ಪಾಂಡುರಂಗ ದೇವಸ್ಥಾನದಲ್ಲಿ ಸಾಮುದಾಯಿಕ ಪಾರಾಯಣ ಕಾರ್ಯಕ್ರಮ


ಕೊಪ್ಪಳ : ಫೆ,೦೯ ನಗರದ ಗವಿಮಠ ಹತ್ತಿರ ಇರುವ ಪಾಂಡುರಂಗ ದೇವಸ್ಥಾನದಲ್ಲಿ ಫೆ.೦೬ ರಿಂದ ೧೨ರ ವರಗೆ ಚೈತನ್ಯಶ್ರೀ ಹ.ಭ.ಪ ತಾತ್ಯಾಸಾಹೇಬ ಬಾಬಸಾಹೇಬ ವಾಸಕರ ಮಹಾರಾಜ ಪಂಢರಪೂರ ಇವರ ಜನ್ಮಶತಾಬ್ಭಿ ಸ್ಮರಣಾರ್ಥವಾಗಿ ೧೦೮ಕ್ಕೂ ಹೆಚ್ಚು ಮಂಡಳಿಯವರಿಂದ ಶ್ರೀ ಜ್ಞಾನೇಶ್ವರಿ ಸಾಮುದಾಯಿಕ ಪಾರಾಯಣ ಕಾರ್ಯಕ್ರಮವು ಏರ್ಪಡಿಸಲಾಗಿದೆ.
ಪ್ರತಿದಿನ ಬೆಳಿಗ್ಗೆ ೫ ರಿಂದ ೬ ಗಂಟೆಯ ವರಗೆ ಕಾಕಡಾರತಿ ಭಜನೆ, ರ್ಕಿತನೆ, ಪ್ರವಚನ, ನಾಮಜಪ, ಜಾಗರ ಭಜನೆ, ಭಾರೂಡ ಸಂಗೀತ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗುವವು.
ಫೆ ೧೨ ರಂದು ಬೆಳ್ಳಿಗ್ಗೆ ೭ ರಿಂದ ೮ ಗಂಟೆಯವರಗೆ ಶ್ರೀ ಜ್ಞಾನೇಶ್ವರಿ ಪಾರಾಯಣದ ಸಾಂಗತಾ ಹಾಗೂ ಹ.ಭ.ಪ. ಧುಂಡಾ ಮಹಾರಾಜ ವಿರಚಿತ ಸಾರ್ಥ ಶ್ರೀ ಹರಿಪಾಠ ವಿವರಣೆ ಗ್ರಂಥದ ಉದ್ಘಾಟನೆ ಕಾರ್ಯಕ್ರಮ ಜರುಗಲಿದೆ.
ಕಾರಣ ತಾವು ತಮ್ಮ ಭಜನಾ, ಭಕ್ತ ಮಂಡಳಿ ಸಮೇತರಾಗಿ ಆಗಮಿಸಿ ತನು-ಮನ-ಧನ ಧಾನ್ಯದಿಂದ ಸಹಕರಿಸಿ ಶ್ರೀ ಪಾಂಡುರಂಗ ಕೃಪೆಗೆ ಪಾತ್ರರಾಗಬೇಕೆಂದು ಸತೀಶ ಕುಮಾರ ಬೊಂದಾಡೆ  ತಿಳಿಸಿದ್ದಾರೆ.

Please follow and like us:
error