ಪತ್ರಕರ್ತ ರವಿಬೆಳೆಗೆರೆ ಅನಿಲ್‌ರಾಜ್ ಬಂಧನ ಖಂಡನೀಯ

ಕೊಪ್ಪಳ: ಕಿಮ್ಮನೆ ರತ್ನಾಕರ ಅಧ್ಯಕ್ಷತೆಯ ಸದನ ಹಕ್ಕು ಬಾಧ್ಯತ ಸಮಿತಿ ಮಂಡಿಸಿರುವ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಹಾಗೂ ಯಲಹಂಕ ವಾಯ್ಸ್ ಪತ್ರಿಕೆಯ ಪತ್ರಕರ್ತ ಅನಿಲ್‌ರಾಜ್ ಅವರನ್ನು ಹಕ್ಕು ಚ್ಯುತಿ ಆರೋಪದಡಿ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿರುವುದು ಖಂಡನೀಯ ಎಂದು ಕೊಪ್ಪಳ ಮೀಡಿಯಾ ಕ್ಲಬ್ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಬುಧವಾರ ಮನವಿ ಸಲ್ಲಿಸಿದೆ.

ಹಾಲಿ ಸ್ಪೀಕರ್ ಕೆ.ಬಿ ಕೋಳಿವಾಡ ಹಾಯ್ ಬೆಂಗಳೂರು ಮತ್ತು ಯಲಂಹಕ ವಾಯ್ಸ್ ಪತ್ರಿಕೆಗಳಲ್ಲಿ ಪ್ರಕಟಗೊಂಡ ಶಿರುಗುಪ್ಪ ಶಾಸಕ ಬಿ.ಎಂ ನಾಗರಾಜ್ ಅವರು ಸಲ್ಲಿಸಿದ ದೂರಿನ ಹಿನ್ನಲೆಯಲ್ಲಿ ಸದನವು ಹಕ್ಕು ಭಾದ್ಯತ ಸಮಿತಿಯನ್ನು ರಚಿಸಿ ರವಿಬೆಳಗೆರಿ ಮತ್ತು ಅನಿಲ್‌ರಾಜ್ ಅವರ ಮೇಲೆ ಕೈಗೊಂಡಿರುವ ನಿರ್ಣಯ ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆಯನ್ನುಂಟು ಮಾಡಿದೆ. ಸಂವಿಧಾನವನ್ನು ಮೀರಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ ಇದು ಖಂಡನೀಯ ಎಂದು ಮೀಡಿಯಾ ಕ್ಲಬ್ ಸದಸ್ಯರು ತಿಳಿಸಿದ್ದಾರೆ.

ಮಾನ ಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ರವಿ ಬೆಳಗೆರಿಯನ್ನು ಬಂಧಿಸುವಂತೆ ಪೊಲೀಸ್‌ರಿಗೆ ಸೂಚಿಸಿದೆ. ಮಾನಹಾನಿ ಆಗಿದ್ದರೆ ಕೋರ್ಟ್ ಇದೆ ಅಲ್ಲಿ ಮಾನಹಾನಿ ಮತ್ತು ಮಾನನಷ್ಟ ಮೊಕದ್ದಮೆ ಹೂಡಬಹುದು. ಆದರೆ ಹಕ್ಕು ಬಾಧ್ಯತೆಗಳ ಸಮಿತಿಯು ರವಿಬೆಳೆಗೆರೆ ಮತ್ತು ಅನಿಲ್‌ರಾಜ್‌ರಿಗೆ ಒಂದು ವರ್ಷ ಜೈಲು ಹಾಗೂ ೧೦ ಸಾವಿರ ರೂ. ದಂಡ ವಿಧಿಸಿ ಕೈಗೊಂಡಿರುವ ನಿರ್ಣಯ ಮತ್ತು ಪೊಲೀಸರು ಪತ್ರಕರ್ತರಿಬ್ಬರನ್ನು ಬಂಧಿಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಕೊಪ್ಪಳ ಮೀಡಿಯಾ ಕ್ಲಬ್ ಮನವಿಯಲ್ಲಿ ತಿಳಿಸಿದೆ.
ಕೂಡಲೇ ಈ ತೀರ್ಮಾನವನ್ನು ಹಿಂದಕ್ಕೆ ಪಡೆದು ಮಾಧ್ಯಮ ಸ್ವಾತಂತ್ರ್ಯದ ಘನತೆಯನ್ನು ಕಾಪಾಡಬೇಕೆಂದು ಅಪರ ಜಿಲ್ಲಾಧಿಕಾರಿ ರುದ್ರೇಶ್ ಘಾಳಿ ಅವರಿಗೆ ಕೊಪ್ಪಳ ಮೀಡಿಯಾ ಕ್ಲಬ್ ಸದಸ್ಯರು ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮೀಡಿಯಾ ಕ್ಲಬ್ ಅಧ್ಯಕ್ಷ ಗಂಗಾಧರ ಬಂಡಿಯಾಳ್, ಗೌರವ ಅಧ್ಯಕ್ಷ ಬಸವರಾಜ ಬಿನ್ನಾಳ, ಕಾರ್ಯಾದರ್ಶಿ ಸೋಮರೆಡ್ಡಿ ಅಳವಂಡಿ, ಶರಣಪ್ಪ ಬಾಚಾಲಪುರ, ಸದಸ್ಯರಾರ ದತ್ತು ಕಮ್ಮಾರ, ತಿಪ್ಪನಗೌಡ ಮಾಲೀಪಾಟಿಲ್, ರವೀಂದ್ರ ವಿ ಕೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Please follow and like us:

Leave a Reply