ಪದವಿ ಪರೀಕ್ಷಾ ಫಲಿತಾಂಶ ವಿಳಂಬನೀತಿ ಖಂಡಿಸಿ ಪ್ರತಿಭಟನೆ.


ಭಾರತ ವಿದ್ಯಾರ್ಥಿ ಫಡರೇಶನ್ (ಎಸ್ ಎಫ್ ಐ) ತಾಲೂಕ ಸಮಿತಿಯು ಇಂದು ನಗರದ ಶ್ರೀ ರಾಮುಲು ಸ್ಮಾರಕ ಮಹಾ ವಿದ್ಯಾಲಯದಮುಂದೆ ಪದವಿ ವಿದ್ಯಾರ್ಥಿಗಳ ಪರೀಕ್ಷ ಫಲಿತಾಂಶ ವಿಳಂಬಮಡಿರುವ ವಿಜಯ ನಗರ ಶ್ರೀಕೃಷ್ಣ ದೇವರಾಯ ವಿವಿ ಲಯದ ವಿರುದ್ಧ ಪ್ರತಿಭಟನೆ ಮಾಡಲಾಯತಿ. ರಾಮುಲು ಸ್ಮಾರಕ ಮಹಾ ವಿದ್ಯಾಲಯದಲ್ಲಿ ಬಿ.ಎ, ಬಿ.ಕಾಂ. ಒದುತ್ತಿರುವ ವಿದ್ಯಾರ್ಥಿಗಳಲ್ಲಿ ಐಟಿಐ ಪಾಸಾಗಿ ಪದವಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಅಂತಿಮ ವರ್ಷದಲ್ಲಿದ್ದು, ತಾಂತ್ರಿಕ ಕಾರಣಗಳಿಂದಾಗಿ ವಿವಿ ಲಯದಿಂದ ೨ ಮತ್ತು ೪ನೆಯ ಸವಿಷ್ಟರಿನ ಫಲಿತಾಂಶ ಇಲ್ಲಿಯ ವರೆಗೂ ಬಿಡುಗಡೆಯಾಗಿರುವುದಿಲ್ಲ.
ಇದರಿಂದಾಗಿ ವಿದ್ಯಾರ್ಥಿಗಳಿಗೆ ೪ ಮತ್ತು ೬ ಸೆಮಿಷ್ಟರನ ಪರೀಕ್ಷೆಯ ಚನಲ್ ಕಟ್ಟಲು ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು ಮತ್ತು ಪರೀಕ್ಷೆಗೆ ಅನುಮತಿನೀಡುವುದಿಲ್ಲವೆಂದು ಮೌಖಿಕವಾಗಿ ಹೇಳುವುದರ ಮೂಲಕ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಕನಸಿಗೆ ಕೊಡಲಿ ಪಟ್ಟು ಕೊಡಲು ಹೊರಟಿದ್ದಾರೆ. ಕಾಲೇಜಿನ ಮತ್ತು ವಿಶ್ವ ವಿದ್ಯಾಲಯದ ಲಯದ ಕೆಲ ತಪ್ಪು ನೀತಿಗಳಿಂದಾಗಿ ವಿದ್ಯಾರ್ಥಿಗಳು ಬಲಿ ಪಶುಹಾಗುತ್ತಿದ್ದಾರೆ. ಹಾಗೂ ಐಟಿಐ ಅಂಕಪಟ್ಟಿಮೇಲೆ ಪದವಿ ಪ್ರವೇಶ ಪಡೆದ ಶಿಕ್ಷಣ ಕಲಿಯುತ್ತಿರುವ ಬೇರ ಕಾಲೇಜಿ ವಿದ್ಯಾರ್ಥಿಗಳಿಗೆ ಫಲಿತಾಂಶ ಬಿಡುಗಡೆಮಾಡಲಾಗಿದೆ. ವಿವಿ ವ್ಯಾಪ್ತಿಯ ಎಲ್ಲಾ ಕಾಲೇಜುಗಳಲ್ಲಿ ಫಲಿತಾಂಶ ಬಿಡುಗಡೆಯಾಗಿದ್ದು ಕೇವಲ ರಾಮುಲು ಕಾಲೇಜಿನ ವಿದ್ಯಾರ್ಥಿಗಳ ಫಲಿತಾಂಶ ಮಾತ್ರ ತಡೆಹಿಡಿಯಲಾಗಿದೆ.
ಕಾಲೇಜಿನ ಮತ್ತು ವಿಶ್ವ ವಿದ್ಯಾಲಯದ ತಪ್ಪಿನಿಂದಾಗಿ ಇಂದು ವಿದ್ಯಾರ್ಥಿಗಳು ಪದವಿ ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ಖಂಡಿಸಿ ಕಾಲೇಜಿನ ಮುಂದುಗಡೆ ಇಂದು ಬೆಳಿಗ್ಗೆ ಎಲ್ಲಾ ವಿದ್ಯಾರ್ಥಿಗಳ ಫಲಿತಾಂಶವನ್ನು ಕೂಡಲೇ ಬಿಡುಗಡೆಮಾಡಬೇಕೆಂದು ಒತ್ತಾಯಿಸಿ ಎಸ್ ಎಫ್ ಐ ನೇತ್ರತ್ವದಲ್ಲಿ ಪ್ರತಿಭಟನೆಮಾಡಲಾಯಿತು. ಪ್ರಾಚಾರ್ಯರ ಮೂಲಕ ವಿವಿ ಕುಲಪತಿ/ಕುಲಸಚಿವರುಗಳುಗೆ ಮನವಿಪತ್ರ ಸಲಲಿಸಿ ಸೋಮವಾರ ಸಂಜೆ ೫ ಘಂಟೆಯ ಒಳಗೆ ಸಮಸ್ಯೆ ಬಗೆಹರಿಯದಿದ್ದರೆ ಅನಿರ್ಧಿಷ್ಟಾವಧಿ ಧರಣಿಗೆ ಮುಂದಾಗುತ್ತೇವೆ ಎಂದು ತಿಳಿಸಲಾಯಿತು. ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷರಾದ ಅಮರೇಶ ಕಡಗದ್, ಮುಖಂಡರುಗಳಾದ ಶಿವಕುಮಾರ, ರಾಹುಲ್, ಯಂಕಪ್ಪ, ಚಂದ್ರಶೇಖರ್, ಲಿಂಗೇಶ, ಹನುಮಂತ, ರಾಮಕುಮಾರ ಮರಿನಾಗಪ್ಪ, ರಾಜೇಶ, ತೇಜಸ್, ಇತರರು ಭಾಗವಹಿಸಿದ್ದರು.

Please follow and like us:
error