ, ಆಜಯ ದೊಡ್ಡಮನಿ, ಸಲಿಂ ಮಂಡಲಗಿರಿ, ರಾಜಾಭಕ್ಷಿ, ಮಹಮ್ಮದ ಹುಸೇನ್ ಬಲ್ಲೇ, ರಾಘವೇಂದ್ರ ಚಾಕ್ರಿ, ಗೌತಮ್ ಬಳಗಾನೂರ, ಮಂಜುನಾಥ ದೊಡ್ಡಮನಿ, ರಘು ಬೆಲ್ಲದ, ಮಕ್ಬುಲಸಾಬ್ ಹೂಗಾರ, ಪ್ರಮೋದ ಬಳಗಾನೂರ, ಬಸವರಾಜ ದೊಡ್ಡಮನಿ, ಶರಣ ಬೆಲ್ಲದ, ಮಾರ್ಕ ಬೌದ್ಧ ಮತ್ತು ದಲಿತ ಸಂಘರ್ಷ ಸಮಿತಿ (ಭೀಮವಾದ) ಮುಖಂಡರುಗಳು ಉಪಸ್ಥಿತರಿದ್ದರು.

Please follow and like us:
error