ಪಿ.ಯು.ಸಿ. ಶುಲ್ಕ ಹೆಚ್ಚಳಕ್ಕೆ ಎಸ್.ಎಫ್ ಐ .ವಿರೋಧ.

ರಾಜ್ಯದ ಪದವಿಪೂರ್ವ ಶಿಕ್ಷಣ ಇಲಾಖೆಯು ಇತ್ತೀಚೆಗೆ ಹೊಸ ಆದೇಶ ಹೊರಡಿಸುವುದರ ಮೂಲಕ ಮುಂಬರುವ ೨೦೧೮-೧೯ರ ಶೈಕ್ಷಣಿಕ ಸಾಲಿನಿಂದ ರಾಜ್ಯದ ಸರಕಾರಿ, ಖಾಸಗಿ, ಅನುದಾನ ರಹಿತ-ಸಹಿತ ಕಾಲೇಜುಗಳಿಗೆ ಪಿಯುಸಿ ದಾಖಲಾತಿಯ ಶುಲ್ಕವನ್ನು ಹೆಚ್ಚಳ ಮಾಡುವುದರ ಮೂಲಕ ವಿಧ್ಯಾರ್ಥಿ ವಿರೋಧಿನೀಯಿತಯನ್ನು ಅನುಸರಿಸುವುದನ್ನು ಎಸ್.ಎಫ್ ಐ ಜಿಲ್ಲಾ ಸಮಿತಿ ಖಂಡಿಸುತ್ತದೆ. ಎಂದು ಎಸ್.ಎಫ್.ಐ. ರಾಜ್ಯ ಉಪಾಧ್ಯಕ್ಷ ಮತ್ತು ಜಿಲ್ಲಾ ಅಧ್ಯಕ್ಷರಾದ ಅಮರೇಶ ಕಡಗದ್   ತಿಳಿಸಿದ್ದಾರೆ.

ರಾಜ್ಯದಲ್ಲಿ ಎಸ್.ಎಸ್.ಎಲ್ ಸಿ ಪರಿಕ್ಷೆಯು ಮುಗಿಯುವ ಹಂತಕ್ಕೆ ಬಂದಿದ್ದು, ಪಿಯುಸಿ ದಾಖಲಾತಿ ಪ್ರಾರಂಭಿಕ ಮೊದಲೆ ಪದವಿಪೂರ್ವ ಶಿಕ್ಷಣ ಇಲಾಖೆಯು ಪಿಯುಸಿ ದಾಖಲಾತಿ, ಮೌಲ್ಯಮಾಪನ, ಮರುಮೌಲ್ಯಮಾಪನ, ನೊಂದಾವಣೆ ಶುಲ್ಕ ಅಂಕಪಟ್ಟಿ ಶುಲ್ಕ ಕಾಲೇಜು ಬದಲಾವಣೆ ಶುಲ್ಕ ವಿಳಂಬದಾಖಲಾತಿ ಸೇರಿದಂತೆ ವಿವಿಧ ಶುಲ್ಕಗಳನ್ನು ಶೇ% ೫೦ ರಷ್ಟು ಹೆಚ್ಚಳ ಮಾಡುವ ಮೂಲಕ ಗ್ರಾಮೀಣ ಬಾಗದ ಬಡ ವಿದ್ಯಾರ್ಥಿಗಳಿಗೆ ಪಿಯುಸಿ ಶಿಕ್ಷಣವನ್ನು ಸಂಪೂರ್ಣವಾಗಿ ಹಣ ಉಳ್ಳವರು ಮಾತ್ರ ಕಲೆಯಬೇಕೆಂಬ ನಿರ್ಣಯಕ್ಕೆ ಬಂದಂತೆ ತೋರುತ್ತದೆ.
ಈಗಾಗಲೇ ರಾಜ್ಯದಲ್ಲಿ ಖಾಸಗಿ ಕಾಲೇಜುಗಳು ಉತ್ತಮ ಗುಣಮಟ್ಟದ ಹೆಸರಿನಲ್ಲಿ ಸಿಇಟಿ, ಜಿಇಇ,ಎನ್‌ಇಟಿ, ವಿವಿಧ ಹೆಸರುಗಳಲ್ಲಿ ಪಾಲಕರಿಂದ ಲಕ್ಷಾಂತರೂಪಾಹಿ ಹಣವನ್ನು ತೆಗೆದುಕೊಳ್ಳುವದರ ಮೂಲಕ ಶಿಕ್ಷಣ ಇಲಾಕೆಯ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ.
ಇಲಾಖೆಯು ಮತ್ತೆ ಶುಲ್ಕ ಹೆಚ್ಚಳ ಆದೇಶದಿಂದ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ತೊಂದರೆಯಾಗುತ್ತಿದ್ದು ಪರಿಷ್ಕ್ರತ ಧರವನ್ನು ಈ ಕೂಡಲೆ ಕೈಬಿಡಬೇಕೆಂದು ಇಲ್ಲದಿದ್ದಲ್ಲಿ ರಾಜ್ಯಾಂದ್ಯಾಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ಮಾಡಲಾಗುವುದು.   ಎಂದು ಎಸ್.ಎಫ್.ಐ. ರಾಜ್ಯ ಉಪಾಧ್ಯಕ್ಷ ಮತ್ತು ಜಿಲ್ಲಾ ಅಧ್ಯಕ್ಷರಾದ ಅಮರೇಶ ಕಡಗದ್   ತಿಳಿಸಿದ್ದಾರೆ.