ಪತ್ರಿಕೋದ್ಯಮದಲ್ಲಿ ವಿಶ್ವಾಸಾರ್ಹತೆ ಮುಖ್ಯ : ಮೌನೇಶ್ ಬಡಿಗೇರ್

ಅಳವಂಡಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ
ಕೊಪ್ಪಳ, ಜು.೨೩ : ಪತ್ರಿಕಾ ಧರ್ಮ ಎನ್ನುವುದು ಜಾತಿರಹಿತವಾದುದ್ದು, ಒಂದು ಕಾಲದಲ್ಲಿ ಅದು ವೃತ್ತಿಯಾಗಿತ್ತು ಇಂದು ಪತ್ರಿಕಾ ಸೇವೆಯೂ ಉದ್ಯಮಿಗಳ ಕೈಯಲ್ಲಿ ಹೋಗಿದೆ. ವೃತ್ತಿ ಧರ್ಮ ಕಳೆದುಕೊಂಡಿದೆ ಎಂದು ಖಾಸಗಿ ಟಿವಿ ವಾಹಿನಿಯ ವರದಿಗಾರ ಮೌನೇಶ್ ಬಡಿಗೇರಿ ಅಸಮಾಧಾನ ವ್ಯಕ್ತಪಡಿಸಿದರು.


ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ಆಯೋಜಿಸಿ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆರಂಭದಲ್ಲಿ ಪತ್ರಿಕೋದ್ಯಮ ಎನ್ನುವುದು ವೃತ್ತಿಯಾಗಿತ್ತು ಆದರೆ, ಪ್ರಸಕ್ತ ದಿನಗಳಲ್ಲಿ ಉದ್ಯಮಿಗಳ ಕಪಿಮುಷ್ಠಿಯಲ್ಲಿ ಮಾಧ್ಯಮ ಸಿಲುಕಿದೆ. ಮಾಧ್ಯಮ ಮಾಲೀಕರ ಮಾತಿನಂತೆ ಆದೇಶದಂತೆ ಕೆಲಸ ಮಾಡುವ ಪರಸ್ಥಿತಿ ಹಾಗೂ ಒತ್ತಡ ಪತ್ರಕರ್ತರದ್ದಾಗಿದೆ. ಪತ್ರಕರ್ತರು ಇಂದು ಸುದ್ದಿ ಕಳುಹಿಸುವ ಪೋಸ್ಟ್ ಮಾಸ್ಟರ್ ಗಳಾಗಿದ್ದೇವೆ ಎಂದು ಹೇಳಿದರು.

ಪತ್ರಿಕೋದ್ಯಮ ಎನ್ನುವುದು ಪವಿತ್ರವಾದ ವೃತ್ತಿ, ವಿಶ್ವಾಸಾರ್ಹತೆಯಿಂದ ಇಲ್ಲಿ ಜೀವನ ಸಾಗಿಸಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಬದ್ಧತೆ ಮುಖ್ಯ. ಅಂದು ಮಂಗಳೂರು ಸಮಾಚಾರ ಆರಂಭವಾಗಿದ್ದು ಧರ್ಮ ಪ್ರಚಾರಕ್ಕಾಗಿ. ಆ ನೆನಪಿಗೆ ರಾಜ್ಯದಲ್ಲಿ ರತಿವರ್ಷ ಜುಲೈ ೧ ರಂದು ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕಾವೃತ್ತಿಯಲ್ಲಿ ಧ್ಯೇಯ ಉದ್ದೇಶಗಳು ಇದ್ದವು. ಅವು ಇಂದು ಉಳಿದುಕೊಂಡಿಲ್ಲ. ನಾವು ಸೇವೆ ಮಾಡುತ್ತಿಲ್ಲ. ವೃತ್ತಿಯನ್ನು ಮಾಡುತ್ತಿದ್ದೇವೆ. ಇಡೀ ದೇಶ ಇಡೀ ರಾಜ್ಯ ವಿಷಮ ಪರಸ್ಥಿತಿಯಲ್ಲಿದೆ. ಇತ್ತೀಚಿನ ದಿನಗಳಲ್ಲಿ ಬಡೆದಾಟ, ಗಲಾಟೆ ರಾಜಕೀಯ ವಿಷಯಗಳು ಬಿತ್ತರಿಸಲಾಗುತ್ತಿದೆ. ಇದರ ಮಧ್ಯೆ ಆರೋಗ್ಯಕರ ಸಮಾಜ ಮೌಲ್ಯವನ್ನು ಉಳಿಸಿಕೊಳ್ಳಬೇಕಾಗಿದೆ ಅನಿರ್ವಾಯತೆ ಪತ್ರಕರ್ತರಿಗೆ ಎದುರಾಗಿದೆ ಎಂದರು.
ಬದ್ಧತೆ ಇದ್ದರೆ ಮಾತ್ರ  ಪತ್ರಿಕೋದ್ಯಮದಲ್ಲಿ ಉಳಿಯಲು ಸಾಧ್ಯ. ಮೊದಲಿನ ಪರಿಸ್ಥಿತಿ ಸದ್ಯ ಇಲ್ಲ. ಒಬ್ಬ ಪತ್ರಕರ್ತನಿಗೆ ಪ್ರಶ್ನೆ ಮಾಡುವ ಮನೋಭಾವನೆ ಇರಬೇಕು. ಪತ್ರಿಕೋದ್ಯಮ ವಿದ್ಯಾರ್ಥಿಗಳು ಮಾಧ್ಯಮಗಳಲ್ಲಿ ಪ್ರವೇಶ ಮಾಡುವ ಮುನ್ನ ಬದ್ಧತೆ, ವಿಶ್ವಾಸರ್ಹತೆ ಇಟ್ಟುಕೊಂಡು ಬನ್ನಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಮಾಜಶಾಸ್ತ್ರದ ಪ್ರಾಧ್ಯಾಪಕ ನಾಗೇಂದ್ರಪ್ಪ ಮಾತನಾಡಿ, ಸಾಮಾನ್ಯ ಮನುಷ್ಯನ ಸ್ಥಿತಿಗಳನ್ನು ತೋರಿಸುವ ತಾಳ್ಮೆ ಮಾಧ್ಯಮಗಳಲ್ಲಿ ಉಳಿದಿಲ್ಲ. ಏನಿದ್ದರೂ, ರಾಜಕೀಯ ಗಲಾಟೆ, ಅಪರಾಧ, ಜೋತಿಷ್ಯಗಳನ್ನು ಗಂಟೆಗಟ್ಟಲೇ ತೋರಿಸಲಾಗುತ್ತಿದೆ. ಮಾಧ್ಯಮಗಳು ಇಂದು ತಮ್ಮ ವೃತ್ತಿಮೌಲ್ಯಗಳನ್ನು ಮರೆತಿವೆ. ಆದರೆ ಪಿ. ಸಾಯಿನಾಥ ಅಂಥ ವ್ಯಕ್ತಿಗಳು ಸಾಮಾನ್ಯ ಗ್ರಾಮೀಣ ಕುರಿಗಾಯಿಗ ವ್ಯಕ್ತಿಗೂ ಹತ್ತಿರವಾಗಿದ್ದಾರೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಇಂತಹವರ ಬಗ್ಗೆ ಓದಿಕೊಳಬೇಕು ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ, ಕಾಲೇಜಿ ಪ್ರಾಂಶುಪಾಲರಾದ ಗವಿಸಿದ್ಧಪ್ಪ ಮುತ್ತಾಳ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರ ಒಂದು ಜಾವಾಬ್ದಾರಿಯುತ ಕ್ಷೇತ್ರ. ಸಾಖಷ್ಟು ಒತ್ತಡಗಳನ್ನು ಸಹಿಸಿಕೊಂಡು ಪತ್ರಕರ್ತರು ಕೆಲಸಮಾಡಬೇಕಾಗುತ್ತದೆ. ಇಂದು ಉದ್ಯಮವಾಗಿರುವುದರಿಂದ, ಬಂಡವಾಳಶಾಹಿಗಳ ಕೈಯಲ್ಲಿರುವುದರಿಂದ ತನ್ನ ಮೌಲ್ಯಗಳನ್ನು ಕಳೆದುಕೊಂಡಿದೆ. ಈ ವೃತ್ತಿಗೆ ಬರುವವರು ಆರೋಗ್ಯಕರ ಸಮಾಜ ನಿರ್ಮಿಸಲು ಶ್ರಮಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕರಾದ ಇಮಾಮ್‌ಸಾಬ್, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ವಿಜಯ ಕುಲಕರ್ಣಿ,  ಕನ್ನಡ ಉಪನ್ಯಾಸಕ ಸಂಗಮೇಶ್, ಇಂಗ್ಲೀಷ್ ಉಪನ್ಯಾಸಕ ವಿಜಯಕುಮಾರ್ ವೊಟ್ಟಿನ್, ಇತಿಹಾಸ ಉಪನ್ಯಾಸಕ ಶಂಕರ್ ಬಡಿಗೇರ್, ಅರ್ಥಶಾಸ್ತ್ರ ಉಪನ್ಯಾಸಕ ವೆಂಕಟೇಶ್ ಇದ್ದರು.
ಕು. ಲಲಿತ ಸಂಗಡಿಗರು ಪ್ರಾರ್ಥಿಸಿದರು, ಕು. ಅಶ್ವಿನಿ ಸ್ವಾಗತಿಸಿದರು. ಕು.ಲಲಿತ ವಂದಿಸಿದರು. ವಿದ್ಯಾರ್ಥಿ ಸಂತೋಷ ನಿರೂಪಿಸಿದರು.  

Please follow and like us:
error