ಪುರೋಹಿತ ರತ್ನ ಪ್ರಶಸ್ತಿ ಪ್ರಧಾನ.


ಕೊಪ್ಪಳ : ಜ.೧೧ ರಂದು ಶಿವಮೊಗ್ಗದಲ್ಲಿ ಜರುಗಿದ ರಾಜ್ಯ ಪುರೋಹಿತ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಕೊಪ್ಪಳ ಜಿಲ್ಲೆಯ ವೀರಶೈವ ಜಂಗಮ ಅರ್ಚಕರ ಮತ್ತು ಪುರೋಹಿತರ ಸಂಘ (ರಿ) ಕೊಪ್ಪಳ ಆಯ್ಕೆ ಮಾಡಲಾಗಿರುವ ಕೊಪ್ಪಳ ಜಿಲ್ಲೆಯ ಮುದ್ದಾಬಳ್ಳಿಯ ವೀರಶೈವ ಜಂಗಮ ಪುರೋಹಿತರಾದ ಶೇಖರಯ್ಯ ಮಹಾದೇವಯ್ಯ ಹಿರೇಮಠ ಇವರಿಗೆ ಪುರೋಹಿತ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಪ್ರಶಸ್ತಿಯನ್ನು ಶ್ರೀ ಮದ್‌ಕಾಸಿ ಜ್ಞಾನಸಿಂಹಾಸನಧೀಶ್ವರ ಶ್ರೀಶ್ರೀಶ್ರೀ ೧೦೦೮ ಜಗದ್ಗುರು ವಿದ್ಯಾವಾಚಸ್ಪತಿ ಡಾ. ಚಂದ್ರಶೇಖರ ಶಿವಾಚಾರ್ಯ ಬಗವತ್ಪಾರು ಜಂಗಮವಾಡಿ ಮಠ ವಾರಣಾಸಿ (ಕಾಸಿ) ಇವರು ಪ್ರಶಸ್ತಿ ನೀಡಿ ಆಶಿರ್ವಾದಿಸಿದರು.