ಪದವಿ ಮತ್ತು ಪದವಿ ಪೂರ್ವ ಪ್ರಾಚಾರ್ಯರಾದ ಎಂ.ಎಸ್ ದಾದ್ಮಿ ಮತ್ತು ಬಿ.ಶ್ರೀನಿವಾಸ ಇವರಿಗೆ ಬೀಳ್ಕೊಡುಗೆ


ಕೊಪ್ಪಳ: ವಿದ್ಯಾರ್ಥಿಗಳೇ ನಮ್ಮ ಪಾಲಿನ ದೇವರು. ವೃತ್ತಿ ಜೀವನದಲ್ಲಿ ಅವರಿಗಾಗಿ ದಕ್ಷತೆಯಿಂದ ಮತ್ತು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ ತೃಪ್ತಿ ಇದೆ. ಈ ಅವಧಿಯಲ್ಲಿ ನನ್ನೊಂದಿಗೆ ಸಹಕರಿಸಿದ ವೃತ್ತ್ತಿ ಬಾಂಧವರು ಮತ್ತು ಆಡಳಿತ ಮಂಡಳಿಯವರಿಗೂ ಕೃತಜ್ಞನಾಗಿರುವೆನೆಂದು ಶ್ರೀಗವಿಸಿದ್ಧೇಶ್ವರ ಪದವಿ ಕಾಲೇಜಿನ ರಸಾಯನ ಶಾಸ್ತ್ರ ವಿಷಯದ ಪ್ರಾಧ್ಯಪಕ ಮತ್ತು ಪ್ರಾಚಾರ್ಯರಾಗಿದ್ದ ಎಂ.ಎಸ್ ದಾದ್ಮಿ ಅಭಿಪ್ರಾಯ ವ್ಯಕ್ತಪಡಿಸಿದರು. ಇವರ ನಿವೃತ್ತಿಯ ನಿಮಿತ್ಯ ದಿನಾಂಕ ೩೦-೦೫-೨೦೨೦ ರಂದು ಆಯೋಜಿಸಿದ್ದ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆಯ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮತ್ತೋರ್ವರಾದ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿದ್ದ ಬಿ.ಶ್ರೀನಿವಾಸ ಅವರು ಸಹ ಇಂದು ನಿವೃತ್ತಿಯಾದ ನಿಮತ್ಯ ಸನ್ಮಾನ ಸ್ವೀಕರಿಸಿ ಅತ್ಯಂತ ಕಡಿಮೆ ಅವಧಿಯಲ್ಲಿ ನಾನು ಪ್ರಾಚಾರ್ಯನಾಗಿ ಉತ್ತಮ ಸೇವೆ ಸಲ್ಲಿಸಿದ್ದೇನೆ. ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ನನಗೆ ಸಹಾಯ ಮತ್ತು ಸಹಕಾರ ನನಗೆ ಸ್ಪೂರ್ತಿದಾಯಕವಾಗಿತ್ತು ಎಂದರು. ಅತಿಥಿಗಳಾಗಿ ಶ್ರೀ ಗವಿಸಿದ್ಧೆಶ್ವರ ಟ್ರಸ್ಟನ ಕಾರ್ಯದರ್ಶಿ ಡಾ.ಆರ್ ಮರೇಗೌಡರ್ ಮಾತನಾಡಿ ಎಂ.ಎಸ್ ದಾದ್ಮಿ ಮತ್ತು ಬಿ.ಶ್ರೀನಿವಾಸ್ ಇವರುಗಳು ನಮ್ಮ ಮಹಾವಿದ್ಯಾಲಯದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಇವರ ಜೀವನ ತುಂಬಾ ಶಿಸ್ತು ಮತ್ತು ಕ್ರಮಬದ್ದವಾಗಿತ್ತು. ಅಪಾರ ಅನುಭವದೊಂದಿಗೆ ವಿಷಯ ಪರಿಣಿತಿಯಿಂದ ಪಾಠ ಮತ್ತು ಆಡಳಿತ ಮಾಡಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದರು. ಯಾವುದೇ ವಿಚಾರ ಸಂಕಿರಣ, ಸಭೆ, ಸಮಾರಂಭಗಳನ್ನ್ನು ಯಶಸ್ವಿಯಾಗಿ ಜರುಗಿಸುತ್ತಿದ್ದರು. ಉತ್ತಮವಾದ ನಡೆ,ನುಡಿ, ಶಿಸ್ತು ಹಾಗೂ ಸಂಯಮ ಅವರಲ್ಲಿತ್ತು ಎಂದರು. ಇದೇ ಸಮಯದಲ್ಲಿ ಶ್ರೀ ಗವಿಸಿದ್ಧೆಶ್ವರ ಟ್ರಸ್ಟನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಏಕನಾಥ ಏಕಬೋಟೆ ಮಾತನಾಡಿದರು. ವೇದಿಕೆಯ ಮೇಲೆ ಶ್ರೀ ಗವಿಸಿದ್ಧೆಶ್ವರ ಟ್ರಸ್ಟನ ಸದಸ್ಯರಾದ ಸಂಜಯ ಕೊತಬಾಳ , ಪದವಿ ಕಾಲೇಜಿನ ನೂತನ ಪ್ರಾಚಾರ್ಯ ಡಾ.ಜೆ.ಎಸ್ ಪಾಟೀಲ, ಪದವಿ ಪೂರ್ವ ಕಾಲೇಜಿನ ನೂತನ ಪ್ರಾಚಾರ್ಯ ಡಾ.ವಿರೇಶ ಇದ್ದರು. ಇಬ್ಬರು ನಿವೃತ್ತರ ಕುರಿತು ಪ್ರಾಧ್ಯಾಪಕರಾದ ಡಾ.ದಯಾನಂದ ಸಾಳಂಕಿ, ಶಶಿಕಾಂತ ಉಮ್ಮಾಪುರ, ನಿವೃತ್ತ ಪ್ರಾಧ್ಯಾಪಕರಾದ ಎಸ್.ಬಿ ಹಿರೇಮಠ, ಅತಿಥಿ ಉಪನ್ಯಾಸಕರಾದ ಡಾ.ಪ್ರಕಾಶ ಬಳ್ಳಾರಿ, ಡಾ.ಹಂದ್ರಾಳ್ ಮಾರ್ಕಂಡಯ್ಯ, ಉಪನ್ಯಾಸಕಿ ಸುಧಾ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಪದವಿ ಪ್ರಾಚಾರ್ಯ ಡಾ.ಜೆ.ಎಸ್ ಪಾಟೀಲ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ವರ್ತಕರಾದ ಪ್ರಭು ಹೆಬ್ಬಾಳ, ಪರಮೇಶ್ವರಪ್ಪ ಕೊಪ್ಪಳ, ವೆಂಕಟೇಶಶಾನ್‌ಬಾಗ್, ಕಾಶೀನಾಥರೆಡ್ಡಿ, ಶ್ರೀನಿವಾಸ್ ಗುಪ್ತಾ , ಪರೀಕ್ಷಿತರಾಜ, ಗುರುಬಸವರಾಜ ಗಾಂಜೀ, ಶರಣು ಶೆಟ್ಟರ್ ಭಾಗವಹಿಸಿದ್ದರು. ಸ್ವಾಗತ ಪ್ರಾಧ್ಯಾಪಕ ಡಾ.ಚನ್ನಬಸವರಾಜ, ನಿರೂಪಣೆ ಉಪನ್ಯಾಸಕ ಪ್ರಾಧ್ಯಾಪಕ ಡಾ.ನಾಗರಾಜ ದಂಡೋತಿ ನೆರವೇರಿಸಿದರು. ಸಭೆಯಲ್ಲಿ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಭಂಧಿಗಳು ಭಾಗವಹಿಸಿದ್ದರು.

Please follow and like us:
error