ಪತ್ರಿಕೆ ಸಮಾಜ ಸುಧಾರಣೆಗೆ ಮಹತ್ವದ ಪಾತ್ರ ವಹಿಸಲಿ: ಶ್ರೀ ಶರಣಬಸವ ಮಹಾಸ್ವಾಮಿಗಳು


ಕೊಪ್ಪಳ: ನೂತನ ವಿನಯವಾಣಿ ಕನ್ನಡ ದಿನಪತ್ತಿಕೆಯ ಬಿಡುಗಡೆ ಸಮಾರಂಭವು ದಿ೧೫ ರಂದು ಮಂಗಳವಾರ ಬೆಳಿಗ್ಗೆ ೧೧.೩೦ ಗಂಟೆಗೆ ನಗರದ ತಾಲೂಕ ಪಂಚಾಯತ ಸಭಾಂಗಣದಲ್ಲಿ ನೇರವೇರಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಕಾಲಜ್ಞಾನ ಬ್ರಹ್ಮ ಸದ್ಗುರು ಶ್ರೀ ಶರಣಬಸವ ಮಹಾಸ್ವಾಮಿಗಳು, ವೀರೇಶ್ವರ ಮಠ ಟಣಕನಕಲ್ ಮಾತನಾಡಿ ದಿನ ನಿತ್ಯ ನಡೆತಯವ ಪ್ರಚಲಿತ ಮಾಹಿತಿಯನ್ನು ಅರೆ ಗಳಿಗೆಯಲ್ಲಿ ಬಿತ್ತರಿಸುವ ಇಂದಿನ ಆಧುನಿಕ ಜಗತ್ತಿನಲ್ಲಿ ದೃಶ್ಯ ಮಾಧ್ಯಮದ ಭರಾಟೆಯಲ್ಲಿ ಪತ್ರಿಕೆ ಮಾಧ್ಯಮ ಸೊರಗಿದ್ದರೂ ಮನುಷ್ಯನ ಅಂತಃಕರಣ ಶುದ್ಧಿಗೆ ಪತ್ರಿಕೆ ಅತ್ಯವಶ್ಯಕವಾಗಿದೆ. ಮಾನವನು ಸುಖ ದುಖಃಗಳನ್ನು ಪರಿಹರಿಸಲು ಭಗವಂತ ಮೋರೆ ಇಡುತ್ತಾನೆ. ಆದರೆ ಸಮುದಾಯವು ಸನ್ನಡೆತೆಯ ಮಾರ್ಗದಲ್ಲಿ ಸಂಚರಿಸಬೇಕಾದರೆ ಪತ್ರಿಕೆಯ ಜಬ್ದಾರಿಯು ಅವಲಂಬಿತವಾಗಿರುತ್ತದೆ. ವಿನಯ ವಾಣಿ ಹೆಸರು ಸೂಚಿಸುವಂತೆ ವಿನಯ ದೊಂದಿಗೆ ಬ್ರಷ್ಟಾಚಾರ, ಅರಾಜಕತೆ, ಅನ್ಯಾಯದ ವಿರುದ್ಧ ಹೋರಾಡುವ ಪ್ರಮುಖ ಅಸ್ತ್ರವಾಗಿ ಹೋರ ಹೊಮ್ಮುವುದರೊಂದಿಗೆ, ಬಡವರ, ರೈತರ, ದೀನ-ದಮನಿತರ ನೋವುಗಳಿಗೆ ಸ್ಪಂದಿಸುವುದರ ಜೊತೆಯಲ್ಲಿ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಲಿ ಎಂದು ಆರ್ಶೀವಚನ ನೀಡಿದರು.
ಭಾ.ಜ.ಪ ಮುಖಂಡ ಅಮರೇಶ ಕರಡಿ ಉದ್ಘಾಟಿಸಿ ಮಾತನಾಡಿ ಪತ್ರಿಕಾರಂಗವು ಒಂದು ಪವಿತ್ರವಾದ ಕ್ಷೇತ್ರವಾಗಿದೆ. ನ್ಯಾಯ, ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ, ರವಿ ಕಾಣದ್ದನ್ನು ಕವಿ ಕಂಡ ಹಾಗೆ ರಾಜಕಾರಣಿ ಕಾಣದ್ದನ್ನು ಪತ್ರಕರ್ತ ಕಂಡು ಅವರ ಕಣ್ಣು ತೆರೆಸುವ ಕೆಲಸಮಾಡಬೇಕು. ಮಾನವ ಮಗುವಾಗಿ ಜನಿಸುತ್ತಾನೆ. ಆದರೆ ಬೆಳೆಯುತ್ತಾ ಅವನ ಕಾರ್ಯದಿಂದ ಹೆಸರು ಮಾಡುತ್ತಾನೆ. ಅದೆ ರೀತಿ ಈ ವಿನಯವಾಣಿ ಕನ್ನಡ ದಿನ ಪತ್ರಿಕೆಯು ಇಂದು ಕೊಪ್ಪಳ ಜಿಲ್ಲೆಯಲ್ಲಿ ಜನಿಸಿದೆ. ಮುಂದೆ ಇದರ ಬಾಹುಗಳು ರಾಜ್ಯ ವ್ಯಾಪಿ ಪಸರಿಸಲಿ ಎಂದು ಆಶಿಸಿದರು.
ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಭಾ.ಜ.ಪ ರಾಷ್ಟಿಯ ಪರಿಷತ ಸದಸ್ಯ ಸಿ.ವ್ಹಿ.ಚಂದ್ರುಶೇಖರ ಮಾತನಾಡಿ ಪತ್ರಿಕೋದ್ಯಮ ಮತ್ತು ತಂತ್ರಜ್ಞಾನ ಒಂದಕ್ಕೊಂದು ಸಮನಾಂತರವಾಗಿ ಬೆಳೆಯದ ಕಾರಣ ಹಲವು ಸಮಸ್ಯೆಗಳನ್ನು ದೇಶ ಎದರಿಸುತ್ತಿದೆ. ಆದರೆ ಈ ಎರಡು ಅಸ್ತ್ರಗಳು ಪ್ರಬಲವಾದರೆ ಪ್ರಬುದ್ಧ ಸಮಾಜದ ನಿರ್ಮಾಣವಾಗುತ್ತದೆ ಎಂದರು.
ಕಾಂಗ್ರೇಸ್ ಮುಖಂಡ ಹಾಗೂ ರಾ.ಬ.ಕೊ. ಹಾಲು ಉತ್ಪಾದಕರ ಸಂಘದ ನಿರ್ದೇಶಕರಾದ ವೆಂಕನಗೌಡ ಹಿರೇಗೌಡರ ಮಾತನಾಡಿ ವಿನಯವಾಣಿ ಪತ್ರಿಕೆಯು ನಿಸ್ಪಕ್ಷಾತೀತ ವರದಿ ಮಾಡುತ್ತ ಸಮಾಜದ ಡೊಂಕುಗಳನ್ನು ಸರಿದಾರಿಗೆ ತರುವಲ್ಲಿ ಹೊರಹೊಮ್ಮಲಿ, ಶಾಸಕಾಂಗ, ಕಾರ್ಯಾಂಗ ಮಾಡುವ ಲೋಪಗಳನ್ನು ತಿದ್ದುವ ಕೆಲಸ ಮಾಡುತ್ತಾ ದೈನಂದಿನ ಜಾತಾ ಸುದ್ಧಿ ತರುವತ್ತ ಗಮನಹರಿಸಬೇಕು ಎಂದರು. ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಒತ್ತುಕೊಡುವ ಕೆಲಸವಾಗಲಿ ಎಂದರು.ಕಾರ್ಯಕ್ರಮದಲ್ಲಿ ಶ್ರೀ ಗವಿಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ|| ಸಿದ್ದಲಿಂಗಪ್ಪ ಕೊಟ್ನೇಕಲ್ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಕ ದರ್ಶನ ದಿನಪತ್ರಿಕೆಯ ಜಿಲ್ಲಾ ವರಿದಿಗಾರಾದ ಎಮ್.ಸಾದಿಕ ಅಲಿ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಗರಸಭೆ ಮಾಜಿ ಅಧ್ಯಕ್ಷರಾದ ಚಂದ್ರುಶೇಖರ ಕವಲೂರ, ಪಂಚಮಸಾಲಿ ಸಂಘದ ರಾಜ್ಯ ಉಪಾಧ್ಯಕ್ಷರಾದ ಸಂಗಮೇಶ ಬಾದವಾಡಗಿ, ಪಂಚಮಸಾಲಿ ಸಂಘದ ಜಿಲ್ಲಾ ಯುವಘಟಕದ ಅಧ್ಯಕ್ಷರಾದ ಶೇಖರಪ್ಪ ಮುತ್ತೆನವರ, ರಾಷ್ಟ್ರೀಯ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ಡಾ|| ಬಿ.ಜ್ಞಾನಸುಂದರ, ದಲಿತ ಮುಖಂಡರಾದ ಚನ್ನಬಸಪ್ಪ ಹೊಳೆಯಪ್ಪನವರ, ಎಸ್.ಸಿ ಎಸ್.ಟಿ ಸಿವಿಲ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷರಾದ ಹನುಮೇಶ ಕಡೇಮನಿ, ಕ.ಕಾ.ನಿ.ಪ.ಸಂ ಜಿಲ್ಲಾಧ್ಯಕ್ಷರಾದ ದೇವು ನಾಗನೂರು, ಸುದಿನ ಪತ್ರಿಕೆಯ ಸ್ಥಾನಿಕ ಸಂಪಾದಕರಾದ ಹರೀಶ ಎಚ್.ಎಸ್. ಕನ್ನಡಪ್ರಭ ದಿನಪತ್ರಿಕೆಯ ಜಿಲ್ಲಾ ವರದಿಗಾರರಾದ ಸೋಮರಡ್ಡಿ ಅಳವಂಡಿ, ಕೋಟೆ ಕದಂಬ ಪತ್ರಿಕೆ ಸಂಪಾದಕ ನಿಂಗಪ್ಪ ದೊಡ್ಡಮನಿ, ಭಾ.ಜ.ಪ ಮುಖಂಡ ದೇವರಾಜ ಹಾಲಸಮುದ್ರ, ವಿನಯವಾಣಿ ಪತ್ರಿಕೆ ಸಂಪಾದಕ ಬಸವರಾಜ ತಿಪ್ಪಣ್ಣವರ, ಸಹ ಸಂಪಾದಕ ಬಿ.ಗಿರೀಶಾನಂದ, ವಹಿಸಿದ್ದರು.
ಪ್ರಾಸ್ತಾವಿಕವಾಗಿ ಗಣೇಶ ಹೊರತ್ಟ್ನಾಳ ಮಾತನಾಡಿದರು, ವೈ.ಬಿ ಜೂಡಿ ಪ್ರಾರ್ಥಿಸಿದರು, ಎಚ್.ಎಸ್.ಹೊನ್ನುಂಚಿ ಸ್ವಾಗತಿಸಿದರು, ಹನುಮೇಶ ಮ್ಯಾಗಳಮನಿ ನಿರೂಪಿಸಿದರು

Please follow and like us:
error