ಪರಂಪರಾ ಕೂಟ : ಐತಿಹಾಸಿಕ ಪರಂಪರೆ ಉಳಿಸಿ

ಕೊಪ್ಪಳ: ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಳಿಂದ ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಇರಕಲ್‍ಗಡಾ ಗ್ರಾಮದಲ್ಲಿ ನಡೆದ ಕೋಟೆಯ ರಕ್ಷಣೆ ಸ್ವಚ್ಚತೆ ಕುರಿತಂತೆ ಜಾಗೃತಿ ಜಾಥಾ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

.

ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ಪಾರಂಪರಿಕ ಕಾಲ್ನಡಿಗೆ ಮೂಲಕ ಆರಂಭಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸ್ಮಾರಕಗಳ ರಕ್ಷಣೆ ಕುರಿತಂತೆ ಘೋಷಣೆಗಳನ್ನು ಕೂಗುತ್ತಾ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಕೈಗೊಂಡರು.

ಗ್ರಾಮದ ಮುಖಂಡ ವೀರಬಸಪ್ಪ ಪಟ್ಟಣಶೆಟ್ಟಿ ಮಾತನಾಡಿ, ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಈ ಸ್ಮಾರಕಗಳನ್ನು ರಕ್ಷಿಸಬೇಕಾದದ್ದು ನಮ್ಮೆಲ್ಲರ ಕತ್ರ್ಯವ್ಯ. ಆ ನಿಟ್ಟಿನಲ್ಲಿ ಎಲ್ಲರೂ ಸ್ಮಾರಕಗಳನ್ನು ರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಕೊಂಡೊಯ್ಯೋಣ ಎಂದರು.
ಪರಂಪರೆ ಕೂಟದ ಸಂಚಾಲಕಿ ಶುಭಾ ಕಾರ್ಯಕ್ರಮದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದ್ಯಾಮವ್ವ ತಿಪ್ಪಣ್ಣ, ಹಿರಿಯರಾದ ರಂಗನಾಥ ವೈ ಮಾಲಿಪಾಟಿಲ, ಶಿಕ್ಷಕ ಮಲ್ಲೇಶಪ್ಪ ಉಳ್ಳಾಗಡ್ಡಿ, ಸಮೂಹ ಸಂಚಾಲಕಿ ಭಾರತಿ ಪಟ್ಟಣಶಟ್ಟರ್ ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Please follow and like us:
error