ಕೊಪ್ಪಳದ ಪಾಪಿ ತಂದೆ ಮಕ್ಕಳನ್ನೇ ಕೊಂದ

 ಕೊಪ್ಪಳ :  ಪಾಪಿ ತಂದೆ ತನ್ನ ಮಕ್ಕಳು ಮತ್ತು ತಾಯಿಯೇಲೆ ಮಾರಣಾಂತಿಕ ಹಲ್ಲೆ ನಡೆಸಿ ಮಗುವಿನ ಸಾವಿಗೆ ಕಾರಣನಾಗಿ ತಾನೂ ನೇಣಿಗೆ ಶರಣಾದ  ಘಟನೆ 

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಕ್ಕರಗೋಳ ಗ್ರಾಮದಲ್ಲಿ ನಡೆದಿದೆ. ಕಕ್ಕರಗೋಳ ಗ್ರಾಮದ ಹೊನ್ನುರಪ್ಪ ಕಟಿಗೇರಿ ಎಂಬಾತನೇ ನೇಣಿಗೆ ಶರಣಾದ ವ್ಯಕ್ತಿ. ಈತ ಕುಡಿತದ ದಾಸನಾಗಿದ್ದು ಕಳೆದ ಮರು ದಿನಗಳ ಹಿಂದೆ ಕೂಡಾ ಕುಡಿದು ಬಂದು ಹೆಂಡತಿಯೋಂದಿಗೆ ಗಲಾಟೆ ನಡೆಸಿ ಹೆಂಡತಿಯನ್ನು ತವರು ಮನೆಗೆ ಓಡಿಸಿದ್ದ. ನಿನ್ನೆ ರಾತ್ರಿ ಮತ್ತೆ ಕುಡಿದು ಬಂದು ತಾಯಿಯೋಂದಿಗೆ ಗಲಾಟೆ ಶುರುಮಾಡಿದ್ದಾನೆ. ಈ ಸಮಯದಲ್ಲಿ ತಾಯಿಗೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ತಾಯಿ ಮೃತ ಪಟ್ಟಳು ಎಂದು ತಿಳಿದು ಮಕ್ಕಳ ಮೇಲೆ ಕೂಡಾ ಹಲ್ಲೆ ನಡೆಸಿದ್ದಾನೆ. ಈ ಸಮಯದಲ್ಲಿ ಪವಿತ್ರಾ {10} ವರ್ಷದ ಮಗಳು ಸ್ಥಳದಲ್ಲೆ ಮೃತ ಪಟ್ಟರೆ ತ್ರೀವೇಣಿ {7}, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

 ಈರಣ್ಣ {5}, ಸಿದ್ದಪ್ಪ {3} ಗಂಭೀರವಾಗಿ ಗಾಯಗೋಂಡಿದ್ದಾರೆ. ಇನ್ನು ಹೊನ್ನುರಪ್ಪನ ತಾಯಿ ಈರಮ್ಮ {60} ಕೂಡಾ ಗಂಭೀರವಾಗಿ ಗಾಯಗೋಂಡಿದ್ದು ಗಾಯಾಳುಗಳನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.  ಇನ್ನು ಆರೋಪಿ ತನ್ನ ಮಕ್ಕಳು ಹಾಗೂ ತಾಯಿ ಕೂಡಾ ಮೃತ ಪಟ್ಟಿದ್ದಾರೆ ಎಂದು ಭಾವಿಸಿ ತಾನೂ ಕೂಡಾ ಗ್ರಾಮದ ಹೋರ ವಲಯದಲ್ಲಿ ನೇಣಿಗೆ ಶರಣಾಗಿದ್ದಾನೆ…

Related posts

Leave a Comment