ಪುಸ್ತಕ ಖರೀದಿಗಾಗಿ ಲೇಖಕರಿಂದ ಅರ್ಜಿ ಆಹ್ವಾನ

ಕೊಪ್ಪಳ ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಪುಸ್ತಕ ಖರೀದಿಗಾಗಿ ಲೇಖಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೈದ್ರಾಬಾದ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ವತಿಯಿಂದ ಕೊಪ್ಪಳ ಜಿಲ್ಲೆಗೆ ಪುಸ್ತಕ ಖರೀದಿಸಲು ಅನುದಾನ ಬಿಡುಗಡೆಯಾಗಿದ್ದು, ಹೈ-ಕ ಭಾಗದ ಲೇಖಕರಿಗೆ ಉತ್ತೇಜನ ನೀಡಲು ಹಾಗೂ ಈ ಭಾಗದ ಲೇಖಕರು ಬರೆದ ಪುಸ್ತಕಗಳನ್ನು ಪರಿಚಯಿಸುವ ಉದ್ದೇಶದಿಂದ ಹೈ-ಕ ಭಾಗದ ಗ್ರಾ.ಪಂ ಗ್ರಂಥಾಲಯಗಳಲ್ಲಿ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಓದುವ ಉತ್ತೇಜನ ನೀಡಲು ಹೆಚ್.ಕೆ.ಆರ್.ಡಿ.ಬಿ ಕಲಬುರ್ಗಿ ಮ್ಯಾಕ್ರೋ ಯೋಜನೆಯಡಿ ಸ್ಥಳೀಯ ಲೇಖಕರಿಂದ ಪುಸ್ತಕಗಳನ್ನು ಖರೀದಿಸಲಾಗುವುದು. ಅರ್ಜಿ ಸಲ್ಲಿಸಲು ಸಾಹಿತ್ಯ, ಲಲಿತಕಲೆ, ವಿಜ್ಞಾನ, ಮಾನಸಿಕ, ವೈದ್ಯಕೀಯ, ತಾಂತ್ರಿಕ, ಸ್ಪರ್ಧಾತ್ಮಕ, ಪರಾಮಾರ್ಶಿಕ ಕೃತಿಗಳು ಹಾಗೂ ಸಾಹಿತ್ಯ, ನವಸಾಕ್ಷರರ ಕೃತಿಗಳು ಇತ್ಯಾದಿ ವಿಷಯಗಳ ಕನ್ನಡ, ಆಂಗ್ಲ ಅಥವಾ ಇತರೆ ಭಾರತೀಯ ಭಾಷೆಯ ಗ್ರಂಥಗಳಾಗಿರಬೇಕು. ಪುಸ್ತಕಗಳು ೨೦೧೬ರ ಜನವರಿ. ೦೧ ರಿಂದ ೨೦೧೭ರ ಡಿಸೆಂಬರ್. ೩೧ ರವರೆಗೆ ಪ್ರಥಮವಾಗಿ ಮುದ್ರಣಗೊಂಡಿರಬೇಕು. ಮರು ಮುದ್ರಣವಾದಲ್ಲಿ ೧೦ ವರ್ಷಗಳ ಅಂತರವಿರಬೇಕು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪುಸ್ತಕ ಖರೀದಿಗಾಗಿ ರಚಿಸಲಾದ ಸಮಿತಿಯಲ್ಲಿ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಲೇಖಕರು ಸಲ್ಲಿಸಿದ ಪುಸ್ತಕಗಳ ಗುಣಮಟ್ಟ ಪರಿಶೀಲಿಸಿ ಖರೀದಿಗಾಗಿ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸಲು ಪುಸ್ತಕಗಳನ್ನು ಬರೆದ ಲೇಖಕರು ಕಡ್ಡಾಯವಾಗಿ ಕೊಪ್ಪಳ ಜಿಲ್ಲೆಯವರಾಗಿರಬೇಕು. ಹಾಗೂ ತಮ್ಮ ದೃಢೀಕೃತ ವಿಳಾಸದ ಪ್ರತಿಯನ್ನು ಸಲ್ಲಿಸಬೇಕು. ಸಾರ್ವಜನಿಕರ ಗ್ರಂಥಾಲಯ ಇಲಾಖೆ ಪುಸ್ತಕ ಖರೀದಿಗೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪುಸ್ತಕದ ಅಳತೆ ಕಾಗದದ ಗುಣಮಟ್ಟ ಹಾಗೂ ಪುಸ್ತಕದ ಪುಟಗಳಿಗೆ ಅನುಗುಣವಾಗಿ ಸರ್ಕಾರದ ಆದೇಶದಂತೆ ಬೆಲೆಗಳನ್ನು ನಿಗದಿ ಮಾಡಲಾಗುವುದು. ಲೇಖಕರು ಪುಸ್ತಕ ಖರೀದಿಗೆ ಆಯ್ಕೆಗಾಗಿ ಗ್ರಂಥಗಳ ಒಂದು ಪ್ರತಿಯೊಂದಿಗೆ ಕೊಪ್ಪಳ ಜಿಲ್ಲೆಯ ತಮ್ಮ ವಾಸಸ್ಥಳ ದೃಢೀಕರಣ ಪ್ರತಿ, ಆಧಾರ ಕಾರ್ಡ್, ಓಟರ ಐಡಿ ಯೊಂದಿಗೆ ಮಾರ್ಚ್. ೦೯ ರೊಳಗಾಗಿ ಮುಖ್ಯ ಗ್ರಂಥಾಲಯಾಧಿಕಾರಿ, ಜಿಲ್ಲಾ ಕೇಂದ್ರ ಗ್ರಂಥಾಲಯ ಕೊಪ್ಪಳ-೫೮೩೨೩೧, ಕಛೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂ: ೦೮೫೩೯-೨೨೨೦೦೩ ಕ್ಕೆ ಸಂಪರ್ಕಿಸಬಹುದು

Please follow and like us:
error