ಪಡಿತರ ಚೀಟಿ ಹೊಂದಿರದ ವಲಸೆ ಕಾರ್ಮಿಕರಿಗೆ ಪಡಿತರ ವಿತರಣೆ: ಡಿಸಿ


ಕೊಪ್ಪಳ   ಕೋವಿಡ್-19 ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಷ್ಟಿçÃಯ ಆಹಾರ ಭದ್ರತೆ ಕಾಯ್ದೆ ಹಾಗೂ ರಾಜ್ಯದ ಸಾರ್ವಜನಿಕ ವಿತರಣಾ ಪದ್ಧತಿ ಅಡಿಯಲ್ಲಿ ಒಳಪಡದ (ಪಡಿತರ ಚೀಟಿ ಹೊಂದಿರದ) ಕೋವಿಡಡ-19 ತುರ್ತು ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರಿಗೆ ಸರ್ಕಾರದ ಮಾರ್ಗಸೂಚಿಯನ್ವಯ ಪಡಿತರ ವಿತರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತ ಯೋಜನೆಯಡಿ ಮೇ-2020 ಮಾಹೆಯಿಂದ ಪ್ರಾರಂಭವಾಗುವAತೆ ಮೇ ಮತ್ತು ಜೂನ್ ಮಾಹೆಗಳಿಗೆ ಪ್ರತಿ ವಲಸಿಗರಿಗೆ ಪ್ರತಿ ಮಾಹೆಗೆ ತಲಾ 5 ಕೆ.ಜಿ ಅಕ್ಕಿ ಹಾಗೂ ಪ್ರತಿ ವಲಸಿಗನಿಗೆ 1 ಕೆ.ಜಿ ಕಡಲೆಕಾಳು ಹಂಚಿಕೆ ಮಾಡಲಾಗುವುದು.
ರಾಷ್ಟಿçÃಯ ಆಹಾರ ಭದ್ರತೆ ಕಾಯ್ದೆ ಅಡಿ ಅಥವಾ ರಾಜ್ಯದ ಸಾರ್ವಜನಿಕ ವಿತರಣಾ ಪದ್ಧತಿಯಡಿ ಒಳಪಡದ (ಪಡಿತರ ಚೀಟಿ ಹೊಂದಿರದ) ಕುರಿತು ವಲಸಿಗ ಫಲಾನುಭವಿಗಳ ಆಧಾರ ಕಾರ್ಡ ಸಂಖ್ಯೆಯನ್ನು ಪಡೆದು ತಂತ್ರಾAಶದಲ್ಲಿ ಪರಿಶೀಲಿಸಿಕೊಂಡು, ಫಲಾನುಭವಿಯ ಮೊಬೈಲ್ ಸಂಖ್ಯೆಗೆ ಬರುವ ಓ.ಟಿ.ಪಿ ಯನ್ನು ದತ್ತಾಂಶದಲ್ಲಿ ನಮೂದಿಸಿದ ನಂತರವೇ ಪಡಿತರ ಹಂಚಿಕೆ ಮಾಡಲಾಗುವುದು.
ಮೇ ತಿಂಗಳಿನಲ್ಲಿ ಆಹಾರ ಧಾನ್ಯಗಳನ್ನು ಪಡೆಯದೆ ಇರುವ ವಲಸಿಗ ಫಲಾನುಭವಿಗಳು ಜೂನ್ ತಿಂಗಳಿನಲ್ಲಿ ಒಟ್ಟು 10 ಕೆ.ಜಿ ಅಕ್ಕಿ ಮತ್ತು 2 ಕೆ.ಜಿ ಕಡಲೆಕಾಳು ಪಡೆಯಲು ಅರ್ಹರಿರುತ್ತಾರೆ. ಆದರೆ ಮೇ ತಿಂಗಳಿನಲ್ಲಿ ಪಡಿತರ ಹಂಚಿಕೆ ಪಡೆದಿರುವ ಫಲಾನುಭವಿಗಳಿಗೆ ಜೂನ್ ತಿಂಗಳಿನಲ್ಲಿ 5 ಕೆ.ಜಿ ಅಕ್ಕಿ ಮತ್ತು 1 ಕೆ.ಜಿ ಕಡಲೆಕಾಳು ಪಡೆಯಲು ಮಾತ್ರ ಅರ್ಹರಾಗಿರುತ್ತಾರೆ.
ಹಂಚಿಕೆ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ನೀಡಿರುವ ಸಾಮಾಜಿಕ ಅಂತರ ಹಾಗೂ ಇತರೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಫಲಾನುಭವಿ ವಲಸಿಗರು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪಡಿತರ ಧಾನ್ಯಗಳನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error