ಪತ್ರಕರ್ತ ಮುರಳೀಧರ ದೇಶಪಾಂಡೆ ನಿಧನ

ಕೊಪ್ಪಳ ,ಜೂನ್ 18:
ಪತ್ರಿಕಾರಂಗದಲ್ಲಿ ಹಲವು ವರ್ಷಗಳ ಕಾಲ ಸೇವೆಗೈದಿದ್ದ ಮುರಳೀಧರ ದೇಶಪಾಂಡೆ(57) ಇಂದು ಜೂನ್ 18 ರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು.
ಮೂಲತಃ ಗದಗಿನವರಾದ ಇವರು, ಕೊಪ್ಪಳದಲ್ಲಿ ಪ್ರಪ್ರಥಮ ಸ್ಥಳೀಯ ದಿನಪತ್ರಿಕೆಯಾಗಿ ನಾಗರಿಕ ಪತ್ರಿಕೆ ಪ್ರಕಟವಾಗಲು ಶ್ರಮಿಸಿದ್ದರು.
ಮೃತರು ಪತ್ನಿ ,ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ಜೂನ್ 18 ರ ಮಧ್ಯಾಹ್ನ 1 ಗಂಟೆಗೆ ಕೊಪ್ಪಳದಲ್ಲಿ ಜರುಗಲಿದೆ.

ಮನೆ ವಿಳಾಸ: ಡಾ.ಕೆ.ಜಿ.ಕುಲಕರ್ಣಿ ಆಸ್ಪತ್ರೆ ಹತ್ತಿರ, ಸಿಂಪಿ ಲಿಂಗಣ್ಣ ರಸ್ತೆ ಕೊಪ್ಪಳ
ಸಂಪರ್ಕ ಸಂಖ್ಯೆ: 9880828933

Please follow and like us:
error