ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾಗಿ ವೆಂಕಣ್ಣ ಕೊಳ್ಳಿ ಅವಿರೋಧ ಆಯ್ಕೆ

ಕೊಪ್ಪಳ:೦೧: ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಕರೆಯಪ್ಪ ಮೇಟಿಯವರ ರಾಜಿನಾಮೆಯಿಂದ ತೆರವಾಗಿದ್ದ ಪಿ.ಎಲ.ಡಿ. ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಹಿರೇಸಿಂದೋಗಿ ಕ್ಷೇತ್ರದ ವೆಂಕಣ್ಣ ಕೊಳ್ಳಿಯವರನ್ನು ಬ್ಯಾಂಕಿನ ಸರ್ವ ಸದಸ್ಯರು ಒಮ್ಮತದಿಂದ ಮುಂದಿನ ಅವಧಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳ, ಮಾಜಿ ಜಿ.ಪಂ.ಅಧ್ಯಿಕ್ಷ ಎಸ್.ಬಿ.ನಾಗರಳ್ಳಿ, ಪ್ರಾಧಿಕಾರದ ಅಧ್ಯಕ್ಷ ಜಿಲ್ಲು ಖಾದರಿ, ಎಪಿಎಮ್‌ಸಿ ಅಧ್ಯಕ್ಷ ಹನುಮರಡ್ಡಿ ಹಂಗನಕಟ್ಟಿ, ಮಾಜಿ ಕೆ.ಎಂ.ಎಫ್. ಅಧ್ಯಕ್ಷ ವೆಂಕನಗೌಡ್ರ ಹಿರೇಗೌಡ್ರ, ಬ್ಯಾಂಕಿನ ನಿರ್ದೇಶಕರುಗಳಾದ ಶಕುಂತಲಾ ಹುಡೇಜಾಲಿ, ಕರಿಯಪ್ಪ ಮೇಟಿ, ನೀಲಕಂಠಯ್ಯ ಹಿರೇಮಠ, ರಮೇಶ ಪಾಟೀಲ್, ದ್ಯಾಮಣ್ಣ ಚಿಲವಾಡಗಿ, ಅಡಿವೆಪ್ಪ ರಾಠಿ, ರಾಮನಗೌಡ್ರ ಡಂಬರಳ್ಳಿ, ಅಶೋಕ ಗೋರಂಟ್ಲಿ, ಸುರೇಶ ಕವಲೂರ, ಶಿವಾನಂದ ಹೊದ್ಲೂರ, ಚೆನ್ನಮ್ಮ ಹುನಗುಂದ, ಉಮಾ ಜನಾದ್ರಿ, ಬಸವರಾಜ ಹಾರೋಗೇರಿ, ಗುರುಬಸವರಾಜ ಹಳ್ಳಿಕೇರಿ, ಮಂಜುನಾಥ ಹಿರೇಮಠ, ಮುನೀರ್ ಸಿದ್ದಿಕಿ, ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು.