ಪಾಸ್‌ಪೋರ್ಟ್ ಸೇವಾಕೇಂದ್ರ ತೆರೆಯಲು ಮನವಿ-ಸಂಸದ ಸಂಗಣ್ಣ ಕರಡಿ ಒತ್ತಾಯ

| ಸಚಿವೆ ಸುಷ್ಮಾ ಸ್ವರಾಜ್‌ಗೆ ಮನವಿ

ಕೊಪ್ಪಳ: ರಾಜ್ಯದಲ್ಲಿ ಅತೀ ಹಿಂದುಳಿದ ಭಾಗವಾಗಿರುವ ಹೈ-ಕ ಭಾಗದ ಜಿಲ್ಲಾ ಕೇಂದ್ರವಾಗಿರುವ ಕೊಪ್ಪಳದಲ್ಲಿ ಪಾಸ್‌ಪೋರ್ಟ್ ಸೇವಾಕೇಂದ್ರ ತೆರೆಯಬೇಕು ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ಸಂಗಣ್ಣ ಕರಡಿಯವರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ನವದೆಹಲಿಯ ಸಂಸತ್ ಭವನದಲ್ಲಿ ನಡೆಯುತ್ತಿರುವ ಅಧಿವೇಶನದ ವೇಳೆ ಸಚಿವರನ್ನು ಭೇಟಿ ಮಾಡಿದ ಸಂಸದರು, ಹೈ-ಕ ಭಾಗ ತೀರಾ ಹಿಂದುಳಿದೆ. ಅದಕ್ಕಾಗಿ ೩೭೧ ಜೆ ಅಡಿ ಕೊಪ್ಪಳ ಬರುತ್ತದೆ. ಈ ಭಾಗದ ಸೇವಾ ಕ್ಷೇತ್ರ ಇನ್ನು ಹೆಚ್ಚು ಹೆಚ್ಚು ಅಭಿವೃದ್ಧಿಯಾಗಬೇಕಿದೆ. ಹೀಗಾಗಿ ಸೇವಾ ಕ್ಷೇತ್ರದ ಒಂದು ಭಾಗವಾಗಿರುವ ಪಾಸ್‌ಪೋರ್ಟ್ ಸೇವಾಕೇಂದ್ರ ತೆರೆಯುವ ಅಗತ್ಯತೆ ಹೆಚ್ಚಾಗಿದೆ ಎಂದು ಮನವಿಪತ್ರದಲ್ಲಿ ಮನವರಿಕೆ ಮಾಡಿದ್ದಾರೆ.
ರಾಜ್ಯದಲ್ಲಿ ಸಧ್ಯ ೯ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಕೊಪ್ಪಳದಲ್ಲೂ ಒಂದು ಕೇಂದ್ರ ತೆರೆಯಲು ತಾವು ಮುಂದಾಗಬೇಕು. ಈಗಾಗಲೇ ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿಯಲ್ಲಿ ಸೇವಾಕೇಂದ್ರ ಇದೆ. ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳ ಭಾಗದ ಜನತೆ ಸುಮಾರು ೨೦೦ರಿಂದ ೨೫೦ ಕಿ.ಮೀ. ದೂರದ ಹುಬ್ಬಳ್ಳಿಗೆ ಹೋಗಿ ಈ ಸೌಲಭ್ಯ ಪಡೆಯುವ ಅನಿವಾರ್ಯತೆ ಒದಗಿದೆ. ಇದು ಪಾಸ್‌ಪೋರ್ಟ್ ಸೇವೆ ಪಡೆಯುವ ನಮ್ಮ ಭಾಗದ ಜನತೆಗೆ ಆರ್ಥಿಕ, ಸಮಯದ ತೊಂದರೆಯಾಗುತ್ತಿದೆ. ಹೀಗಾಗಿ ಮುಂದಿನದಿನಗಳಲ್ಲಿ ತೆರೆಯಲು ಉದ್ದೇಶಿಸಿರುವ ೯ ಕೇಂದ್ರಗಳ ಪೈಕಿ ಒಂದು ಸೇವಾಕೇಂದ್ರವನ್ನು ಕೊಪ್ಪಳದಲ್ಲಿ ತೆರೆಯಲು ಕ್ರಮ ತೆಗೆದುಕೊಳ್ಳಬೇಕು ಎಂದು ಸಂಸದ ಸಂಗಣ್ಣ ಕರಡಿಯವರು ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.

Please follow and like us:

Related posts