You are here
Home > Koppal News > ಪತ್ರ ಚಳುವಳಿಗೆ ಅಣ್ಣಾ ಹಜಾರೆಯರಿಂದ ಚಾಲನೆ

ಪತ್ರ ಚಳುವಳಿಗೆ ಅಣ್ಣಾ ಹಜಾರೆಯರಿಂದ ಚಾಲನೆ

ಕೊಪ್ಪಳ: ನಗರದ ಸಾಹಿತ್ಯ ಭವನದಲ್ಲಿ ಇಂದು ದಿನಾಂಕ ೪-೧-೨೦೧೮ ರಂದು ಬೆಳಿಗ್ಗೆ ೧೦ ಗಂಟೆಗೆ ಸಾಮಾಜಿಕ ಹೋರಾಟಗಾರರು, ಪದ್ಮಭೂಷಣ ಶ್ರೀ ಅಣ್ಣ ಹಜಾರೆಯವರೊಂದಿಗೆ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಕೊಪ್ಪಳ, ಜೀವದಾನ ಗೆಳೆಯರ ಬಳಗ ಕೊಪ್ಪಳ ಇವರ ಸಹಯೋಗದಲ್ಲಿ ಶ್ರೀ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ದಿನಾಂಕ : ೦೪-೦೧-೨೦೧೮ ರಿಂದ
೦೬-೦೧-೨೦೧೮ರ ವರಗೆ ಪ್ರಧಾನಮಂತ್ರಿಯವರಿಗೆ ಮನವಿಯನ್ನು ಮಾಡಿಕೊಳ್ಳಲು ಹಮ್ಮಿಕೊಂಡಿದ್ದ ಪತ್ರ ಚಳುವಳಿಯನ್ನು ಇಂದು ಅಣ್ಣಾಹಜಾರೆಯವರು ತಾವೇ ಸ್ವತ: ಪ್ರಧಾನ ಮಂತ್ರಿಗಳಿಗೆ ಬರೆದ ಪತ್ರವನ್ನು ಪೆಟ್ಟಿಗೆಯಲ್ಲಿ ಹಾಕುವದರ ಮೂಲಕ ಪತ್ರ ಚಳುವಳಿಗೆ ಚಾಲನೆ ನೀಡಿದರು.
ದೇಶದ ರಾಷ್ಟ್ರೀಯ ಕಾರ್ಯಕ್ರಮವನ್ನಾಗಿ ರಕ್ತದಾನವನ್ನು ಘೋಷಿಸಿದರೆ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವವರ ಸಂಖ್ಯೆ ಹೆಚ್ಚಿಸುವ ಮೂಲಕ ರಕ್ತಹಿನತೆಯಿಂದ ಬಳಲುತ್ತಿರುವ ಜನರಿಗೆ ಬದುಕುವ ಆಶಾಕಿರಣವಾಗಬಹುದು ಎಂಬ ಆಶಯ ಇದರಲ್ಲಿ ಅಡಗಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಕೊಪ್ಪಳದ ಡಾ.ಶ್ರೀನಿವಾಸ ಹ್ಯಾಟಿ ತಿಳಿಸಿದ್ದಾರೆ

Top