ಪರಮತ ಸಹಿಷ್ಣುತೆ ಬಹಳ ಪ್ರಮುಖವಾಗಿದೆ-ಡಾ. ಶಂಕರ್ ಮಾಲಪುರೆ

Koppal KIMS Programme

ಕೊಪ್ಪಳ ಕಿಮ್ಸ್‌ದಲ್ಲಿ ಸದ್ಭಾವನಾ ದಿನಾಚರಣೆ
Koppal News : ಕೊಪ್ಪಳ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಕೊಪ್ಪಳ ಕಿಮ್ಸ್ ವತಿಯಿಂದ ಸದ್ಭಾವನಾ ದಿನಾಚರಣೆಯನ್ನು ಸೋಮವಾರದಂದು ಆಚರಿಸಲಾಯಿತು.
ಸದ್ಭಾವನಾ ದಿನದ ಪ್ರಯುಕ್ತ ಕಿಮ್ಸ್ ಆವರಣದಲ್ಲಿ “ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರೀ, ಮೇಲುಕೀಳು ಎಂದು ಮನುಜ ಮಾಡಿಕೊಂಡದಳ್ಳುರಿ” ಎಂಬ ಹಾಡಿನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೊಪ್ಪಳ ಕಿಮ್ಸ್ ನಿರ್ದೇಶಕರಾದ ಡಾ. ಶಂಕರ್ ಮಾಲಪುರೆ ಅವರು ಮಾತನಾಡಿ, ನಮ್ಮ ದೇಶದಲ್ಲಿ ಇನ್ನೂ ಅಭಿವೃದ್ಧಿಯಾಗಬೇಕಾಗಿದೆ. ಅಲ್ಲದೇ ಶಾಂತಿಯು ಸಹ ಸ್ಥಾಪನೆಯಾಗಬೇಕಾಗಿದೆ. ಪರಮತ ಸಹಿಷ್ಣುತೆ ಬಹಳ ಪ್ರಮುಖವಾಗಿದೆ. ನಾವೆಲ್ಲ ಒಂದು ಎಂಬುವುದನ್ನು ಸಾರವನ್ನು ಸಾರುವ ಉದ್ದೇಶಕ್ಕಾಗಿ ಸದ್ಭಾವನಾ ದಿವಸ ಆಚರಿಸಲಾಗುವುದು ಎಂದರು.
ಅಬ್ದುಲ್ ಕಲಾಂರವರನ್ನು ದ್ವೇಷಿಸುವ ಹಿಂದೂಗಳಿಲ್ಲ, ಅಟಲ ಬಿಹಾರಿ ವಾಜ್‌ಪೇಯಿಯವರನ್ನ ದ್ವೇಷಿಸುವ ಮುಸ್ಲೀಮ್‌ಗಳಿಲ್ಲ, ಮದರ್ ತೆರೆಸಾ ರವರನ್ನ ದ್ವೇಷಿಸುವ ಭಾರತೀಯರೇ ಇಲ್ಲ ಎಂದು ಭಾರತೀಯರ ಭಾವೈಕ್ಯತೆಯನ್ನು ಪ್ರೌಢತೆಯಿಂದ ವಿವರಿಸಿದರು ಶ್ರೀನಿವಾಸ್. ಕಾರ್ಯಕ್ರಮದಲ್ಲಿ “ಸಾರೇ ಜಹಾ ಸೆ ಅಚ್ಚಾ , ಹಿಂದೂಸಿತಾ ಹಮಾರ’ ಎಂಬ ಭಾರತದ ಭಾವೈಕ್ಯತೆಯನ್ನು ಎತ್ತಿ ಹಿಡಿಯುವ ಗೀತೆಯನ್ನು ಪ್ರಸ್ತುತ ಪಡಿಸಲಾಯಿತು. ವಿದ್ಯಾರ್ಥಿಗಳು “ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮತದಲ್ಲಿ ಮೇಲ್ಯಾವುದೋ’ ಎಂದು ಸೊಗಸಾಗಿ ಹಾಡಿದವರು.
ಕಾರ್ಯಕ್ರಮದಲ್ಲಿ “ನಾನು ಕೋಮು ಸೌಹಾರ್ದತೆಯನ್ನು ಪರಿಪಾಲಿಸುತ್ತೇನೆ, ಧಾರ್ಮಿಕ ಸಹಿಷ್ಣುತೆಯ ಬಗ್ಗೆ ಎಲ್ಲ ಜನರಲ್ಲಿ ಅರಿವು ಮೂಡಿಸುತ್ತೇನೆ, ದೇಶದ ಪರಿಪೂರ್ಣ ಏಳ್ಗೆಗೆ ಶ್ರಮಿಸುತ್ತೇನೆ” ಎಲ್ಲರೂ ಎಂದು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು. ಜೀವ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಅಮರೇಶ ಸೇರಿದಂದೆ ಅನೇಕರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Koppal Kims