ಪರಿಸರ ಕಾಳಜಿ ಹಾಗೂ ಸಮಾಜ ಸೇವೆ ಮಾಡುವಂತಹ ಮನಸ್ಸುಗಳನ್ನ ರೂಪಿಸಿ-ಪಿ.ನರಾಯಣ

ಕೊಪ್ಪಳ,೨೨- ಶಿಕ್ಷಕರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಪರಿಸರ ಕಾಳಜಿ ಹಾಗೂ ಸಮಾಜ ಸೇವೆ ಮಾಡುವಂತಹ ಮನಸ್ಸುಗಳನ್ನಾಗಿ ರೂಪಿಸಿ ಎಂದು ಕೀರ್ಲೋಸ್ಕರ್ ಕಾಖಾನೆಯ ಮಾನವ ಸಂಪನ್ಮೂಲ ಆಡಳಿತ ವಿಭಾಗದ ಉಪಾಧ್ಯಕ್ಷರು ಪಿ.ನರಾಯಣ ಹೇಳಿದರು. 
ಅವರು ಕೊಪ್ಪಳ ತಾಲೂಕಿನ ಗಿಣಗೇರಿ ಗ್ರಾಮದಲ್ಲಿ ಬೇಂದ್ರೆ ಪಬ್ಲಿಕ್ ಶಾಲೆಯಲ್ಲಿ ಮಕ್ಕಳಿಂದ ಕರಕುಶಲ ವಸ್ತು ಪ್ರದರ್ಶನ (ಕಸದಿಂದ ರಸ) ಮೇಳ ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವಸ್ತು ಪ್ರದರ್ಶನದಲ್ಲಿ ಮಕ್ಕಳು ಮನೆಯಲ್ಲಿ ಕಸವನ್ನಾಗಿ ಒಗೆಯುವಂತಹ ವಸ್ತುಗಳನ್ನು ಬಳಸಿಕೊಂಡು ಉತ್ತಮ ಮಾದರಿಯ ಆಕರ್ಶಕ ವಸ್ತುಗಳನ್ನು ತಯಾರಿಸಿ ಕಸದಿಂದ ರಸ ಎನ್ನುವ ಮಾತಿಗೆ ಬೆಲೆ ಬಂದಂತಾಗಿದ್ದು ಪ್ರತಿ ಮಗುವಿನಲ್ಲಿಯೂ ಸ್ವಚ್ಛತೆ ಬಗ್ಗೆ ಜಾಗೃತಿ ಅವಶ್ಯವಿದೆ ಎಂದು ಹೇಳಿದರು.
ಹೈದ್ರಾಬಾದ ಕರ್ನಾಟಕದ ಹಿಂದುಳಿದ ಪ್ರದೇಶದಲ್ಲಿ ಉತ್ತಮ ಶಿಕ್ಷಣ ನೀಡುವುದು ಸವಾಲಿನ ಕೆಲಸ. ಶಾಲಾ ಸಂಸ್ಥೆಯ ಮುಖ್ಯಸ್ಥರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಹಾಗೂ ಪಠ್ಯೇತರ ಚಟುವಟಿಕೆಗಳಿಗೂ ಅನುವು ಮಾಡಿಕೊಡುವಂತೆ ಒತ್ತಾಯಿಸಿದರು.
ಮಕ್ಕಳಲ್ಲಿ ಬಾಲ್ಯದಿಂದ ಭದ್ರ ಬುನಾದಿಯನ್ನು ಹಾಕಿ ಕೊಟ್ಟಾಗ ಮಾತ್ರ ಉತ್ತಮ ಪ್ರಜೆಗಳಾಗಿ ವಿಶ್ವಕ್ಕೆ ಮಾದರಿಯಾಗಿ ನಿಲ್ಲಬಲ್ಲಂತಹ ಶಕ್ತಿ ಹೊರಬರುತ್ತದೆ. ಗ್ರಾಮೀಣ ಮಟ್ಟದ ಶಿಕ್ಷಣಕ್ಕೆ ಹೆಚ್ಚು-ಹೆಚ್ಚು ಒತ್ತು ನೀಡುವ ಮೂಲಕ ಶಿಕ್ಷಣದಲ್ಲಿ ಕ್ರಾಂತಿ ಅಗತ್ಯವಿದೆ ಎಂದರು.
ತರಬೇತಿ:- ನಮ್ಮ ಕಾರ್ಖಾನೆ ವತಿಯಿಂದ ಪ್ರತಿ ವರ್ಷ ಶಿಕ್ಷಕರಿಗೆ ಉತ್ತಮ ತರಬೇತಿ ಕಾರ್ಯಗಾರಗಳನ್ನು ಅಳವಡಿಸಲಾಗುತ್ತಿದ್ದು, ತಾಲೂಕಿನ ಎಲ್ಲಾ ಖಾಸಗಿ ಶಾಲಾ ಶಿಕ್ಷಕರು ಇದರ ಸದುಪಯೊಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಭರವಸೆ:- ಬೇಂದ್ರೆ ಪಬ್ಲಿಕ್ ಸ್ಕೂಲ್ ಗೆ ಅತ್ಯುತ್ತಮವಾದ ವಾಟರ್ ಫಿಲ್ಟರ್ ಸೌಲಭ್ಯ ಒದಗಿಸುವ ಭರವಸೆ ನೀಡಿದ ಇವರು ಗ್ರಾಮೀಣ ಮಟ್ಟದಲ್ಲಿ ಉತ್ತಮ ಶಿಕ್ಷಣ ನೀಡುವ ಈ ಸಂಸ್ಥೆಗೆ ಅಗತ್ಯ ಸೌಲಭ್ಯ ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೀರ್ಲೋಸ್ಕರ್ ಕಾಖಾನೆಯ ಗ್ರಾಮೀಣ ಆಭಿವೃದ್ದಿ ವಿಭಾಗದ ಹಿರಿಯ ಅಧಿಕಾರಿಗಳಾದ ಉದಯ ಕುಲಕರ್ಣಿ, ಶಾಲಾ ಸಂಸ್ಥೆಯ ಅಧ್ಯಕ್ಷ ಸಂತೋಷ ದೇಶಪಾಂಡೆ, ಉಪಾಧ್ಯಕ್ಷ ರಮೇಶ ತುಪ್ಪದ, ಕಾರ್ಯದರ್ಶಿ ಮಂಜುನಾಥ ಮುಖ್ಯೋಪಾಧ್ಯಾಯ ಬಸವರಾಜ ಶಿರಗುಂಪಿಶೆಟ್ರ, ಶಿಕ್ಷಕರಾದ ಪಾಮೇಶ ಸೇರಿದಂತೆ ಇತರರು ಇದ್ದರು.

Please follow and like us:
error