ಪಾಪ್ಯುಲರ್ ಫಂಟ್ ಆಫ್‌ಇಂಡಿಯಾ : ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ


ಕೊಪ್ಪಳ : ಡಿ.೩೦, ಪಾಪ್ಯುಲರ್ ಫಂಟ್ ಆಫ್‌ಇಂಡಿಯಾ ರಾಷ್ಟ್ರೀಯ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದ ಅಂಗವಾಗಿ ಕೊಪ್ಪಳ ಭಾಗದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ಕೊಪ್ಪಳದ ಅಮೀನ್ ರೆಸಿಡೇನ್ಸಿ ಹಾಲ್‌ನಲ್ಲಿ ನಡೆಯಲಾಯಿತು.
ಕಾರ್ಯಕ್ರಮದ ಅಧ್ಯಕ್ಷಯ ಭಾಷಣವನ್ನು ಪಾಪ್ಯುಲರ್ ಫಂಟ್ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಸಮೀತಿ ಸದಸ್ಯರಾದ ಶಾಹೀದ್ ನಾಸೀರ್‌ರವರು ಮಾತನಾಡಿ ವಿದ್ಯಾರ್ಥಿ ವೇತನ ಪಡೆದ ದಿನ ವಿದ್ಯಾರ್ಥಿಗಳು ಕೇಲವ ನಮ್ಮದು ಎಂದು ತಿಳಿದುಕೊಳ್ಳದೇ ಸಮಾಜದ ಅಭಿವೃದ್ಧಿಯ ಜವಬ್ಧಾರಿಯನ್ನು ಹೋರಬೇಕು. ಪದವಿ ನಂತರ ಆರ್ಥಿಕವಾಗಿ ಸಧೃಢರಾಗಿ ಸಮಾಜವನ್ನು ಸಧೃಢಗೊಳಿಸಲು ಸಾಮಾಜಿಕ ಕಳಕಳಿಯೊಂದಿಗೆ ಕೆಲಸ ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮ ಮುಖ್ಯಅತಿಥಿಗಳಾಗಿ ಪಾಪ್ಯುಲರ್ ಫಂಟ್ ಆಫ್‌ಇಂಡಿಯಾ ಕರ್ನಾಟಕ ರಾಜ್ಯ ಸಮೀತಿಯ ಸದಸ್ಯರಾದ ಸಾಹೀದ್ ನಾಸೀರ್, ಜಿಲ್ಲಾ ಕಾರ್ಯದರ್ಶಿ ಫಯಾಜ್ ಅಹೇಮದ್, ಖಾಜಾ ಜಾಕೀರ್ ಹುಸೇನ್, ಕೋ ಆರ್ಡಿನೇಟರ್ ಮೌಲನಾ ಆಜಾದ್ ವಿಶ್ವವಿದ್ಯಾಲಯ ಮಾನ್ವಿ ಆದರ್ಶ ವಿದ್ಯಾಲಯದ ಪ್ರಾಂಶುಪಾಲರಾದ ವಾಹೀದ್ ಉನ್ನಿಸಾ ಬೇಗಂ, ಕೊಪ್ಪಳದ ಉರ್ದು ಶಾಲೆಯ ನೀವೃತ್ತ ಶಿಕ್ಷಕಿ ಜಕೀಯಾ ಸಿದ್ದಕಿ, ರಾಪ್ತಾಮಿಲತ್ ಸಂಸ್ಥೆಯ ಉಪಾಧ್ಯಕ್ಷ ಸೈಯದ್ ಜಮೀರ್ ಖಾದ್ರಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೊಪ್ಪಳ ತಾಲೂಕ ಅಧ್ಯಕ್ಷ ಅಬ್ದುಲ್ ಖಯೂಮ್, ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಚಾಂದ್ ಸಲ್ಮಾನ್ ಸೇರಿದಂತೆ ಇತರರು ಇದ್ದರು.

Related posts