ಪಾರ್ಲಿಮೆಂಟ್ ಚಲೋ – 28ನೇ ಜನವರಿ, 2019

ಕೇಂದ್ರ ಸರ್ಕಾರದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ(ಐಸಿಡಿಎಸ್) ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್.ಎಚ್.ಎಂ.) ಹಾಗೂ ಮಿಡ್ ಡೇ ಮೀಲ್(ಎಂ.ಡಿ.ಎಂ.ಎಸ್) ಯೋಜನೆಗಳನ್ನು, -ದೇಶದ ಹಲವು ಕೋಟಿ ಮಕ್ಕಳು, ಮಹಿಳೆಯರು ಮತ್ತು ಬಡಜನರಿಗೆ ಪೌಷ್ಟಿಕ ಆಹಾರ, ಉತ್ತಮ ಆರೋಗ್ಯ, ಮಹಿಳಾ ಸಬಲೀಕರಣ, ಮೂಲ ಶಿಕ್ಷಣ ನೀಡಲು ಈ ಯೋಜನೆಗಳು ಆರಂಭವಾಗಿ ಹಲವು ದಶಕಗಳೇ ಕಳೆದಿವೆ. ಗ್ರಾಮೀಣ ಮತ್ತು ನಗರಗಳ ಕೊಳಚೆ ಪ್ರದೇಶಗಳ ಬಡವರ ಕುಟುಂಬಗಳ ಜನರೇ ಫಲಾನುಭವಿಗಳಾಗಿರುವ ಈ 3 ಯೋಜನೆಗಳನ್ನು ಬೇರುಮಟ್ಟದಲ್ಲಿ ಅನುಷ್ಟಾನ ಮಾಡಲು ಆಶಾ, ಅಂಗನವಾಡಿ, ಬಿಸಿಯೂಟದ 63 ಲಕ್ಷ ಕಾರ್ಯಕರ್ತೆಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು ಮೂರುವರೆಲಕ್ಷದಷ್ಟು ಕಾರ್ಯಕರ್ತೆಯರು ಇರುವರು. ಯೋಜನೆಗಳ ಆರಂಭದಿಂದಲೂ ಸರ್ಕಾರಗಳು ಕಾರ್ಯಕರ್ತೆಯರನ್ನು ಅತ್ಯಂತ ಅಪಮಾನಕರ ರೀತಿಯಲ್ಲಿ ದುಡಿಸಿಕೊಂಡಿವೆ. ಸೇವಾಭದ್ರತೆಯಿಲ್ಲದ, ಜೀವ ಭದ್ರತೆಯಿಲ್ಲದ, ದುಡಿಮೆಗೆ ತಕ್ಕನಾದ ಜೀವನಯೋಗ್ಯ ವೇತನವಿಲ್ಲದೆ, ನಿವೃತ್ತಿಯ ಜೀವನಕ್ಕೆ ಪಿಂಚಣಿ ನೀಡದೆ ಈ ಮಹಿಳಾ ಕಾರ್ಯಕರ್ತೆಯರಿಂದ ಗೌರವ-ಘನತೆಯ ಬದುಕನ್ನೇ ಕಿತ್ತುಕೊಂಡಿವೆ.
ಪ್ರಪಂಚದಲ್ಲಿಯೇ ಅತಿ ಹೆಚ್ಚು ಸಾಮೂಹಿಕ ಮಹಿಳಾ ಕಾರ್ಯಕರ್ತೆಯರನ್ನು ಹೊಂದಿರುವ ಯೋಜನೆಗಳು ಎನ್ನುವ ಹೆಗ್ಗಳಿಕೆಯ ಈ ಯೋಜನೆಗಳಲ್ಲಿನ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ,ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರು ಪಡೆಯುತ್ತಿರುವ ಆರ್ಥಿಕ ಪ್ರತಿಫಲ ಅತ್ಯಂತ ನಿಕೃಷ್ಟವಾಗಿದೆ. ಇವರು ಸಲ್ಲಿಸುವ ಸೇವೆ ಹೆಸರಿನ ದುಡಿಮೆಗೆ, ಗರಿಷ್ಟ ಶ್ರಮ ಮತ್ತು ಸಮಯ ವಿನಿಯೋಗವಾದರೂ ಈ ಹೆಣ್ಣುಮಕ್ಕಳು ಕಾರ್ಮಿಕರಲ್ಲ!
ಮಹತ್ವಪೂರ್ಣವಾದ ಈ ಯೋಜನೆಗಳಲ್ಲಿ ನೌಕರರನ್ನು ದುಡಿಸಿಕೊಳ್ಳುತ್ತಿರುವ ರೀತಿ ನಿಜಕ್ಕೂ ಅಮಾನವೀಯ. ವಿವಿಧರೀತಿಯ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿಕೊಂಡು ವೈಯಕ್ತಿಕ ಕಷ್ಟಕಾರ್ಪಣ್ಯಗಳನ್ನು ಮರೆತು, ಕೆಲಸ ಮಾಡಿದರೂ ಈ ನೌಕರರನ್ನು ನಿಕೃಷ್ಟವಾಗಿ ನೋಡಲಾಗುತ್ತಿದೆ. ಈ ಯೋಜನಾ ಕಾರ್ಮಿಕರ ಮೇಲಿನ ನೈಜ ಹಕ್ಕೊತ್ತಾಯಗಳನ್ನು ಇಂಡಿಯನ್ ಲೇಬರ್‍ಕಾನ್ಫರೆನ್ಸ್‍ನ, 45ನೇ ಸಮ್ಮೇಳನದ ಅಧಿವೇಶದಲ್ಲಿ ತ್ರಿಪಕ್ಷೀಯ ಉನ್ನತ ಸಮಿತಿಯಲ್ಲಿ ಸರ್ವಸಮ್ಮತದಿಂದ ಒಪ್ಪಿದಂತೆ ನಮ್ಮ ಕೇಂದ್ರ ಕಾರ್ಮಿಕ ಸಂಘಟನೆ ಎ.ಐ.ಯು.ಟಿ.ಯು.ಸಿ ಮತ್ತು ಇನ್ನಿತರೆ ಕೇಂದ್ರ ಕಾರ್ಮಿಕ ಸಂಘಟನೆಗಳು ಆಗ್ರಹಿಸುತ್ತಿವೆ. ಈ ನಿರ್ಧಾರಗಳಾಗಿ 5 ವರ್ಷಗಳು ಕಳೆದಿವೆ. ಮತ್ತೊಮ್ಮೆ 2017ರಲ್ಲಿ ಯೋಜನಾ ಕಾರ್ಮಿಕರಿಗೆ ಪಿಎಫ್-ಇಎಸ್‍ಐ ಜಾರಿಗೊಳಿಸುವಂತೆ ಕಾರ್ಮಿಕ ಇಲಾಖೆ ಅಡಿಯಲ್ಲಿ ಸಮಿತಿ ರಚಿಸಲಾಯಿತು. ಇಲ್ಲಿಯವರೆಗೆ ಯಾವುದೇ ಕ್ರಮಗಳು ಜರುಗಿರುವುದಿಲ್ಲ.
2014ರಲ್ಲಿ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಬಿಜೆಪಿ ಸರ್ಕಾರ ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳಲಿಲ್ಲ. ಬದಲಾಗಿ ಬಜೆಟ್ ಗಳಲ್ಲಿ ಈ ಯೋಜನೆಗಳಿಗೆ ಹಣ ಕಡಿತಗೊಳಿಸಿರುತ್ತಾರೆ. ಮಹತ್ವದ ಯೋಜನೆಗಳನ್ನು ಕಡೆಗಣಿಸಿ, ಸಾಮಾಜಿಕ ಕ್ಷೇತ್ರಗಳನ್ನು ಖಾಸಗೀಕರಣ ಮಾಡಲು ಮುಂದಾಗುತ್ತಿದೆ. ಸರ್ಕಾರದ ಈ ಧೋರಣೆ ಕಾರ್ಯಕರ್ತೆಯರ ಅಸಮಾಧಾನ-ದುಃಖಕ್ಕೆ ಕಾರಣವಾಗಿದೆ. ಮಾನ್ಯ ಪ್ರಧಾನ ಮಂತ್ರಿ ಮೋದಿಯವರು, ಚುನಾವಣಾ ಸಮಯ ಹತ್ತಿರ ಬಂದಿರುವುದರಿಂದ ಸೆಪ್ಟಂಬರ್ ತಿಂಗಳಲ್ಲಿ ಅಂಗನವಾಡಿಕಾರ್ಯಕರ್ತೆಯರಿಗೆ ರೂ.1500 ಮತ್ತು ಸಹಾಯಕಿಯರಿಗೆ ರೂ.750 ಮತ್ತು ಆಶಾಗಳಿಗೆ ಕೇಂದ್ರ ಸರ್ಕಾರ ನೀಡುವ ಪ್ರೋತ್ಸಾಹಧನವನ್ನು ದ್ವಿಗುಣ ಮಾಡುವುದಾಗಿ ಘೋಷಿಸಿರುತ್ತಾರೆ. ಬಿಸಿಯೂಟ ಕಾರ್ಯಕರ್ತೆಯರಿಗೆ ಏನೂ ಇಲ್ಲ. ನಂತರದಲ್ಲಿ ಆದೇಶವಾಗಿದ್ದೇ ಬೇರೆ, ಘೋಷಣೆ ಬರೀ ಸುಳ್ಳು ಬೊಗಳೆ. ಆಶಾಗಳಿಗೆ ಪ್ರೋತ್ಸಾಹಧನವನ್ನು ದ್ವಿಗುಣ ಮಾಡುವುದರ ಬದಲಾಗಿ ಕೇವಲ ರೂ.1000 ಹೆಚ್ಚಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚಿದ್ದ ಮೊತ್ತದಲ್ಲಿ ಶೇ.40ರಷ್ಟು ರಾಜ್ಯ ಭರಿಸಲು ಹೇರಿರುತ್ತಾರೆ. ಹಾಗಿದ್ದಲ್ಲಿ ಪ್ರಧಾನಿಯವರೇ ಖುದ್ದಾಗಿ ಮಾಧ್ಯಮದ ಮೂಲಕ ಇಡೀ ದೇಶದ ಮುಂದೆ ಕೊಟ್ಟ ಮಾತನ್ನು ಮುರಿದಿರುವುದು ಅನ್ಯಾಯ ಅಲ್ಲವೇ!? ಕಾರ್ಯಕರ್ತೆಯರೊಂದಿಗೆ ಮಾನ್ಯ ಮೋದಿಯವರು ಸಂವಾದ ನಡೆಸಿ ಇವರ ಸೇವೆಗಳನ್ನು ಹೊಗಳಿ-ಶ್ಲಾಘಿಸಿದ್ದು ನಿಜವೇ ಆಗಿದ್ದಲ್ಲಿ ಅವರ ಸೇವೆಯನ್ನು ಗೌರವಿಸಿ, ಇಂಡಿಯನ್ ಲೇಬರ್ ಕಾನ್ಫರೆನ್ಸ್‍ನ, 45ನೇ ಸಮ್ಮೇಳನದ ಅಧಿವೇಶದಲ್ಲಿ ತ್ರಿಪಕ್ಷೀಯ ಉನ್ನತ ಸಮಿತಿಯಲ್ಲಿ ಸರ್ವಸಮ್ಮತದಿಂದ ಒಪ್ಪಿದಂತೆ ಇವರ ವೇತನ ಜಾರಿ ಮಾಡಬೇಕಾಗಿದೆ.

ಈ ಹಿನ್ನಲೆಯಲ್ಲ್ಲಿ ಎ.ಐ.ಯು.ಟಿ.ಯು.ಸಿ ದೇಶದಕಾರ್ಮಿಕರ ಸಮಸ್ಯೆಗಳ ವಿರುದ್ಧ ನೈಜ ಹೋರಾಟ ಬೆಳೆಸುವುದರೊಂದಿಗೆ, ಉನ್ನತ ನೀತಿ, ಸಂಸ್ಕøತಿಯ ವಿಚಾರಗಳ ಅಡಿ ಸೂಕ್ತ ಮಾರ್ಗದರ್ಶನ ನೀಡುತ್ತಿದೆ. ಹಲವಾರು ಭವ್ಯ ಹೋರಾಟಗಳಿಗೆ ನಾಯಕತ್ವ ನೀಡಿದೆ. ಈ ಸಂದರ್ಭದಲ್ಲಿ ಎ.ಐ.ಯು.ಟಿ.ಯು.ಸಿ ಗೆ ಸಂಯೋಜಿತಗೊಂಡಿರುವÀ ಆಶಾ ಅಂಗನವಾಡಿ ಬಿಸಿಯೂಟ ಕಾರ್ಯಕರ್ತೆಯರ ಸಂಘಗಳ ಒಕ್ಕೂಟದಿಂದ ಕೇಂದ್ರ ಸರ್ಕಾರದ ವಿವಿಧ ಸ್ಕೀಂ ಗಳಲ್ಲಿ ಸೇವೆ ಸಲ್ಲಿಸುತ್ತಿರುವ 63 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಆಶಾ ಅಂಗನವಾಡಿ ಬಿಸಿಯೂಟ ಕಾರ್ಯಕರ್ತೆ ಯರ ಈ ಕೆಳಗಿನ ಪ್ರಮುಖ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು, 28 ಜನವರಿ 2019 ರಂದುಂIUಖಿUಅ ನೇತೃತ್ವದಲ್ಲಿ ಬೃಹತ್ ಪಾರ್ಲಿಮೆಂಟ್ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಆಶಾ ಅಂಗನವಾಡಿ ಬಿಸಿಯೂಟ ಯೋಜನೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಪ್ರತಿನಿಧಿಗಳು ಈ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ರಾಜ್ಯ ಆಶಾ ಅಂಗನವಾಡಿ ಬಿಸಿಯೂಟ ಯೋಜನೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಸ್ತ ಕಾರ್ಯಕರ್ತೆಯರು ಈ ಹೋರಾಟವನ್ನು ಬೆಂಬಲಿಸಿ, ಬಲಗೊಳಿಸಬೇಕು, ಮತ್ತಷ್ಟು ಹರಿತಗೊಳಿಸಬೇಕು ಮತ್ತು ಉನ್ನತ ಹಂತಕ್ಕೆ ಕೊಂಡೊಯ್ಯಬೇಕೆಂದು ಂIUಖಿUಅ ಕರ್ನಾಟಕ ರಾಜ್ಯ ಸಮಿತಿ ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘ, ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘ, ಗಳ ರಾಜ್ಯ ಸಮಿತಿಗಳು ರಾಜ್ಯದ ಸಮಸ್ತ ಸ್ಕೀಂ ವರ್ಕರ್ಸ್‍ಗೆ ಕರೆ ನೀಡುತ್ತದೆ.

ಹಕ್ಕೊತ್ತಾಯಗಳು:
ಸ್ಕೀಂ ವರ್ಕರ್ಸ್‍ಗಳನ್ನು ಸರ್ಕಾರ ಖಾಯಂ ಮಾಡಿಕೊಳ್ಳಬೇಕು.
ಸ್ಕೀಂ ವರ್ಕರ್ಸ್‍ಗಳನ್ನು ಸ್ವಯಂಸೇವಕರು/ಕಾರ್ಯಕರ್ತೆಯರು ಅನ್ನುವ ಬದಲಿಗೆ ಕಾರ್ಮಿಕರು ಎಂದು ಪರಿಗಣಿಸಬೇಕು.
ದುಡಿತಕ್ಕೆ ತಕ್ಕಂತೆ ಇಲ್ಲದ ಪ್ರತಿಫಲ ಗೌರವಧನ-ಪ್ರೋತ್ಸಾಹಧನದ ಬದಲಾಗಿ ಕನಿಷ್ಠ ವೇತನ ಮಾಸಿಕ ರೂ.21,000 ಮಾಡಬೇಕು.
ಪಿಎಫ್, ಇಎಸ್‍ಐ, ಗ್ರಾಚ್ಯುಟಿ, ತುಟ್ಟಿ ಭತ್ಯೆ ನೀಡಬೇಕು.
ನಿವೃತ್ತರಿಗೆ ಮಾಸಿಕ ರೂ.6,000 ಪಿಂಚಣಿ ನೀಡಬೇಕು.
ಈ ಜನಾಭಿವೃದ್ಧಿ ಯೋಜನೆಗಳನ್ನು ಖಾಸಗೀಕರಣಗೊಳಿಸದೆ, ಬಜೆಟ್‍ನಲ್ಲಿ ಹೆಚ್ಚು ಹಣ ಮೀಸಲಿಡಬೇಕು.

ವಂದನೆಗಳೊಂದಿಗೆ, ತಮ್ಮ ವಿಶ್ವಾಸಿಗಳು,

( ಡಿ.ನಾಗಲಕ್ಷ್ಮಿ )

ರಾಜ್ಯಸಹಕಾರ್ಯದರ್ಶಿ, ಎ.ಐ.ಯು.ಟಿ.ಯು.ಸಿ
ರಾಜ್ಯ ಕಾರ್ಯದರ್ಶಿ, ಕ.ರಾ.ಸ.ಆಶಾ ಕಾರ್ಯಕರ್ತೆಯರ ಸಂಘ

ಪತ್ರಿಕಾ ಗೋಷ್ಠಿಯಲ್ಲಿ ಇದ್ದವರು ಎ.ಐ.ಯು.ಟಿ.ಯು.ಸಿ ಜಿಲ್ಲಾ ಮುಖಂಡರಾದ ಶರಣುಗಡ್ಡಿ, ಕ.ರಾ.ಸ.ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಕಾರ್ಯದರ್ಶಿ ಕೌಶಲ್ಯ, ಜಿಲ್ಲಾ ಮುಖಂಡರಾದ ಶೋಭಾ, ವಿಜಯಲಕ್ಷ್ಮೀ, ಆಪ್ರೀನ್, ವಿಜಯಲಕ್ಷ್ಮೀ ಭಾಗ್ಯನಗರ, ದೀಪಾ, ಶಾರದಾ ಗಂಗಾವತಿ ಇನ್ನಿತರ ಮುಖಂಡರು ಇದ್ದರು.

Please follow and like us:
error